ಹುಬ್ಬಳ್ಳಿ –
ಹುಬ್ಬಳ್ಳಿಯ ಮಜೇಥಿಯಾ ಪೌಂಡೇಶನ್ ಮತ್ತು ಅತುಲ್ ಏಜೆನ್ಸಿ ಮೇಲೆ ಐಟಿ ದಾಳಿಯಾಗಿದೆ.
ಹತ್ತಕ್ಕೂ ಹೆಚ್ಚು ಐಟಿ ಅಧಿಕಾರಿಗಳ ಇಂದು ಬೆಳಿಗ್ಗೆ ದಾಳಿಯನ್ನು ಮಾಡಿದ್ದು ಬೆಳಿಗ್ಗೆಯಿಂದ ನಡೆದ ದಾಳಿ ಇನ್ನೂ ಮುಂದುವರೆದಿದೆ.
ನಗರದ ಶೀಲವಂತರ ಓಣಿ ಮತ್ತು ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು ಕಾರ್ಯಾಚರಣೆ ಇನ್ನೂ ಮುಂದುವರೆದಿದೆ. ಬೆಳಗಾವಿಯಿಂದ ಬಂದಿರುವ ಐಟಿ ಅಧಿಕಾರಿಗಳ ತಂಡ ಇಂದು ಬೆಳಿಗ್ಗೆಯಿಂದಲೇ ದಾಳಿ ಮಾಡಿದ್ದು ಈಗಲೂ ಇನ್ನೂ ಮುಂದುವರೆದಿದೆ. ಈಗಾಗಲೇ ಕೆಲ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು ಇನ್ನೂ ದಾಳಿಯನ್ನು ಮುಂದುವರೆಸಿದ್ದಾರೆ.