ಕಂಠಪೂರ್ತಿ ಕುಡಿದು ಹೆದ್ದಾರಿ ತುಂಬೆಲ್ಲಾ ಲಾರಿ ಚಾಲನೆ ಮಾಡುತ್ತಿದ್ದವನ ಜೀವ ರಕ್ಷಣೆ – ಹೆದ್ದಾರಿಯಲ್ಲಿ ದೊಡ್ಡ ಅವಘಡ ತಪ್ಪಿಸಿದ್ರು ಇಸ್ಮಾಯಿಲ್ ತಮಟಗಾರ್

Suddi Sante Desk

ಧಾರವಾಡ –

ಧಾರವಾಡದ ಹೊರವಲಯದ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದೊಡ್ಡ ಅವಘಡವೊಂದನ್ನು ಕಾಂಗ್ರೆಸ್ ಪಕ್ಷದ ಮುಖಂಡ ಇಸ್ಮಾಯಿಲ್ ತಮಟಗಾರ್ ತಡೆದಿದ್ದಾರೆ.ಹೌದು ಕಂಠಪೂರ್ತಿ ಕುಡಿದು ಕ್ಯಾಂಟರ್ ನ್ನು ಚಾಲನೆ ಮಾಡಿಕೊಂಡು ಹೊರಟಿದ್ದರು‌‌. ಹೆದ್ದಾರಿಯಲ್ಲಿ ಏರ್ರಾಬಿರ್ರಿ ಡ್ರೈವಿಂಗ್ ನೋಡಿದ ಇಸ್ಮಾಯಿಲ್ ತಮಟಗಾರ್ ಅವರು ಕೂಡಲೇ ಲಾರಿ ತಡೆದಿದ್ದಾರೆ. ಕಡೆಯಿಂದಚ ಮಾಡುತ್ತಿ

ಬರೊಬ್ಬರಿ ಒಂದು ಕಿಲೋಮೀಟರ್ ಗಳ ಕಾಲ ಲಾರಿಯನ್ನು ವೀಕ್ಷಿಸಿ ನಂತರ ಕೊನೆಯ ಅದನ್ನು ಓವರ್ ಟೇಕ್ ಮಾಡಿ ತಡೆಹಿಡಿದಿದ್ದಾರೆ.

ಕಂಠಪೂರ್ತಿ ಕುಡಿದು ಹೆದ್ದಾರಿಯ ತುಂಬೆಲ್ಲಾ ಏರ್ರಾಬಿರ್ರಿ ಡ್ರೈವಿಂಗ್ ಮಾಡುತ್ತಿದ್ದನು. ಸುಮ್ಮನೆ ಬಿಟ್ಟಿದ್ದರೆ ಇನ್ನೇನು ದೊಡ್ಡ ಪ್ರಮಾಣದಲ್ಲಿ ಅಪಘಾತವಾಗುತ್ತಿತ್ತು. ಇದನ್ನು ನೋಡಿದ ಇಸ್ಮಾಯಿಲ್ ಅವರು ಕೂಡಲೇ ಲಾರಿ ನಿಲ್ಲಿಸಿದ್ದಾರೆ.

ಕೂಡಲೇ ಲಾರಿ ತಡೆದು ನಂತರ ಧಾರವಾಡ ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಬರುತ್ತಿದ್ದಂತೆ ಧಾರವಾಡ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಲಾರಿಯನ್ನು ವಶಕ್ಕೆ ತೆಗೆದುಕೊಂಡರು.

ಸಧ್ಯ ಚಾಲಕನೊಂದಿಗೆ ಲಾರಿಯನ್ನು ವಶಕ್ಕೆ ತೆಗೆದುಕೊಂಡಿರುವ ಧಾರವಾಡ ಸಂಚಾರಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಇನ್ನೂ ಹೆದ್ದಾರಿಯಲ್ಲಿ ಕಂಠಪೂರ್ತಿ ಕುಡಿದು ಏನಾದರೊಂದು ಅನಾಹುತವನ್ನು ಈ ಚಾಲಕ ಮಾಡುತ್ತಿದ್ದ ಆದರೆ ಇದನ್ನೆ ನೋಡಿದ ಇಸ್ಮಾಯಿಲ್ ತಮಟಗಾರ್ ಲಾರಿ ನಿಲ್ಲಿಸಿ ಹೆದ್ದಾರಿಯಲ್ಲಿ ಆಗುತ್ತಿದ್ದ ದೊಡ್ಡ ಅವಘವೊಂದನ್ನು ನಿಲ್ಲಿಸಿದ್ದು ನಿಜವಾಗಿ ಯೂ ಮೆಚ್ಚುವಂತಹ ಸಂಗತಿ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.