ನರೇಂದ್ರ ಗ್ರಾಮದಲ್ಲಿ ಗ್ರಾಮ ಪಂಚಾಯತ ಸದಸ್ಯ ಸಾವು ಮೂರನೇಯ ಬಾರಿಗೆ ಸದಸ್ಯ ರಾಗಿದ್ದರು – ಹೃದಯಾಘಾತ ವಾಗುತ್ತಿದ್ದಂತೆ ಆಸ್ಪತ್ರೆಗೆ ಕರೆದೊಯ್ಯುವಾಗ ಸಾವು…..

Suddi Sante Desk

ನರೇಂದ್ರ –

ಗ್ರಾಮ ಪಂಚಾಯತ ಸದಸ್ಯರೊಬ್ಬರು ಹೃದಯಾ ಘಾತದಿಂದ ಸಾವಿಗೀಡಾದ ಘಟನೆ ಧಾರವಾಡದ ನರೇಂದ್ರ ಗ್ರಾಮದಲ್ಲಿ ನಡೆದಿದೆ.ಈಗಷ್ಟೇ ಮೊನ್ನೆ ನಡೆದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಮೂರನೇಯ ಬಾರಿಗೆ ಗ್ರಾಮ ಪಂ ಚಾಯತ ಸದಸ್ಯರಾಗಿದ್ದ ಸುಗಂಧರಾಜ ನಾಗನಗೌ ಡ ನಾಡಗೌಡದೇಸಾಯಿ (62) ಸಾವಿಗೀಡಾದವರಾ ಗಿದ್ದಾರೆ.ನಿನ್ನೇ ಮಧ್ಯಾಹ್ನ ಮನೆಯಲ್ಲಿ ಕುಳಿತುಕೊಂ ಡಾಗ ಏಕಾಎಕಿಯಾಗಿ ಎದೆನೋವು ಕಾಣಿಸಿಕೊಂಡಿ ತು.ನೋಡು ನೋಡುತ್ತಲೆ ಹೃದಯಾಘಾತವಾಗಿದೆ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಇನ್ನೇನು ಚಿಕಿತ್ಸೆ ನೀಡಬೇಕು ಅನ್ನುವಾಗಲೇ ಚಿಕಿತ್ಸೆ ಫಲಿಸದೇ ಸಾವಿ ಗೀಡಾಗಿದ್ದಾರೆ.ಮೂರನೇಯ ಬಾರಿಗೆ ಸ್ಪರ್ಧೆ ಮಾಡಿ ದ್ದ ಇವರು ಈ ಹಿಂದಿನ ಅವಧಿಯಲ್ಲಿ ಗ್ರಾಮ ಪಂ ಚಾಯತ ಅಧ್ಯಕ್ಷರಾಗಿ ಸಧ್ಯ ಸದಸ್ಯರಾಗಿದ್ದರು.

ಮೃತರ ಅಂತ್ಯ ಸಂಸ್ಕಾರ ನರೇಂದ್ರ ಗ್ರಾಮದಲ್ಲಿ ನೆರವೆರಿತು ಇನ್ನೂ ಮೃತರಾದ ಗ್ರಾಮ ಪಂಚಾಯತ ಸದಸ್ಯನಿಗೆ ಗ್ರಾಮ ಪಂಚಾಯತ ಸದಸ್ಯರು ಮತ್ತು ಗ್ರಾಮದ ಯುವ ಮುಖಂಡರಾದ ಶಂಕರ ಕೋಮಾ ರ ದೇಸಾಯಿ ಸೇರಿದಂತೆ ಹಲವರು ಸಂತಾಪವನ್ನು ಸೂಚಿಸಿದ್ದಾರೆ.ಕುಟುಂಬಕ್ಕೆ ದುಖಃವನ್ನು ತಡೆದುಕೊ ಳ್ಳುವ ಶಕ್ತಿಯನ್ನು ಕೊಡಲೆಂದು ದೇವರಲ್ಲಿ ಪ್ರಾರ್ಥಿ ಸಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.