ಬೆಂಗಳೂರು –
ಕೆಲವು ಶಾಲೆಗಳಲ್ಲಿ ಶಿಕ್ಷಕರು ಮಾಹಿತಿ ನೀಡದೆ ಗೈರು ಹಾಜರಾಗುತ್ತಿರುವುದು ಅಲ್ಲದೆ ತಡವಾಗಿ ಶಾಲೆಗೆ ಬರುತ್ತಿ ರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಶಿಕ್ಷಣ ಇಲಾಖೆ ಮಹತ್ವದ ತೀರ್ಮಾನಗಳನ್ನು ಕೈಗೊಂಡು ಬಯೋ ಮೆಟ್ರಿಕ್ ಆರಂಭ ಮಾಡಲು ಮುಂದಾಗಿದೆ
ಹೌದು ಶಿಕ್ಷಕರಿಗೆ ಬಯೋಮೆಟ್ರಿಕ್ ಹಾಜರಿ ಕಡ್ಡಾಯ ಗೊಳಿಸಲಾಗಿದ್ದು ಜೊತೆಗೆ ಶಾಲೆ ಆರಂಭಕ್ಕೂ 15 ನಿಮಿಷ ಮೊದಲು ಹಾಜರಿರುವಂತೆ ಸೂಚಿಸಲಾಗಿದೆ.ಜೊತೆಗೆ ರಜೆ ಮೇಲೆ ತೆರಳುವಾಗ ಮೇಲಾಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳುವುದು ಅಗತ್ಯವಾಗಿದೆ.
ಶಾಲೆಗಳಲ್ಲಿರುವ ಬಯೋಮೆಟ್ರಿಕ್ ಯಂತ್ರ ಸುಸ್ಥಿತಿಯಲ್ಲಿ ರುವ ಕುರಿತು ಶಾಲಾ ಮುಖ್ಯಸ್ಥರು ಮತ್ತು ಸ್ಥಳೀಯ ಅಧಿಕಾರಿಗಳು ಪರಿಶೀಲಿಸುತ್ತಿರಬೇಕು ಎಂದು ತಿಳಿಸಲಾ ಗಿದ್ದು ಜೊತೆಗೆ ಪ್ರತಿ ತಿಂಗಳ 25ನೇ ತಾರೀಕಿನೊಳಗೆ ಚೆಕ್ ಇನ್ ಮತ್ತು ಚೆಕ್ ಔಟ್ ದಾಖಲೆಗಳನ್ನು ಪಡೆದು ಅದಕ್ಕೆ ಅನುಗುಣವಾಗಿ ವೇತನ ಪಾವತಿಸಲು ಸೂಚಿಸಲಾಗಿದೆ.