ಬೆಂಗಳೂರು –
ಶಿಕ್ಷಕರ ವರ್ಗಾವಣೆ ವಿಚಾರ ಕುರಿತಂತೆ ಬೆಂಗಳೂರು ಚಲೋವನ್ನು ಮಾಡಲು ಈಗಾಗಲೇ ನಿರ್ಧಾರವನ್ನು ಕೈಗೊಂಡಿದ್ದು ಇನ್ನೂ ಬೆಂಗಳೂರು ಚಲೋ ದಿನಾಂಕ ಮತ್ತು ರೂಪರೇಷೆಗಳ ಕುರಿತಂತೆ ಅಂತಿಮವಾಗಿ ತೀರ್ಮಾನವನ್ನು ಕೈಗೊಳ್ಳುವ ನಿಟ್ಟಿನಲ್ಲಿ ನಾಳೆ ಸಂಜೆ ಮಹತ್ವದ ಪೂರ್ವಭಾವಿ ಸಭೆ ನಡೆಯಲಿದೆ.

ಸಂಜೆ 6 45ಕ್ಕೇ OTS ಗಾಗಿ ಈ ಒಂದು ಸಭೆ ನಡೆಯಲಿದ್ದು ಪೂರ್ವಭಾವಿಯ ಈ ಒಂದು ಸಭೆ ಕ್ಲಬ್ ಹೌಸ್ ನಲ್ಲಿ ನಡೆಯಲಿದ್ದು ಈ ಒಂದು ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವರ್ಗಾವಣೆ ನಿರೀಕ್ಷೆಯಲ್ಲಿರುವ ಅದರಲ್ಲೂ OTS ಶಿಕ್ಷಕರು ಪಾಲ್ಗೊಂಡು ಸಭೆಗೆ ಶಕ್ತಿ ತುಂಬಿ ಮುಂದಿನ ದಾರಿಗೆ ಶಿಕ್ಷಕರು ಅನುಕೂಲ ಮಾಡಿಕೊಡಬೇಕೆಂದು ಹಾಗೇ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಪಾಲ್ಗೊಳ್ಳುವಂತೆ ವೇದಿಕೆಯ ಮುಖಂಡ ಮಹೇಶ್ ಮುದ್ದಿ ಕರೆ ನೀಡಿದ್ದಾರೆ




ಇದರೊಂದಿಗೆ ಓಟಿಎಸ್ ಗಾಗಿ ಧ್ವನಿ ಎತ್ತಿರುವ ನಮಗೆ ಶಕ್ತಿಯನ್ನು ತುಂಬುವಂತೆ ಈಮೂಲಕ ಶಿಕ್ಷಕರಿಗೆ ಮಹೇಶ್ ಮುದ್ದಿ ಕರೆ ನೀಡಿದ್ದಾರೆ.