ಧಾರವಾಡ-
ಧಾರವಾಡ ಜಿಲ್ಲೆಯ ಜಿಲ್ಲಾ ಪಂಚಾಯತ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗಿದೆ. ಈ ಹಿಂದೆ 22 ಇದ್ದ ಜಿಲ್ಲಾ ಪಂಚಾಯತ ಕ್ಷೇತ್ರಗಳ ಸಂಖ್ಯೆ ಈಗ 27 ಆಗಿದೆ. ಒಟ್ಟು ಐದು ಕ್ಷೇತ್ರಗಳು ಜಿಲ್ಲೆಯಲ್ಲಿ ಹೆಚ್ಚಾಗಿವೆ.

ಕರ್ನಾಟಕ ರಾಜ್ಯ ಪತ್ರದಲ್ಲಿ ಜಿಲ್ಲೆಯ ಜಿಲ್ಲಾ ಪಂಚಾಯತ ಕ್ಷೇತ್ರಗಳನ್ನು ಗ್ರಾಮಗಳ ವ್ಯಾಪ್ತಿಯೊಂ ದಿಗೆ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.

ಕ್ಷೇತ್ರ ಪುನಃ ವಿಂಗಡನೆ ಮಾಡಿ ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಿಸಲಾಗಿದ್ದು ಇನ್ನೇನು ಚುನಾವಣೆ ದಿನಾಂಕ ಘೋಷಣೆ ಅಷ್ಟೇ ಬಾಕಿ ಇದೆ.