ಧಾರವಾಡ –
ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿದ್ದ KAS ಅಧಿಕಾರಿ ಸೋಮು ನ್ಯಾಮಗೌಡ ಜೈಲು ಸೇರಿದ್ದಾರೆ. ಹೌದು ಯೊಗೀಶಗೌಡ ಕೊಲೆ ಪ್ರಕರಣದಲ್ಲಿ ಇವರ ನ್ನು ನಿನ್ನೆ ಸಿಬಿಐ ಅಧಿಕಾರಿ ಗಳು ಗದಗ ನಿವಾಸದಲ್ಲಿ ಬಂಧನ ಮಾಡಿದ್ದರು.ನಂತರ ಒಂದು ದಿನಗಳ ಕಾಲ ವಿಚಾರಣೆಗೆ ವಶಕ್ಕೆ ತೆಗೆದುಕೊಂಡು ಇಂದು ಅವಧಿ ಮುಗಿದ ಹಿನ್ನಲೆಯಲ್ಲಿ ಇವರನ್ನು ಜನಪ್ರತಿನಿಧಿ ಗಳ ನ್ಯಾಯಾಲಯಕ್ಕೆ ಹಾಜರು ಮಾಡಿ ನ್ಯಾಯಾಂಗ ಬಂಧನದ ಹಿನ್ನಲೆಯಲ್ಲಿ ಧಾರವಾಡ ಕೇಂದ್ರ ಕಾರಾ ಗೃಹಕ್ಕೆ ಸಿಬಿಐ ಅಧಿಕಾರಿಗಳು ಕಳಿಸಿದ್ದಾರೆ
ಧಾರವಾಡ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದರು ಸಿಬಿಐ ಅಧಿಕಾರಿಗಳು.ಇನ್ನೂ ಸೋಮು ನ್ಯಾಮ ಗೌಡ ಅವರನ್ನು ನೋಡಲು ಸಂಬಂಧಿಕರು ಕುಟುಂ ಬಸ್ಥರು ಉಪನಗರ ಠಾಣೆ ಬಳಿ ಬಂದಿದ್ದರು.ಅತ್ತ ಸಿಬಿಐ ಅಧಿಕಾರಿಗಳು ಇವರನ್ನು ಕಾರಿನಲ್ಲಿ ಕರೆದು ಕೊಂಡು ಹೋದರು.
ಯೋಗೀಶ್ ಹತ್ಯೆಯ ಸಿಬಿಐ ಪ್ರಕರಣದಲ್ಲಿ ಬಂಧನ ವಾಗಿರುವ ಸೋಮು ನ್ಯಾಮಗೌಡ ಸಿಬಿಐ ಕಸ್ಟಡಿ ಅಂತ್ಯಗೊಂಡ ಹಿನ್ನಲೆಯಲ್ಲಿ ವಿಡಿಯೋ ಕಾನ್ಪರನ್ಸ್ ಮೂಲಕ ಕೋರ್ಟ್ ಗೆ ಹಾಜರು ಮಾಡಿದ ನಂತರ
ಬೆಂಗಳೂರಿನ ಜನ ಪ್ರತಿನಿಧಿಗಳ ಕೋರ್ಟ್ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿತು.ಹೀಗಾಗಿ ಧಾರ ವಾಡ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದರು ಸಿಬಿಐ ಅಧಿಕಾರಿಗಳು