ಯೊಗೀಶಗೌಡ ಕೊಲೆ ಯಾರ ರಾಜಕೀಯ ಕ್ಕಾಗಿ ಆಗಿದೆ ಎನ್ನೊದು ಗೊತ್ತಾಗಿದೆ ಬಸವರಾಜ ಮುತ್ತಗಿ ಹೊಸ ಬಾಂಬ್…..

Suddi Sante Desk

ಧಾರವಾಡ –

ಯೋಗೀಶ್ ಹತ್ಯೆ ಪ್ರಕರಣದ ಸಿಬಿಐ ತನಿಖೆಗೆ ಧಾರವಾಡದ ಉಪನಗರ ಠಾಣೆಗೆ ಬಸವರಾಜ ಮುತ್ತಗಿ ಆಗಮಿಸಿ ಮತ್ತೊಂದು ಹೊಸ ಮಾತು ಹೇಳಿದ್ದಾರೆ.ಮತ್ತೊಬ್ಬರನ್ನು ಬಲಿ ಪಶು ಮಾಡಬೇಡಿ
ನಾನು ಕೂಡ ಅಂಥ ಮನಸ್ಥಿತಿಯವನಲ್ಲ
ಪ್ರಾಮಾಣಿಕವಾಗಿ ಹೋರಾಟ ಮಾಡಿದವನು ನಾನು ಯಾರ ರಾಜಕೀಯ ಉದ್ದೇಶಕ್ಕೆ ಕೊಲೆ ಯಾಗಿದೆ ಅನ್ನೋದು ಗೊತ್ತಾಗಿದೆ ಸಿಬಿಐ ತನಿಖೆ ಯಲ್ಲಿ ಗೊತ್ತಾಗಿದೆ ಸಾಕಷ್ಟು ವಿಷಯಗಳೂ ಬಯಲಿಗೆ ಬರಲಿವೆ ಇವತ್ತು ನಾನು ಕೂಡ ಸಾಕಷ್ಟು ವಿಷಯ ಹೇಳಲಿದ್ದೇನೆ.ಸಿಬಿಐ ಮುಂದೆ ವಿಷಯ ಹೇಳಲಿದ್ದೇನೆ.ಅದನ್ನು ಕೋರ್ಟ್ ನಲ್ಲಿಯೂ ಹೇಳುತ್ತೇನೆ ನನ್ನ ನಂಬಿದ ಹುಡುಗರ ಸಲುವಾಗಿ ಇದನ್ನು ಮಾಡುತ್ತೇನೆ.ನನ್ನೊಂದಿಗೆ ಬಹಳಷ್ಟು ಬಡ ಹುಡುಗರಿದ್ದಾರೆ.ನಾನು ವಿನಯ ಪರ ಅಥವಾ ವಿರುದ್ಧ ಮಾತಾಡುತ್ತಿಲ್ಲ.ನನ್ನ ಹಾಗೂ ಹುಡುಗರನ್ನು ಬಲಿ ಪಶು ಮಾಡಲು ಬಿಡೋದಿಲ್ಲ ಹಾಗೆ ಬಲಿ ಪಶು ಮಾಡಿ ಬದುಕಲು ಆಗೋದಿಲ್ಲ ಎಲ್ಲರೂ ಬಡ ಹುಡುಗರಿದ್ದಾರೆ.ಇದೇ ಸಂಬಂಧ ಅನೇಕ ಸತ್ಯವನ್ನು ಹೇಳಲಿದ್ದೇನೆ.ಸಿಬಿಐ ಮುಂದೆ ಎಲ್ಲವನ್ನು ಹೇಳಲಿ ದ್ದೇನೆ.ಇದುವರೆಗೂ ಹೇಳದೇ ಇರೋ ವಿಚಾರವನ್ನು ಹೇಳುತ್ತೇನೆ ಎಂದರು.

ಮುತ್ತಗಿ ಪರ ವಾದ ಮಂಡಿಸಿದ ಕಪಿಲ್ ಸಿಬಲ್
ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡನೆ ವಿಚಾರ
ಸಿಬಲ್ ವಾದ ಮಂಡಿಸಿದ್ದು ಗೊತ್ತಿರಲಿಲ್ಲ
ಅವರನ್ನು ವಾದಕ್ಕೆ ಕರೆಯುವಷ್ಟು ದೊಡ್ಡವನು ನಾನಲ್ಲ.ಆದರೆ ಅವರು ವಾದಿಸಿದ್ದು ಖುಷಿ ತಂದಿದೆ
ಹೀಗಾಗಿ ಈಗಿರೋ ವಕೀಲರಿಂದ ಎನ್.ಒ.ಸಿ ಪಡೆಯುತ್ತೇನೆ ಎಂದರು.

ಕಪಿಲ್ ಅವರನ್ನು ಯಾರು ನೇಮಿಸಿದ್ದಾರೋ ಗೊತ್ತಿಲ್ಲ ಒಂದು ಕಡೆ ಜಾಮೀನು ರದ್ದಿಗೆ ಆಗ್ರಹ ನಡೆದಿದೆ.ಕೋರ್ಟ್ ನಲ್ಲಿ ಈ ಬಗ್ಗೆ ವಾದ ಮಂಡಿಸ ಲಾಗಿದೆ.ಇನ್ನೊಬ್ಬರ ಜಾಮೀನು ರದ್ದು ಮಾಡಲು ಕೋರುವವರ ಮನಸ್ಥಿತಿ ಅರ್ಥವಾಗುತ್ತೆ ಅಂಥವರ ಉದ್ದೇಶ ಏನು ಅನ್ನೋದು ಗೊತ್ತಾಗುತ್ತಿದೆ.
ಮತ್ತೊಂದು ಕಡೆ ಕಪಿಲ್ ನಂಥವರು ನನ್ನ ಪರ ವಾದಿಸುತ್ತಿದ್ದಾರೆ.ಇದೆಲ್ಲವೂ ನನಗೆ ಅರ್ಥವಾಗುತ್ತಿಲ್ಲ
ಧಾರವಾಡದಲ್ಲಿ ಬಸವರಾಜ ಮುತ್ತಗಿ ಮಾತನಾಡಿ ಹೊಸ ಮಾತಿನ ಬಾಂಬ್ ಸಿಡಿಸಿದ್ದಾರೆ. ಇದರೊಂ ದಿಗೆ ಯೋಗೀಶ್ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಂತಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.