ಶ್ರೀಲಂಕಾ –
ಶ್ರೀಲಂಕಾ ದಲ್ಲಿ ದೇಶದ ಕೀರ್ತಿ ಪತಾಕಿ ಹಾರಿಸಿದ ಇನಸ್ಪೇಕ್ಟರ್ ಮುರುಗೇಶ ಚೆನ್ನಣ್ಣನವರ – ದ್ವೀಪ ರಾಷ್ಟ್ರದಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ ಐರನ್ ಮ್ಯಾನ್ ಮುರುಗೇಶ ಚೆನ್ನಣ್ಣನವರ ಗೆ ಸಾಥ್ ನೀಡಿದ ಅಮನ್ ಶಾನಭಾಗ…..ಸಾಧನೆಗೆ ಸ್ಪೂರ್ತಿ ನೀಡಿದ ಪೊಲೀಸ್ ಅಧಿಕಾರಿ ಪತ್ನಿ…..
ಬಿಡುವಿಲ್ಲದ ಪೊಲೀಸ್ ಕರ್ತವ್ಯದ ನಡುವೆಯೂ ಕೂಡಾ ಈಗಾಗಲೇ ಸೈಕ್ಲಿಂಗ್ ಸೇರಿದಂತೆ ಹಲವು ಕ್ರೀಡೆಗಳಲ್ಲಿ ಸಾಧನೆಯನ್ನು ಮಾಡಿ ಐರನ್ ಮ್ಯಾನ್ ಆಗಿರುವ ಪೊಲೀಸ್ ಇನಸ್ಪೇಕ್ಟರ್ ಮುರಗೇಶ ಚೆನ್ನಣ್ಣನವರ ಮತ್ತೊಂದು ಐತಿಹಾಸಿಕ ಸಾಧನೆಯನ್ನು ಮಾಡಿದ್ದಾರೆ.ಹೌದು ದೇಶದ ಪಕ್ಕದ ರಾಷ್ಟ್ರ ಶ್ರೀಲಂಕಾ ದಲ್ಲಿ ದೇಶದ ಕೀರ್ತಿ ಪತಾಕಿಯನ್ನು ಹಾರಿಸಿದ್ದಾರೆ.
ಹಿಂದೂಮಹಾಸಾಗರ,ಬಂಗಾಲಕೊಲ್ಲಿಯ ಸಮುದ್ರ. ದಲ್ಲಿ ಐತಿಹಾಸಿಕ ಸಾಧನೆ ಮಾಡುವ ಮೂಲಕ ಇನಸ್ಪೇಕ್ಟರ್ ಮುರುಗೇಶ ಚೆನ್ನಣ್ಣನವರ ಅವರು ಮತ್ತೊಂದು ಸಾಥನೆ ಮಾಡಿ ರಾಜ್ಯದ ಪೊಲೀಸ್ ಇಲಾಖೆಯ ಗೌರವನ್ನು ಹೆಚ್ಚಿಸಿದ್ದಾರೆ.ಶ್ರೀಲಂಕಾ ದ ತಲೈ ಮನ್ನಾರ್ ದಿಂದ ಭಾರತದ ಧುನುಷ್ ಕೋಡಿ ವರೆಗೆ ಒಟ್ಟು 28 ಕಿಮಲೋ ಮೀಟರ್ ಈಜು ಮಾಡಿ ಸಾಧನೆ ಮಾಡಿದ್ದಾರೆ
ಮುರುಗೇಶ ಚನ್ನಣ್ಣವರ.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ಮಾಡುತ್ತಿರುವ ಇವರು ಬಿಡುವಿಲ್ಲದ ತಮ್ಮ ಕರ್ತವ್ಯದ ನಡುವೆಯೂ ಕೂಡಾ ಪ್ರತಿನಿತ್ಯ ನಿರಂತರವಾಗಿ ಅಭ್ಯಾಸವನ್ನು ಮಾಡಿಕೊಳ್ಳುತ್ತಾ ಸಧ್ಯ ಹುಬ್ಬಳ್ಳಿಯ MBBS ವಿದ್ಯಾರ್ಥಿ ಅಮನ ಶಾನಬಾಗ ಅವರೊಂದಿಗೆ ಶ್ರೀಲಂಕಾದಿಂದ ಭಾರತದ ಧನುಷ್ ಕೋಡಿಯವರೆಗೆ ರಾಮ ಸೇತು ಮೂಲಕ 28 ಕಿಲೋಮೀಟರ್ ಸ್ವಿಮ್ಮಿಂಗ್ ರಿಲೇ ಯಲ್ಲಿ ಸಾಧನೆ ಮಾಡುವ ಮೂಲಕ ತಂಡದಲ್ಲಿ ಸಾಧಿಸಿದ್ದಾರೆ.
ಈ ವಿಶೇಷ ತಂಡವು ಉತ್ತರ ಪ್ರದೇಶ ಮತ್ತು ಹರಿಯಾಣದ ಇಬ್ಬರು IAS ಅಧಿಕಾರಿಗಳು ಹಾಗೂ ಪಚ್ಚಿಮ ಬೆಂಗಾಲ ಮತ್ತು ಹರಿಯಾಣದ ಅಂಗವಿಕಲ ಕ್ರೀಡಾಪಟುಗಳನ್ನು ಒಳಗೊಂಡಿತ್ತು ಈ ತಂಡವು 28 ಕಿಲೋಮೀಟರನ ಕಷ್ಟಕರ ವಾದ ಈಜನ್ನು ಹಿಂದೂ ಮಹಾಸಾಗರ ಮತ್ತು ಬಂಗಾಲಕೊಲ್ಲಿಯ ಸಮುದ್ರದಲ್ಲಿ ಪ್ರತಿಕುಲ ವಾತಾವರಣ ಮತ್ತು ಅತಿಯಾದ ಅಲೆಗಳಲ್ಲಿ ಕೇವಲ 8 ಗಂಟೆ 30 ನಿಮಷದಲ್ಲಿ ಈಜುವುದರ ಮೂಲಕ ಮುಗಿಸಿ ಈ ಅದ್ಭುತ ಸಾಧನೆ ಯನ್ನು ಮಾಡಿದ್ದಾರೆ
ಮುರುಗೇಶ ಚನ್ನಣ್ಣವರ ಧರ್ಮಪತ್ನಿ ಶ್ರೀಮತಿ ಶ್ವೇತಾ ಚನ್ನಣ್ಣವರ ಅವರು ಇವರ ಜೊತೆ ಬೋಟಿನಲ್ಲಿ ಶ್ರೀಲಂಕಾ ಗೆ ಹೋಗಿದ್ದಲ್ಲದೆ ಪ್ರಾರಂಭದಿಂದ ಮುಕ್ತಾಯದವರೆಗೂ ಜೊತೆಯಲ್ಲಿ ಇದ್ದುಕೊಂಡು ಸ್ಪೂರ್ತಿ ನೀಡಿದ್ದು ವಿಶೇಷವಾಗಿತ್ತು.ಈ ಯಶಸ್ಸಿಗೆ ಕೈ ಜೋಡಿಸಿದ್ದಾರೆ ಐರನಮ್ಯಾನ ಅವರ ಸಾಧನೆಗೆ.ಇನ್ನೂ ಈ ಹಿಂದೆ ಕಾಶ್ಮೀರ ಟು ಕನ್ಯಾಕುಮಾರಿ ಸೈಕ್ಲಿಂಗ್ ಮುಂತಾದ ಸಾಧನೆಗಳನ್ನು ಮಾಡುವದರ ಮೂಲಕ ಪೊಲೀಸ ಇಲಾಖೆಯಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಒಳ್ಳೇಯ ಅಧಿಕಾರಿಯಾಗಿರುವ ಮುರುಗೇಶ ಚನ್ನಣ್ಣವರ ಇವರು ಮತ್ತೊಂದು ಮೈಲುಗಲ್ಲು ಸಾಧಿಸಿದ್ದಾರೆ.
ಮುರುಗೇಶ ಚನ್ನಣ್ಣವರ ಮತ್ತು ಅಮನ ಶಾನಬಾಗ ಮುಂಬರುವ ಜೂನ್ ತಿಂಗಳಲ್ಲಿ ವಿಶ್ವದ ಅತಿ ಕಷ್ಟಕರ ವಾದ ಇಂಗ್ಲಿಷ ಕಾಲುವೆ(ಇಂಗ್ಲೆಂಡ ಮತ್ತು ಫ್ರಾನ್ಸ ಮಧ್ಯದ 36 ಕಿಲೋಮೀಟರ ಕಾಲುವೆ)ಯನ್ನು ಈಜಲು ಹೊರಟಿರುವದು ನಮ್ಮ ನಾಡು ಮತ್ತು ಕರ್ನಾಟಕ ಪೊಲೀಸ್ ಇಲಾಖೆ ಹೆಮ್ಮೆ ಪಡುವ ವಿಷಯವಾಗಿದ್ದು ಇದೆ ಹುಮ್ಮಸ್ಸಿನಿಂದ ಇಂಗ್ಲಿಷ್ ಕಾಲುವೆ ಈಜಿ ಯಶಸ್ಸು ಕಾಣಲಿ ಎಂಬ ಶುಭ ಹಾರೈಕೆಗಳು ಬರುತ್ತಿದ್ದು
ಇನ್ನೂ ಶ್ರೀಲಂಕಾ ದಲ್ಲಿ ಈ ಒಂದು ಸಾಧನೆಯನ್ನು ಮಾಡಿರುವ ಇವರ ಸಾಧನೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಗೋಪಾಲ ಬ್ಯಾಕೋಡ್,ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಭರಮನಿ, ಪೊಲೀಸ್ ಉಪ ಅಧೀಕ್ಷರು ಧಾರವಾಡ ಗ್ರಾಮೀಣ ಎಸ್ ಎಮ್ ನಾಗರಾಜ ಸೇರಿದಂತೆ ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಸೇರಿದಂತೆ ಎಲ್ಲರೂ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಶ್ರೀಲಂಕಾ…..