ಹುಬ್ಬಳ್ಳಿ –
ಬೆಲೆ ಏರಿಕೆ ವೇತನ ಹೆಚ್ಚಳವಾದರು ಹೆಚ್ಚಾಗದ ಚಿಗರಿ ಬಸ್ ಚಾಲಕರ ಇನ್ಸೆಂಟಿವ್ – ಆರಂಭದ ಲ್ಲಿದ್ದ ಪ್ರೋತ್ಸಾಹ ಹಣ ಈಗಲೂ ಅಷ್ಟೇ ಇದೆ ಆರು ವರ್ಷಗಳ ಹಿಂದೆ ಇದ್ದ ದರ ಈಗ ಎಲ್ಲವೂ ಹೆಚ್ಚಾಗಿದ್ದು ಇನ್ನೂ ಯಾಕೇ ಇನ್ಸೆಂಟಿವ್ ಹೆಚ್ಚಳ ಮಾಡಿಲ್ಲ DC ಸಾಹೇಬ್ರೆ ಇದು ನಿಮ್ಮ ಗಮನಕ್ಕೆ ಇಲ್ಚಾ
ದುಬಾರಿಯಾದ ಇಂದಿನ ದುನಿಯಾದಲ್ಲಿ ಐದು ನೂರು ಸಾವಿರ ರೂಪಾಯಿ ಏನು ಬರೋದಿಲ್ಲ ಇಂತಹ ವ್ಯವಸ್ಥೆಯಲ್ಲಿ ಹುಬ್ಬಳ್ಳಿ ಧಾರವಾಡ ಮಧ್ಯೆ ಸಂಚಾರ ಮಾಡುತ್ತಿರುವ ಚಿಗರಿ ಬಸ್ ಚಾಲಕರಿಗೆ ಆರಂಭದಲ್ಲಿ ಇದ್ದ ಇನ್ಸೆಂಟಿವ್ ಭತ್ಯೆಯನ್ನು ಈಗಲೂ ಅಷ್ಟೇ ನೀಡಲಾಗುತ್ತಿದೆ.
ಹೌದು ಹೊಸದಾಗಿ ಐದು ವರ್ಷಗಳ ಹಿಂದೆ ಚಾಲಕರನ್ನು ಹುರುದುಂಬಿಸಿ ಈ ಒಂದು ವಿಭಾಗಕ್ಕೆ ಕರೆದುಕೊಂಡು ಬರಲಾಯಿತು. ಹಿರಿಯ ಅಧಿಕಾರಿಗಳ ಮನವಿಗೆ ಸ್ಪಂದಿಸಿ ಚಾಲಕರು ಕೂಡಾ ಬಂದು ಬಸ್ ಗಳು ಹಾಳಾಗಿದ್ದರು ಏನೇಲ್ಲಾ ಸಮಸ್ಯೆಗಳು ಇದ್ದರು ಸೌಲಭ್ಯಗಳು ಇರದಿದ್ದರೂ ಕೂಡಾ ಪ್ರಾಮಾಣಿ ಕವಾಗಿ ಕರ್ತವ್ಯವನ್ನು ಮಾಡುತ್ತಿದ್ದಾರೆ ಹೀಗಿರು ವಾಗ ಐದಾರು ವರ್ಷಗಳ ಹಿಂದೆ ಇದ್ದ ಮನೆ ಬಾಡಿಗೆ,ಪೆಟ್ರೋಲ್ ಬೆಲೆ,ಚಹಾ ಬೆಲೆ, ಉಪಹಾರದ ಬೆಲೆ,ತರಕಾರಿ,ಹೀಗೆ ಯಾವುದು ಕೂಡಾ ಇಲ್ಲ
ಎಲ್ಲವೂ ಬೆಲೆ ಏರಿಕೆಯಾಗಿವೆ ಆದರೆ ಈ ಹಿಂದೆ ಇದ್ದ ಇರುವ ಇನ್ಸೆಂಟಿವ್ ನ್ನು ಈಗಲು ಅಷ್ಟೇ ನೀಡಲಾಗುತ್ತಿದೆ.ಪ್ರತಿದಿನ ಜನರಲ್ ಮಾಡುವ ಚಾಲಕರಿಗೆ 75 ರೂಪಾಯಿ,ಅದೇ ಜನರಲ್ ಎಬಿ ಮಾಡುವ ಚಾಲಕರಿಗೆ 100 ರೂಪಾಯಿಯನ್ನು ಪ್ರೋತ್ಸಾಹದ ಹಣವನ್ನಾಗಿ ನೀಡಲಾಗುತ್ತಿದೆ. ತುಂಬಾ ಕಡಿಮೆಯಾಗಿರುವ ಈ ಒಂದು ಇನ್ಸೆಂಟಿವ್ ಹಣವನ್ನು ಯಾಕೆ ಹೆಚ್ಚಳ ಮಾಡಿಲ್ಲ ಕಡಿಮೆ ಹಣದಲ್ಲಿ ಇಂದು ಒಂದು ಸಸ್ಯಹಾರಿ ಊಟವೂ ಬರಲಾರದಂತಹ ಬೆಲೆ ಏರಿಕೆಯಾ ಗಿದ್ದು
ಎಲ್ಲವೂ ಬೆಲೆ ಏರಿಕೆಯಾದರೆ ಚಾಲಕರಿಗೆ ಐದಾರು ವರ್ಷಗಳ ಹಿಂದೆ ಇದ್ದ ಇನ್ಸೆಂಟಿವ್ ಯಾಕೆ ಏರಿಕೆ ಮಾಡಿಲ್ಲ ಇದನ್ನು ಒಮ್ಮೆ ನೋಡಿ ಡಿಸಿ ಸಾಹೇಬ್ರೆ ಇಂತಹ ಒಳ್ಳೇಯ ಕೆಲಸಗಳನ್ನು ಮಾಡಿ ಚಾಲಕರ ಪ್ರೀತಿಗೆ ಗೌರವಕ್ಕೆ ಪಾತ್ರವಾಗಿ ಅದನ್ನು ಬಿಟ್ಟು ಮಾಧ್ಯಮದವರಿಗೆ ಸುದ್ದಿ ಮಾಹಿತಿ ಯಾರು ಕೊಡುತ್ತಿದ್ದಾರೆ.
ಯಾವ ಚಾಲಕ ಎಷ್ಟು ಸಿಗ್ನಲ್ ಜಂಪ್ ಮಾಡುತ್ತಾರೆ.ಯಾರು ಯಾರು ಏನೇನು ತಪ್ಪು ಮಾಡುತ್ತಿದ್ದಾರೆ ಇಂತಹ ಚಿಲ್ಲರೆ ಕೆಲಸಗಳನ್ನ ಇನ್ನಾದರೂ ಬಿಡಿ ಇದನ್ನೇಲ್ಲವನ್ನು ಒಮ್ಮೆ ನೋಡಿ ಸಮಸ್ಯೆಯನ್ನು ಆಲಿಸಿ ಈ ಒಂದು ನಿರೀಕ್ಷೆಯಲ್ಲಿ ಚಾಲಕರು ಇದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..