ಧಾರವಾಡ –
2021-22ನೇ ಸಾಲಿನ ಮುಂಗಾರು ಹಂಗಾಮಿನ ಕೇಂದ್ರ ಸರ್ಕಾರದ ಬೆಂಬಲ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಹೆಸರುಕಾಳು ಹಾಗೂ ಉದ್ದಿನಕಾಳು ಉತ್ಪನ್ನಗಳ ಖರೀದಿ ಕೇಂದ್ರವನ್ನು ಧಾರವಾಡ ಹೊಸ ಎಪಿಎಂಸಿ ಪ್ರಾಂಗಣದಲ್ಲಿ ಸೆಪ್ಟೆಂಬರ್ 20 ರಿಂದ ಖರೀದಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ.ಧಾರವಾಡ ತಾಲೂಕಿನ ಎಲ್ಲಾ ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು.
ಉದ್ಘಾಟನಾ ಸಮಾರಂಭದಲ್ಲಿ ಎ.ಪಿ.ಎಂ.ಸಿ ಅಧ್ಯಕ್ಷ ಚನ್ನವೀರಗೌಡ ಮಲ್ಲಿಕಾರ್ಜುನಗೌಡ ಪಾಟೀಲ ಹಾಗೂ ಉಪಾಧ್ಯಕ್ಷ ಕೃಷ್ಣಾ ಕೊಳ್ಳಾನಟ್ಟಿ ಸದಸ್ಯರುಗಳಾದ ಸಿದ್ದಪ್ಪ ಪ್ಯಾಟಿ,ಬಸಪ್ಪ ಶಂಕ್ರಪ್ಪ ಹೊಸೂರು, ರಮೇಶ ತಳಗೇರಿ, ಮಡಿವಾಳಪ್ಪ ಇಸರಣ್ಣವರ ಬಿನ್ ಬಸವಣೆಪ್ಪ,ಕಾರ್ಯದರ್ಶಿ ವಿ. ಜಿ. ಹಿರೇಮಠ ಹಾಗೂ ಟಿಎಪಿಸಿಎಂಸಿ ಅಧ್ಯಕ್ಷ ಎಂ.ಸಿ. ಹುಲ್ಲೂರ, ಉಪಾಧ್ಯಕ್ಷ ರಾಮಣ್ಣ ಕಣಾಜಿ, ಶಂಕರ ಮುಗದ ಧಾರವಾಡ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಹಾಗೂ ಟಿಎಪಿಸಿಎಂಎಸ್ ನಿರ್ದೇಶಕ ಶಂಕರಯ್ಯ ಮಠಪತಿ, ಮುಖ್ಯ ಕಾರ್ಯ ನಿರ್ವಾಹಕ ಎಸ್. ಬಿ. ಕೆಲಗೇರಿ ಮುಂತಾದವರು ಉಪಸ್ಥಿತರಿದ್ದರು.
ಎಫ್.ಎ.ಕ್ಯೂ. ಗುಣಮಟ್ಟದ ಹೆಸರುಕಾಳು ಉತ್ಪನ್ನ ವನ್ನು ಖರೀದಿಸಲು ಅಗತ್ಯವಿರುವ ದಾಖಲೆಗಳು ಆಧಾರ ಗುರುತಿನ ಚೀಟಿಯ ಮೂಲ ಪ್ರತಿ ಹಾಗೂ ಅದರ ನಕಲು ಪ್ರತಿ, ಪಹಣಿ ಪತ್ರಿಕೆಯಲ್ಲಿರುವ ಹೆಸರಿನ ರೈತರ ಆಧಾರ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆ ಪಾಸ್ ಪುಸ್ತಕದ ನಕಲು ಪ್ರತಿ, ರೈತರ ನೋಂದಣಿಯನ್ನು ಖರೀದಿ ಕೇಂದ್ರಗಳಲ್ಲಿ ಮೇಲ್ಕಂ ಡ ದಾಖಲೆಗಳೊಂದಿಗೆ ಆಗಸ್ಟ್ 26 ರಿಂದ 45 ದಿನಗಳೊಳಗಾಗಿ ಮಾಡಿಕೊಳ್ಳಲಾಗುವುದು. ನಂತರ ನವೆಂಬರ್ 24 ರವರೆಗೆ ಖರೀದಿ ಪ್ರಕ್ರಿಯೇ ನಡೆಯುತ್ತದೆ.
ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಎಫ್.ಎ.ಕ್ಯೂ.ಗುಣಮಟ್ಟದ ಹೆಸರುಕಾಳು & ಉದ್ದಿನಕಾಳು ಉತ್ಪನ್ನವನ್ನು ಖರೀದಿಸಲು ಅನುಸರಿಸುವ ಕ್ರಮಗಳು – ಹೆಸರುಕಾಳು ಹಾಗೂ ಉದ್ದಿನಕಾಳು ಉತ್ಪನ್ನದ ಎಫ್.ಎ.ಕ್ಯೂ. ಗುಣ ಮಟ್ಟ ಅಂದರೆ ಚೆನ್ನಾಗಿ ಒಣಗಿರಬೇಕು, ತೇವಾಂ ಶವು ಶೇ.12 ಕ್ಕಿಂತ ಕಡಿಮೆ ಇರಬೇಕು. ಹೆಸರು ಕಾಳು ಉತ್ಪನ್ನದ ಗುಣಮಟ್ಟದ ಗಾತ್ರ, ಬಣ್ಣ ಹಾಗೂ ಆಕಾರವನ್ನು ಹೊಂದಿರಬೇಕು. ಗಟ್ಟಿಯಾಗಿರಬೇಕು ಮತ್ತು ಮಣ್ಣಿನಿಂದ ಬೇರ್ಪಡಿಸಲ್ಪಟ್ಟು ಸ್ವಚ್ಛವಾಗಿರ ಬೇಕು,ಕ್ರಿಮಿಕೀಟಗಳಿಂದ ಮುಕ್ತವಾಗಿರಬೇಕು. ರೈತರಿಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದವರು ನೀಡಿದ ಗೋಣಿ ಚೀಲದಲ್ಲಿ 50 ಕೆ.ಜಿ. ಪ್ರಮಾಣದಲ್ಲಿ ತುಂಬಬೇಕು. ಹೆಸರು ಕಾಳು ಪ್ರತಿ ಎಕರೆಗೆ 4 ಕ್ವಿಂಟಾಲ್‍ನಂತೆ ಪ್ರತಿ ರೈತರಿಂದ ಗರಿಷ್ಟ 6 ಕ್ವಿಂಟಾಲ್ ಪ್ರಮಾಣದ ಎಫ್‍ಎಕ್ಯೂ ಗುಣಮಟ್ಟದ ಹೆಸರುಕಾಳು ಉತ್ಪನ್ನ ವನ್ನು ಖರೀದಿಸಲಾಗುವುದು.
ಉದ್ದಿನಕಾಳು ಪ್ರತಿ ಎಕರೆಗೆ 3 ಕ್ವಿಂಟಾಲ್‍ನಂತೆ ಪ್ರತಿ ರೈತರಿಂದ ಗರಿಷ್ಠ 6 ಕ್ವಿಂಟಾಲ್ ಪ್ರಮಾಣದ ಎಫ್‍ಎಕ್ಯೂ ಗುಣಮಟ್ಟದ ಹೆಸರುಕಾಳು ಉತ್ಪನ್ನ ವನ್ನು ಖರೀದಿಸಲಾಗುವುದು.ಸರ್ಕಾರದ ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್‍ಗೆ ರೂ.7,275/- ರಂತೆ ಹೆಸರು ಕಾಳು ಖರೀದಿಸಲಾಗುವುದು.ಸರ್ಕಾರದ ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್‍ಗೆ ರೂ.6,300/- ರಂತೆ ಉದ್ದಿನ ಕಾಳನ್ನು ಖರೀದಿಸಲಾಗುವುದು.ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಿಗ್ಗೆ 9 ರಿಂದ ಸಾಯಂಕಾಲ 6 ರ ವರೆಗೆ ಮಾತ್ರ ಖರೀದಿಸಲಾಗುವುದು.ಖರೀದಿ ಕೇಂದ್ರಕ್ಕೆ ಬರುವ ಮೊದಲು ರೈತರು ಮಾಸ್ಕ್ ಧರಿಸಿ ಬರಬೇಕು. ರೈತರು ಮಾರಾಟಕ್ಕೆ ಬರವ ಮೊದಲು ನೋಂದಣಿ ಮಾಡಿಸತಕ್ಕದ್ದು.ಮಾರಾಟಕ್ಕೆ ಗರಿಷ್ಠ ಇಬ್ಬರು ಮಾತ್ರ (ಡ್ರೈವರ ಮತ್ತು ರೈತ) ಬರತಕ್ಕದ್ದು.
ಎಂಎಸ್‍ಪಿ ಮಾರ್ಗಸೂಚಿಗಳ ಪ್ರಕಾರ ಎಫ್‍ಎಕ್ಯೂ ಗುಣಮಟ್ಟದ ಹುಟ್ಟುವಳಿಯನ್ನು ಮಾತ್ರ ಖರೀದಿಸ ಲಾಗುವುದು.ಎಫ್‍ಎಕ್ಯೂಗಿಂತ ಕಡಿಮೆ ಗುಣಮ ಟ್ಟದ ಹುಟ್ಟುವಳಿಯನ್ನು ತಿರಸ್ಕರಿಸಲಾಗುವುದು. ರೈತನು ಅಗತ್ಯವಿರುವ ದಾಖಲೆಗಳ ಝರಾಕ್ಸ್‍ನ 3 ಪ್ರತಿಗಳನ್ನು ತರತಕ್ಕದ್ದು (ಆಧಾರ ಕಾರ್ಡ, ಬ್ಯಾಂಕ ಪಾಸ್ ಬುಕ್, ಚಾಲ್ತಿ ಪಹಣಿ ಪ್ರತಿಕೆ ಬೆಳೆಯ ಧೃಡೀ ಕರಣದೊಂದಿಗೆ) ಸೋಪ್ ಅಥವಾ ಸ್ಯಾನಿಟೇಜರ್ ಮೂಲಕ ಪದೇ ಪದೇ ಕೈಗಳನ್ನು ತೊಳೆದುಕೊಳ್ಳ ಬೇಕು.ಗುಂಪು ಗುಂಪಾಗಿ ಸೇರದೆ ಕನಿಷ್ಟ 4 ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳತಕ್ಕದ್ದು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.