ಬೆಳಗಾವಿ –
ಸಚಿವ ರಮೇಶ ಜಾರಕಿಹೋಳಿ ಬಿಎಲ್ ಸಂತೋಷರನ್ನು ಭೇಟಿ ಮಾಡಿದ್ದು ಅಪರಾಧವಾ ಹಿಗೇಂದು ವೈಧ್ಯಕೀಯ ಶಿಕ್ಷಣ ಸಚಿವ ಡಿ ಸುಧಾಕರ ಪ್ರಶ್ನೆ ಮಾಡಿದ್ದಾರೆ. ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು ಬಿಎಲ್ ಸಂತೋಷ ಅವರು ನಮ್ಮ ಪಕ್ಷದ ನಾಯಕರು ಇನ್ನೂ ರಮೇಶ ಜಾರಕಿಹೋಳಿ ನಮ್ಮ ಸಚಿವರು ಬೇರೆ ಬೇರೆ ಕೆಲಸ ಕಾರ್ಯಗಳಿಗೆ ದೆಹಲಿಗೆ ಹೊಗೊದು ಸಾಮಾನ್ಯ. ಇಲಾಖೆಯ ಕೆಲಸದ ಹಿನ್ನಲೆಯಲ್ಲಿ ಹೋದ ಸಮಯದಲ್ಲಿ ಭೇಟಿಯಾಗಿದ್ದಾರೆ. ಹೀಗಿರುವಾಗ ರಮೇಶ ಜಾರಕಿಹೊಳಿ ಬಿ ಎಲ್ ಸಂತೋಷರನ್ನು ಭೇಟಿ ಮಾಡಿದ್ದು ಅಪರಾಧನಾ ಎಂದು ಕೇಳಿದರು. ಇನ್ನೂ ಇದೇ ವೇಳೆ ಕೊರೊನಾ ಲಸಿಕೆ ಇನ್ನೂ ಬಿಡುಗಡೆ ಆಗಿಲ್ಲ, ಬಿಡುಗಡೆಗೆ ಅಧಿಕೃತವಾದ ಆದ್ಮೇಲೆ ನಿಮಗೂ ಗೊತ್ತಾಗುತ್ತೆ ಎಂದರು.ಇನ್ನೂ ಕೇಂದ್ರ ಸರ್ಕಾರ, ಪ್ರಧಾನಿಯವರು ಕ್ಲಿನಿಕಲ್ ಟ್ರಯಲ್ ನಡೆಸಿರುವ ಕಂಪನಿಗಳ ಜತೆ ಸಮಾಲೋಚನೆ ನಡೆಸಿದ್ದಾರೆ. ಅಡ್ವಾನ್ಸ್ ಆಗಿ ಮೂರನೇ ಹಂತ ತಲುಪಿದ ಕಂಪನಿ ಜೊತೆ ಕೇಂದ್ರ ಸಮಾಲೋಚನೆ ನಡೆದಿದ್ದು, ಅದೇ ರೀತಿ ಕಂಪನಿಗಳ ಜೊತೆ ಕೇಂದ್ರ ಸರ್ಕಾರ ಒಡಂಬಡಿಕೆ ಮಾಡಿಕೊಂಡಿದೆ.ಯಾವ ಕಂಪನಿಗೆ WHO ಅಧಿಕೃತ ಅಂತಾ ಘೋಷಣೆ ಮಾಡ್ತಾರೆ ಆ ಲಸಿಕೆ ಸಿಗುವ ಕೆಲಸ ಆಗುತ್ತೆ ಎಂದರು. ಅಲ್ಲದೇ ಭಾರತ ದೇಶದಲ್ಲಿ ದೊಡ್ಡ ಮಟ್ಟಿಗೆ ಲಸಿಕೆ ಸಿಗುವ ಕೆಲಸ ಆಗುತ್ತೆ, ಆರೋಗ್ಯ ಇಲಾಖೆಯಲ್ಲಿ ಜನಪರ ಬದಲಾವಣೆಗಳು ನಡೀತಾ ಇವೆ, ಅಂತಾರಾಷ್ಟ್ರೀಯ ಗುಣಮಟ್ಟದ 108 ಆ್ಯಂಬುಲೆನ್ಸ್ ಸರ್ವೀಸ್‌ಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ,ಕಾಲೇಜಿನ ವಿದ್ಯಾರ್ಥಿಗಳು ಹಾಗೂ ನಾವು ಯಾರೂ ಸಹ ಹೊರೆತಾಗಿಲ್ಲ, ಎಷ್ಟು ಕಾಲೇಜು ವಿದ್ಯಾರ್ಥಿಗಳಿಗೆ ಕೊರೊನಾ ಬಂದಿದೆ ನಿಖರ ಮಾಹಿತಿ ಇಲ್ಲ, ಉನ್ನತ ಶಿಕ್ಷಣ ಸಚಿವರ ಜೊತೆ ಮಾತನಾಡಿ ಮಾಹಿತಿ ಪಡೆಯುತ್ತೇನೆ, ಲಸಿಕೆ ಬಂದ್ರೆ ಅದರ ಸಂಗ್ರಹಕ್ಕೆ ಈಗಾಗಲೇ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಎಂದು ಸಚಿವರು ಹೇಳಿದ್ರು.