ಸದ್ದಿಲ್ಲದೇ ಹುಬ್ಬಳ್ಳಿಯಲ್ಲಿ ಎಲೆ ತಟ್ಟುತ್ತಿದ್ದ ಪೊಲೀಸರ ಬೆನ್ನು ತಟ್ಟಿದ ಇನ್ಸ್ಪೇಕ್ಟರ್ ಕಾಲಿಮಿರ್ಚಿ ಮತ್ತು ಟೀಮ್ – ಬಾಗಿಲು ಮುಚ್ಚಿಕೊಂಡು ಎಕ್ಕಾ ರಾಜಾ ಎನ್ನುತ್ತಿದ್ದ ಪೊಲೀಸರಿಗೆ ಶಾಕ್ ನೀಡಿದ ಪೊಲೀಸರು…..

Suddi Sante Desk

ಹುಬ್ಬಳ್ಳಿ –

ಸಾಮಾನ್ಯವಾಗಿ ಸಾರ್ವಜನಿಕರು ಜೂಜಾಟದಲ್ಲಿ ತೊಡಗೊದನ್ನು ಕೇಳಿದ್ದೇವೆ ನೋಡಿದ್ದೇವೆ ಆದರೆ ಇಲ್ಲೊಂದು ಪ್ರಕರಣದಲ್ಲಿ ಜೂಜಾಟದಲ್ಲಿ ತೊಡಗಿದ್ದ ಪೊಲೀಸರೇ ಅಂದರ್ ಆಗಿದ್ದಾರೆ.

ಹೌದು ಹುಬ್ಬಳ್ಳಿಯ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಈ ಒಂದು ರೇಡ್ ನಡೆದಿದೆ. ರಾಜ್ಯದಲ್ಲಿಯೇ ಶಿಸ್ತಿನ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡಿ ಹೆಸರಾಗಿರುವ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿ ಯಲ್ಲಿ ಈ ಒಂದು ದಾಳಿ ನಡೆದಿದೆ.ಈಗ ಅಪರೂಪದ ಪ್ರಕರಣದಲ್ಲಿ ಪೊಲೀಸರೇ ಪೋಲೀಸರನ್ನು ವಶಕ್ಕೆ ಪಡೆದಿದ್ದಾರೆ.

ಅಕ್ಷಯ ಕಾಲೋನಿಯ ಮನೆಯೊಂದರಲ್ಲಿ ಕುಳಿತು ಎಕ್ಕ-ರಾಜ-ರಾಣಿ ಎಲೆ ತಟ್ಟುತ್ತಿದ್ದ ಪೊಲೀಸರನ್ನು ಗೋಕುಲ್ ಠಾಣೆ ಪೊಲೀಸರು ದಾಳಿ ಮಾಡಿ ವಶಕ್ಕೆ ತಗೆದುಕೊಂಡಿದ್ದಾರೆ.ಅಧಿಕಾರಿ- ಸಿಬ್ಬಂದಿ ತಂಡದ ಮೇಲೆ ಪೊಲೀಸರೇ ದಾಳಿ ನಡೆಸಿ ನಾಲ್ವರ ಬಂಧನವನ್ನು ಮಾಡಿ ದ್ದಾರೆ.

ಗುಂಪು ಸೇರಿ ಅಂದ‌ರ್ ಬಾಹರ್ ಆಟದಲ್ಲಿ ಮೈಮರೆತಿ ದ್ದರು ಪೊಲೀಸರು.ನಗರ ಸಶಸ್ತ್ರ ಮೀಸಲು ಪಡೆಯ (ಸಿಎಆರ್) ಓರ್ವ ಇನ್ಸ್ಪೆಕ್ಟರ್, ಇಬ್ಬರು ಹೆಡ್ ಕಾನ್ ಸ್ಟೇಬಲ್, ಓರ್ವ ಕಾನ್ಸ್‌ಟೇಬಲ್ ,ಒಬ್ಬ ನಿವೃತ್ತ ಹೆಡ್ ಕಾನ್‌ಸ್ಟೆಬಲ್ ಗಳಿದ್ದ ಐವರ ತಂಡ.ಅಕ್ಷಯ ಕಾಲನಿ ಎರಡನೇ ಹಂತದ ಮನೆ ಸಂಖ್ಯೆ 337ರಲ್ಲಿ ಇಸ್ಪೀಟ್ ಆಡುತ್ತಿದ್ದರು.

ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಆಯುಕ್ತ ಲಾಭೂರಾಮ ಅವರ ಸೂಚನೆ ಹಿನ್ನೆಲೆಯಲ್ಲಿ ಗೋಕುಲ ರೋಡ್ ಠಾಣೆ ಇನ್ಸ್ಪೆಕ್ಟರ್ ಜೆ.ಎಂ.ಕಾಲಿಮಿರ್ಚಿ ನೇತೃತ್ವದ ತಂಡ ದಾಳಿ ಮಾಡಿ ವಶಕ್ಕೆ ತಗೆದುಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.ದಾಳಿಯಲ್ಲಿ ಸಿಎಆರ್‌ನ ಇಬ್ಬರು ಹೆಡ್ ಕಾನ್‌ಸ್ಟೆಬಲ್,ಒಬ್ಬ ನಿವೃತ್ತ ಹೆಡ್ ಕಾನ್‌ ಸ್ಟೆಬಲ್‌ ಹಾಗೂ ಸಂಚಾರ ವಿಭಾಗದ ಒಬ್ಬ ಕಾನ್‌ಸ್ಟೆಬಲ್ ಪೊಲೀಸರ ಬಂಧನ ಮಾಡಲಾಗಿದೆ.

ಸಿಎಆರ್ ಇನ್ಸ್ಪೆಕ್ಟರ್ ಪರಾರಿಯಾಗಿದ್ದು 9 ಸಾವಿರ ರೂ. ನಗದು ಹಾಗೂ 5 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.ಈ ಕುರಿತು ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.