ಹುಬ್ಬಳ್ಳಿ –
ಗ್ರಾಮಗಳ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಧ್ಯೇಯದೊಂದಿಗೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಜಲಜೀವನ್ ಮಿಷನ್ ಯೋಜನೆಯಡಿ ಹಾಗೂ ನಬಾರ್ಡ್ ಇನ್ಫ್ರಾಸ್ಟ್ರಕ್ಚರ್ ಡವಲಪ್‍ಮೆಂಟ್ ಅಸಿಸ್ಟೆನ್ಸ್ ನೆರವಿನಿಂದ ಜಿಲ್ಲೆಯ ಕುಂದಗೋಳ, ನವಲಗುಂದ ಹಾಗೂ ಕಲಘಟಗಿ ಪಟ್ಟಣವೂ ಸೇರಿದಂತೆ ಒಟ್ಟು 144 ಗ್ರಾಮ ಪಂಚಾ ತಯಗಳ 388 ಗ್ರಾಮಗಳಿಗೆ ಬಹುಗ್ರಾಮ ಕುಡಿ ಯುವ ನೀರು ಸರಬರಾಜು ಯೋಜನೆಗಾಗಿ 1032. 49 ಕೋಟಿ ರೂ.ಗೆ ರಾಜ್ಯ ಸಚಿವ ಸಂಪುಟ ಆಡಳಿ ತಾತ್ಮಕ ಅನುಮೋದನೆ ನೀಡಿದೆ.

ಈ ವಿಚಾರವಾಗಿ ಕೇಂದ್ರ ಸಚಿವ ಶ್ರೀ ಪ್ರಲ್ಹಾದ ಜೋಶಿಯವರು ಹರ್ಷ ವ್ಯಕ್ತಪಡಿಸಿದ್ದು ಯೋಜನೆ ಅನುಷ್ಠಾನಗೊಳಿಸುವಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಅವರುಗಳಿಗೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ಯೋಜನೆಗಾಗಿ ಕಳೆದ ಒಂದು ವಾರದಿಂದ ನನ್ನೊಂ ದಿಗೆ ಹಾಗೂ ನನ್ನ ಕಛೇರಿಯೊಂದಿಗೆ ಸತತ ಸಂಪರ್ಕ ದಲ್ಲಿದ್ದ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಶಾಸಕ ಶಂಕರಪಾಟೀಲ ಮುನೇನಕೊಪ್ಪ ಅವರು ಗಳಿಗೂ ವಿಶೇಷವಾಗಿ ಅಭಿನಂದಿಸಿವುದಾಗಿ ತಿಳಿಸಿ ದ್ದಾರೆ.

ಸವದತ್ತಿಯ ಮಲಪ್ರಬಾ ಜಲಾಶಯದಿಂದ ನೀರು ಪೂರೈಸುವ ಈ ಯೋಜನೆಯ ಅನುಷ್ಠಾನ ಜಿಲ್ಲೆಯ ನೀರಿನ ಭವಣೆ ತಪ್ಪಿಸಲು ಅತ್ಯಂತ ಮಹತ್ವದ್ದಾದ್ದ ರಿಂದ ಸಚಿವ ಜೋಶಿಯವರು ಸ್ವತಃ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು.ಈ ವಿಷಯವಾಗಿ ಇಂದು ಸಚಿ ವರ ಕಛೇರಿ ಪತ್ರಿಕಾ ಪ್ರಕಟಣೆ ನೀಡಿದ್ದು ಇದರಿಂದ ತೀವ್ರ ಕುಡಿಯುವ ನೀರಿನ ತೊಂದರೆ ಅನುಭವಿಸು ತ್ತಿದ್ದ ಜಿಲ್ಲೆಯ ಗ್ರಾಮಗಳಿಗೆ ನೀರಿನ ಭವಣೆ ತಪ್ಪಿದಂ ತಾಗಿದೆಯೆಂದು ತಿಳಿಸಿದ್ದಾರೆ

ಈ ಯೋಜನೆಯಿಂದ ಗ್ರಾಮದ ಪ್ರತಿ ಮನೆಗೂ ನಳದ ನೀರು ಸಂಪರ್ಕ ಒದಗಿಸುತ್ತಿರುವುದು ವಿಶೇಷ.ಧಾರವಾಡ ಜಿಲ್ಲೆಯಲ್ಲಿ 388 ಗ್ರಾಮಗಳಲ್ಲಿ 179130 ಮನೆಗಳಿವೆ. ಈ ಪೈಕಿ ಧಾರವಾಡ ತಾಲೂ ಕಿನ 114, ಹುಬ್ಬಳ್ಳಿಯ ತಾಲೂಕಿನ 47, ಕಲಘಟಗಿ ತಾಲೂಕಿನ 88, ಕುಂದಗೋಳ ತಾಲೂಕಿನ 51, ನವಲಗುಂದ ತಾಲೂಕಿನಲ್ಲಿ 59 ಜನವಸತಿಗಳಿಗೆ ನಳದ ಮೂಲಕ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ಯೋಜನೆ ರೂಪಿಸಲಾಗಿದೆ.

ಯೋಜನೆಯ ಅನುಷ್ಠಾನ ಕಾರ್ಯ ಆರಂಭಗೊಂ ಡಿದ್ದು, ಜಿಲ್ಲೆಯ ಎಲ್ಲ ಮನೆಗಳಿಗೂ ನಳದ ನೀರು ಸಂಪರ್ಕ ಶೀಘ್ರದಲ್ಲಿಯೇ ಲಭ್ಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.ಜಿಲ್ಲೆಯ ಎಲ್ಲ ಜನವಸತಿ ಪ್ರದೇಶ ಗಳಿಗೆ ಕುಡಿಯುವ ನೀರು ಪೂರೈಸುವ ಈ ಯೋಜ ನೆಯಿಂದ ಗ್ರಾಮಾಂತರ ಪ್ರದೇಶಗಳಲ್ಲಿ ನೆಲೆಸಿರುವ ಪ್ರತಿ ವ್ಯಕ್ತಿಗೆ ಪ್ರತಿ ದಿನ 55 ಲೀ. ಶುದ್ಧ ಕುಡಿಯುವ ನೀರನ್ನು ಪೂರೈಸುವ ಉದ್ದೇಶ ಜಲಜೀವನ್ ಮಿಷ ನ್ ಹೊಂದಿದೆ. ಈ ಯೋಜನೆ ಮೂಲಕ ಗ್ರಾಮಗ ಳಿಗೆ ನೀರು ಪೂರೈಸುವ ಜಲಮೂಲಗಳ ನವೀಕರ ಣವನ್ನು ಮಾಡಲಾಗುತ್ತದೆ ಮತ್ತು ಈಗಾಗಲೇ ಇರುವ ಓವರ್ ಹೆಡ್ ಟ್ಯಾಂಕ್‍ಗಳ ನವೀಕರಣ ಮಾಡಿ ಅಗತ್ಯವಾದರೆ ನಿರ್ಮಿಸಲಾಗುತ್ತದೆ ಎಂದರು ಇನ್ನೂ ಪ್ರಮುಖವಾಗಿ ಯೋಜನೆ ಅನುಷ್ಠಾನಕ್ಕೆ ಸಹಕರಿಸಿದ ಜಿಲ್ಲೆಯ ಎಲ್ಲಾ ಶಾಸಕರಿಗೆ ಧನ್ಯವಾದ ಗಳನ್ನು ಹೇಳಿದರು
