ಟೆಹ್ರಾನ್ –
ಇರಾನ್ ಪರಮಾಣು ವಿಜ್ಞಾನಿಯೊಬ್ಬರನ್ನು ಹತ್ಯೆ ಮಾಡಿರುವ ಘಟನೆ ಟೆಹ್ರಾನ್ ನಲ್ಲಿ ನಡೆದಿದೆ. ಟೆಹ್ರಾನ್ ನ ಹೊರವಲಯದಲ್ಲಿ ಈ ಒಂದು ಘಟನೆ ನಡೆದಿದೆ. ಇನ್ನೂ ವಿಜ್ಞಾನಿಯೊಬ್ಬರನ್ನು ಹತ್ಯೆಗೈದಿರುವ ದುಷ್ಕರ್ಮಿಗಳು.ಶಸ್ತ್ರಧಾರಿ ಗುಂಪೊಂದು ವಿಜ್ಞಾನಿ ಮೋಹ್ಸೆನ್ ಫಖ್ರಿಝಾಡೆಹ್ ಅವರನ್ನು ಹತ್ಯೆ ಮಾಡಿದೆ.ಕಾರಿನಲ್ಲಿ ಹೊರಟಿದ್ದ ಇವರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ಸಂದರ್ಭ ದಲ್ಲಿ ಮೋಹ್ಸೆನ್ ಅವರ ರಕ್ಷಣಾ ಸಿಬ್ಬಂದಿಗಳು ಪ್ರತಿದಾಳಿ ನಡೆಸಿದ್ದರು ಕೂಡಾ ಮೋಹ್ಸೆನ್ ಗಂಭೀರವಾಗಿ ಗಾಯಗೊಂಡಿರುವುದಾಗಿ. ಇರಾನ್ ರಕ್ಷಣಾ ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ಫಕ್ರಿಝಾಡೆಹ್ ಅವರು ಸಂಶೋಧನಾ ಮತ್ತು ಆವಿಷ್ಕಾರ ಸಚಿವಾಲಯದ ಮುಖ್ಯಸ್ಥರಾಗಿದ್ದು ಗಂಭೀರವಾಗಿ ಗಾಯಗೊಂಡಿದ್ದ ವಿಜ್ಞಾನಿ ಮೋಹ್ಸೆನ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿಧನರಾಗಿರುವುದಾಗಿ ವರದಿಯಲ್ಲಿ ವಿವರಿಸಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹೂ ಅವರನ್ನು “ಇರಾನ್ ನ ಪರಮಾಣು ಶಸ್ತ್ರಾಸ್ತ್ರ ಕಾರ್ಯಕ್ರಮದ ಪಿತಾಮಹ” ಎಂದು ಬಣ್ಣಿಸಿದ್ದರು.





















