ಬೆಳಗಾವಿ –
ಈಗಷ್ಟೇ ಬಾಗಿಲು ತಗೆದಿದ್ದ ಐತಿಹಾಸಿಕ ಸವದತ್ತಿಯ ಯಲ್ಲಮ್ಮನಗುಡ್ಡ ದೇವಾಲಯ ಮತ್ತೆ ಕೊರೊನಾ ಹಿನ್ನಲೆಯಲ್ಲಿ ಬಂದ್ ಅಗಿದೆ. ನೆರೆಯ ಮಹಾರಾಷ್ಟ್ರದಲ್ಲಿ ಕೋವಿಡ್-19 ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಸುಕ್ಷೇತ್ರ ಯಲ್ಲಮ್ಮನ ದೇಗುಲಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.

ಇನ್ನೂ ಫೆಬ್ರವರಿ 27 ರಂದು ನಡೆಯಲಿರುವ ಪ್ರಖ್ಯಾತ ‘ಭಾರತ ಹುಣ್ಣಿಮೆ ಜಾತ್ರೆಯನ್ನು ಕೂಡಾ ರದ್ದುಪಡಿಸಲಾಗಿದೆ.

ಭಾರತ ಹುಣ್ಣಿಮೆಯ ಸಂದರ್ಭದಲ್ಲಿ ಗುಡ್ಡದಲ್ಲಿ ಲಕ್ಷಾಂತರ ಮಂದಿ ಸೇರಿ ಜಾತ್ರೆಯಲ್ಲಿ ಪಾಲ್ಗೊಂಡು ಆಚರಣೆ ಮಾಡುತ್ತಿದ್ದರು. ಆದ್ರೆ, ಸಧ್ಯ ಕೋವಿಡ್ ಆತಂಕದಲ್ಲಿ ಈ ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ. ಈ ನಡುವೆಯೂ ಸಾವಿರಾರು ಭಕ್ತರು ಗುಡ್ಡಕ್ಕೆ ಬರುತ್ತಿದ್ದಾರೆ.

ಅಲ್ಲಲ್ಲಿ ತಾತ್ಕಾಲಿಕ ಟೆಂಟ್ ಹಾಕಿಕೊಂಡು ಅಲ್ಲೇ ನೈವೇದ್ಯ ಸಿದ್ಧಪಡಿಸಿ ದೇವಿಗೆ ಸಮರ್ಪಿಸಿ, ದೂರದಿಂದಲೇ ಏಳುಕೊಳ್ಳದ ಅಮ್ಮನಿಗೆ ನಮಿಸುತ್ತಿದ್ದಾರೆ.ಇದು ದೇಗುಲದ ಆಕರ್ಷಣೆ ಹೆಚ್ಚಿಸಿ ಮೆರುಗು ನೀಡ್ತಿದೆ. ಭಕ್ತರು ದೂರದಿಂದಲೇ ಈ ವೈಭವನ್ನ ಕುಟುಂಬ ಸಮೇತರಾಗಿ ಕಣ್ತುಂಬಿಕೊಳ್ಳುತ್ತಿದ್ದಾರೆ.