ಹುಬ್ಬಳ್ಳಿ –
ಕೊರೊನಾ ವಾರಿಯರ್ಸ್ ಗಳಿಗೆ ಆಹಾರ ಸಾಮಗ್ರಿ ಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಹುಬ್ಬಳ್ಳಿಯಲ್ಲಿ ಚಾಲನೆ ನೀಡಲಾಯಿತು.ನಗರದ ಪ್ರವಾಸಿ ಮಂದಿರ ದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಸಾಂಕೇತಿ ಕವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚಾಲನೆ ನೀಡಿದರು.

ಇಂಡಿಯಾ ಫುಡ್ ಬ್ಯಾಂಕಿಂಗ್ ನೆಟ್ ವರ್ಕ್ ಸಂಸ್ಥೆ ಯ ವತಿಯಿಂದ ಈ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಇದೇ ವೇಳೆ ಕೇಂದ್ರ ಸಚಿವ ರಾದ ಪ್ರಹ್ಲಾದ್ ಜೋಶಿ ಯವರು ಕರೋನಾ ವಾರಿ ಯರ್ಸ್ ಗಳಿಗೆ ಆಹಾರದ ಸಾಮಗ್ರಿಗಳನ್ನು ವಿತರಣೆ ಮಾಡಿದರು.

ಮಾಧ್ಯಮ ಮಿತ್ರರಿಗೆ, ವೈಧ್ಯರಿಗೆ,ನರ್ಸ್ ಗಳಿಗೆ ಪಾಲಿ ಕೆಯ ಸ್ವಚ್ಚತಾ ಕಾರ್ಮಿಕರಿಗೆ ಸೇರಿದಂತೆ ಹಲವರಿಗೆ ಆಹಾರದ ಸಾಮಗ್ರಿಗಳನ್ನು ವಿತರಿಸಿದರು. ಇಂಡಿ ಯಾ ಬ್ಯಾಂಕಿಂಗ್ ಸಂಸ್ಥೆಯ ಮುಖ್ಯಸ್ಥ ಜಗದೀಶ್ ನಾಯಕ,ಪಾಲಿಕೆಯ ಆಯುಕ್ತರಾದ ಸುರೇಶ್ ಇಟ್ನಾಳ್,

ಬಿಜೆಪಿ ಮುಖಂಡ ಉಮೇಶ ದುಶಿ,ಶರಣು ಅಂಗಡಿ, ಗುರುಪ್ರಸಾದ್ ಗ್ರಾಫೀಕ್ಸ್ ಸಂಸ್ಥೆಯ ಮಾಲೀಕರಾದ ಮಂಜುನಾಥ ಹೂಗಾರ, ಮಂಜುನಾಥ ಸರ್ವಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯವರ ಆಪ್ತ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ,

ಮಂಜು ಬಡಿಗೇರ,(ಸೌಂದರ್ಯ)ಭರತ ಹೂಗಾರ, ಸೇರಿದಂತೆ ಹಲವರು ಈ ಒಂದು ಸಂಸ್ಥೆಯ ಒಳ್ಳೇ ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೇಂದ್ರ ಸಚಿ ವರಿಗೆ ಸಾಥ್ ನೀಡಿ ಮೆರಗು ನೀಡಿದರು.

ಅಲ್ಲದೇ ಸಂಸ್ಥೆಯ ಪರವಾಗಿ ಆಹಾರದ ಸಾಮಗ್ರಿ ಗಳನ್ನು ವಿತರಿಸಿದರು.
ಮಂಜುನಾಥ ಬಡಿಗೇರ (ಸೌಂದರ್ಯ) ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ