ಹುಬ್ಬಳ್ಳಿ –
CM ಬಸವರಾಜ ಬೊಮ್ಮಾಯಿ ದೆಹಲಿಯ ಪ್ರವಾಸದ ಬೆನ್ನಲ್ಲೇ ರಾತ್ರೋರಾತ್ರಿ ದೆಹಲಿಗೆ ಹಾರಿದ್ದಾರೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೌದು ರಾಜ್ಯ ರಾಜ ಕಾರಣದಲ್ಲಿ ದಿನಕ್ಕೊಂದು ಬೆಳವಣಿಗೆಯಾಗುತ್ತಿದ್ದು ಹೀಗಾಗಿ ಕುತೂಹಲಕ್ಕೆ ಕಾರಣವಾಗಿದೆ ಮಾಜಿ ಸಿಎಂ ದೆಹಲಿ ಪ್ರಯಾಣ.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ದೀಢಿರ್ ದೆಹಲಿಗೆ ತೆರಳಿರುವುದು ಈಗ ಸಾಕಷ್ಟು ಕುತೂಹಲಕ್ಕೆ ಕಾರಣ ವಾಗಿದೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿಗೆ ಭೇಟಿ ನೀಡಿದ ಬೆನ್ನಲ್ಲೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಹೈಕಮಾಂಡ್ ಬುಲಾವ್ ನೀಡಿದೆ. ಹೀಗಾಗಿ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ ಜಗದೀಶ್ ಶೆಟ್ಟರ್ ದೆಹಲಿ ಪ್ರಯಾಣ. ರಾತ್ರೋ ರಾತ್ರಿಯೇ ದೆಹಲಿಗೆ ಪ್ರಯಾಣ ಬೆಳಿಸಿರುವುದು ಕುತೂ ಹಲಕ್ಕೆ ಕಾರಣವಾಗಿದೆ.

ಮೊನ್ನೆ ಮೊನ್ನೆಯಷ್ಟೇ ಹೋಗಿ ಬಂದ ಬೆನ್ನಲ್ಲೇ ಈಗ ಮತ್ತೆ ದಿಢೀರ್ ಅಂತಾ ಹಾರಿದ್ದಾರೆ.ಇನ್ನೂ ಸಚಿವ ಸಂಪುಟ ಪುನರ್ ರಚನೆ ಮಾಡಿದರೇ ಅದರಲ್ಲಿ ಶೆಟ್ಟರ್ ಅವಕಾಶ ನೀಡಿದರೇ ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎಂಬುವು ದನ್ನು ಅರಿಯಲು ಹಾಗೂ ಯಾರಿಗೆ ಸಚಿವ ಸ್ಥಾನ ಕೊಡ ಬೇಕು ಯಾರನ್ನು ಕೈ ಬಿಡಬೇಕು ಎಂಬುವಂತ ಸಲಹೆ ಬಗ್ಗೆ ಶೆಟ್ಟರ್ ಅವರನ್ನು ಕರೆದಿದ್ದಾರೆ ಎನ್ನಲಾಗುತ್ತಿದೆ.ಬೊಮ್ಮಾ ಯಿ ಸಂಪುಟದಲ್ಲಿ ಸಚಿವ ಸ್ಥಾನ ಬೇಡ ಎಂದಿದ್ದ ಶೆಟ್ಟರ್ ಏಕಾಏಕಿ ದೆಹಲಿ ತೆರಳಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು ಏನಾಗುತ್ತದೆ ಎಂಬೊಂದನ್ನು ಕಾದು ನೋಡಬೇಕು