ದಲಿತ ಯುವಕನ ಮೇಲೆ ಇನ್ಸ್ಪೆಕ್ಟರ್ ಪ್ರಭು ಸೂರಿನ್ ಹಲ್ಲೆ – ಎಸ್ಪಿ ಕಚೇರಿ ಮುಂದೆ ಪ್ರತಿಭಟನೆ

Suddi Sante Desk

ಧಾರವಾಡ –

ದಲಿತ ಯುವಕನ ಮೇಲೆ ಪೊಲೀಸರು ಮತ್ತು ಇನ್ಸ್ಪೆಕ್ಟರ್ ಪ್ರಭು ಸೂರಿನ್ ರಿಂದ ಹಲ್ಲೆ ಆಗಿದೆ ಅಂತ ಆರೋಪಿಸಿ ಧಾರವಾಡ ಎಸ್ಪಿ ಕಚೇರಿ ಎದುರು ದಲಿತ ಸಂಘಟನೆಯವರು ಪ್ರತಿಭಟನೆ ಮಾಡಿದರು.

ಕಲಘಟಗಿ ಅರಣ್ಯ ವ್ಯಾಪ್ತಿಯಲ್ಲಿ ಇಬ್ಬರು ವ್ಯಕ್ತಿಗಳನ್ನ ಬಂಧಿಸಿ ಅವರಿಂದ ನಾಡ ಪಿಸ್ತೂಲ್ ವಶಪಡಿಸಿಕೊಂಡಿದ್ದರು. ಆದ್ರೆ ಆರೋಪಿತನಲ್ಲದ ಡೇವಿಡ್ ಎನ್ನುವ ವ್ಯಕ್ತಿಯನ್ನ ಬಂಧಿಸಿ ವಿನಾಕಾರಣ ಆತನ ಮೇಲೆ ಹಲ್ಲೆ ಮಾಡಲಾಗಿದೆ ಅಂತ ಸಂಘಟನೆಯವರು ಆರೋಪಿಸಿದ್ದಾರೆ.

ಅಲ್ಲದೆ ಕಲಘಟಗಿ ಪೊಲೀಸ್ ಠಾಣೆಯ ಸಿಬ್ಬಂದಿ ಮತ್ತು ಇನ್ಸ್ಪೆಕ್ಟರ್ ಮನ ಬಂದಂತೆ ಥಳಿಸಿದ್ದಾರೆ ಎಂದು ಸಂಘಟನೆಯವರು ಆರೋಪ ಮಾಡಿದ್ದಾರೆ.

ಇದಕ್ಕೆ ನೇರವಾಗಿ ಇನ್ಸ್ಪೆಕ್ಟರ್ ಪ್ರಭು ಸೂರಿನ ಅವರೇ ಕಾರಣ ಹೀಗಾಗಿ ಅವರನ್ನ ತಕ್ಷಣ ವಜಾ ಮಾಡಿ ನಿರಪರಾಧಿಗಳಿಗೆ ನ್ಯಾಯ ಒದಗಿಸಿ ಕೂಡಲೇ ಕ್ರಮ ಕೈಗೊಳ್ಳುವಂತೆ ಎಸ್ಪಿ ಕೃಷ್ಣಕಾಂತ್ ರಿಗೆ ಮನವಿ ಸಲ್ಲಿಸಿದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.