ನವದೆಹಲಿ –
ಕರೋನ ಮಹಾಮಾರಿಯ ನಡುವೆ ಈಗಷ್ಟೇ ಆರಂಭ ಗೊಂಡ ಶಾಲೆಗಳು ಈಗ ಮತ್ತೆ ಬಂದ್ ಆಗುವ ಆತಂಕ ಎದುರಾಗಿದೆ.ಕೋವಿಡ್ ಆರಂಭವಾದಾಗಿನಿಂದಲೂ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ.ಕೋವಿಡ್ 2ನೇ ಅಲೆ ಮುಗಿಸಿ ಶಾಲೆಗಳು ಆರಂಭವಾಗುತ್ತಿರುವ ಅಷ್ಟರಲ್ಲಿ ಒಮಿಕ್ರಾನ್ ಕಾಟ ಶುರುವಾಗಿದ್ದು ಮತ್ತೆ ಶಾಲಾ ಕಾಲೇಜುಗಳ ಆನ್‌ಲೈನ್ ತರಗತಿಗಳತ್ತ ತಿರುಗಿದ್ದು ದೇಶ ದಲ್ಲಿನ ಚಿತ್ರಣವನ್ನು ನೋಡೊದಾದರೆ
ದೆಹಲಿ
ಜನೆವರಿ 3ರಿಂದಲೇ ಶಾಲೆ, ಕಾಲೇಜು, ಶಿಕ್ಷಣ ಸಂಸ್ಥೆಗಳು ಬಂದ್ ಆನ್‌ಲೈನ್ ತರಗತಿಗೆ ಅವಕಾಶ
ಅಸ್ಸಾಂ
5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಜ.30ರವರೆಗೆ ಭೌತಿಕ ತರಗತಿ ರದ್ದು,9-11ನೇ ತರಗತಿಯವರಿಗೆ 3 ದಿನ ಆನ್‌ಲೈನ್, 3 ದಿನ ಭೌತಿಕ ತರಗತಿ
ಗುಜರಾತ್
-ಜ.31ರವರೆಗೆ 9ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ
-9ರ ಮೇಲಿನ ತರಗತಿಗಳ ಟ್ಯೂಷನ್ ಸೆಂಟರ್‌ಗಳಿಗೆ ಶೇ. 50 ಆಸನ ಭರ್ತಿಗೆ ಅವಕಾಶ
ಒಡಿಶಾ
-ಶಾಲೆ, ಕಾಲೇಜುಗಳು, ತಾಂತ್ರಿಕ ವಿದ್ಯಾಲಯಗಳು ಫೆ.1ರವರೆಗೆ ಬಂದ್
ಮಹಾರಾಷ್ಟ್ರ
-ಜ.30ರವರೆಗೆ ಎಲ್ಲ ಶಾಲೆ, ಕಾಲೇಜು, ಶಿಕ್ಷಣ ಸಂಸ್ಥೆಗಳಲ್ಲಿ ಭೌತಿಕ ತರಗತಿ ರದ್ದು
ಗೋವಾ
-ಜ.26ರವರೆಗೆ ಶಾಲೆ, ಕಾಲೇಜುಗಳ ಭೌತಿಕ ತರಗತಿ ರದ್ದು
ಜಾರ್ಖಂಡ್
-ಎಲ್ಲ ಶಾಲೆ, ಕಾಲೇಜು, ಶಿಕ್ಷಣ ಸಂಸ್ಥೆಗಳಲ್ಲಿ ಜ.15ರವರೆಗೆ ಭೌತಿಕ ತರಗತಿ ರದ್ದು
ಹರ್ಯಾಣ
-ಜ.12ರವರೆಗೆ ಎಲ್ಲ ಶಾಲೆ, ಕಾಲೇಜು, ಶಿಕ್ಷಣ ಸಂಸ್ಥೆಗಳಲ್ಲಿ ಭೌತಿಕ ತರಗತಿ ರದ್ದು
ಬಿಹಾರ
-ಶಾಲೆ, ಕಾಲೇಜು, ಶಿಕ್ಷಣ ಸಂಸ್ಥೆಗಳಲ್ಲಿ ಜ.21ರವರೆಗೆ ಆನ್‌ಲೈನ್ ತರಗತಿ
ಪಂಜಾಬ್
-ಶಾಲೆ, ಕಾಲೇಜು, ಶಿಕ್ಷಣ ಸಂಸ್ಥೆಗಳಲ್ಲಿ ಜ.15ರವರೆಗೆ ಭೌತಿಕ ತರಗತಿ ರದ್ದು
ಉತ್ತರ ಪ್ರದೇಶ
-12ನೇ ತರಗತಿವರೆಗಿನ ಎಲ್ಲ ವಿದ್ಯಾರ್ಥಿಗಳಿಗೆ ಜ.16ರವರೆಗೆ ಕೇವಲ ಆನ್‌ಲೈನ್ ತರಗತಿ
ತೆಲಂಗಾಣ
-ಎಲ್ಲ ಶಾಲೆಗಳಿಗೆ ಜ.16ರವರೆಗೆ ಭೌತಿಕ ತರಗತಿ ರದ್ದು
-ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಣೆ