ಮಂಗಳೂರು –
ಹೌದು ಮೇಲಾಧಿಕಾರಿಯ ಅನುಮತಿ ಇಲ್ಲದೆ ದುಬೈ ಪ್ರವಾಸ ಕೈಗೊಂಡಿದ್ದ ಮಂಗಳೂರಿನ ಟ್ರಾಫಿಕ್ ಉತ್ತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮುಹಮ್ಮದ್ ಶರೀಫ್ ರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ
ಮುಹಮ್ಮದ್ ಶರೀಫ್ ಅವರು ಇಲಾಖೆಯ ಹಿರಿಯ ಅಧಿಕಾರಿಗಳ ಅನುಮತಿ ಪಡೆಯದೆ ವಿದೇಶ ಪ್ರವಾಸ ಮಾಡಿರುವ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ. ಮಾ.16 ರಿಂದ ಅಜ್ಮೀರ್ ಪ್ರವಾಸ ಮಾಡುವುದಾಗಿ ರಜೆ ಪಡೆದು ಬಳಿಕ ದುಬೈಗೆ ತೆರಳಿದ್ದರು.ವಿದೇಶ ಪ್ರವಾಸ ಮಾಡುವುದಾದರೆ ಡಿಜಿಪಿ ಅವರಿಂದ ಪೂರ್ವ ಅನುಮತಿ ಪಡೆಯಬೇಕಾಗಿದೆ.ಸೋಮವಾರ ಮಂಗಳೂರಿಗೆ ಹಿಂತಿರು ಗಿದ್ದರು.ಮುಂದಿನ ಆದೇಶದ ತನಕ ಅಮಾನತು ಮಾಡಲಾ ಗಿದೆ.