ಧಾರವಾಡ –
ಬೆಳ್ಳಂ ಬೆಳಿಗ್ಗೆ ಇನ್ಸ್ಪೆಕ್ಟರ್ ಬುಲೇರೊ ವೊಂದು ಅಪಘಾತಕ್ಕಿಡಾದ ಘಟನೆ ಧಾರವಾಡ ದಲ್ಲಿ ನಡೆದಿದೆ.ಹೌದು ನಗರದ ಕೆಎಂಎಫ್ ಬಳಿ ನಡೆದ ಈ ಒಂದು ಘಟನೆಯಲ್ಲಿ ಇನ್ಸ್ಪೆಕ್ಟರ್ ತೀವ್ರವಾಗಿ ಗಾಯಗೊಂಡಿದ್ದಾರೆ.
ಘಟನೆಯಲ್ಲಿ ಸಿಎಆರ್ ಇನ್ಸ್ಪೆಕ್ಟರ್ ವಿರೇಶ ನಾಯಕ ಎಂಬುವವರ ಬುಲೆರೋ ಜಖಂ ಆಗಿದ್ದು ಅವರಿಗೂ ಕೂಡಾ ಸಣ್ಣ ಪುಟ್ಟ ಪ್ರಮಾಣದಲ್ಲಿ ಗಾಯಗಳಾಗಿವೆ.ಇವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕೆಎಂಎಫ್ ವಾಹನ ಅಡ್ಡ ಬಂದ ಪರಿಣಾಮ ಈ ಒಂದು ಅಪಘಾತ ಸಂಭವಿಸಿದೆ.ಕೆಎಂಎಫ್ ಬಳಿಯ ಬಿಆರ್ ಟಿಎಸ್ ರಸ್ತೆಯಲ್ಲಿ ಹೋಗುವಾಗ ನಡೆದಿ ರುವ ಘಟನೆ.
ಇನ್ನೂ ಸುದ್ದಿ ತಿಳಿದ ಧಾರವಾಡ ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ