ಧಾರವಾಡ –
ಮಹಾಮಾರಿಯನ್ನು ಕಟ್ಟಿಹಾಕಲು ರಾಜ್ಯಾದ್ಯಂತ ಇಂದಿನಿಂದ ಜನತಾ ಕರ್ಫ್ಯೂವನ್ನು ಜಾರಿ ಮಾಡಲಾ ಗಿದೆ.ಬೆಳಿಗ್ಗೆ ಆರು ಘಂಟೆಯಿಂದ ಹತ್ತು ಗಂಟೆಯವ ರೆಗೆ ದಿನ ಬಳಕೆಯ ವಸ್ತುಗಳ ಖರೀದಿಗೆ ಅವಕಾಶ ವನ್ನು ನೀಡಲಾಗಿದೆ.

ಇದನ್ನು ಹೊರತು ಪಡಿಸಿ ಉಳಿದ ಸಮಯದಲ್ಲಿ ಅನಾವಶ್ಯಕವಾಗಿ ತಿರುಗಾಡಲು ಬ್ರೇಕ್ ಹಾಕಲಾಗಿ ದ್ದು ಇನ್ನೂ ಧಾರವಾಡದಲ್ಲೂ ಕೂಡಾ ಪೊಲೀಸರು ಪುಲ್ ಆಲರ್ಟ್ ಆಗಿದ್ದಾರೆ. ನಗರದಲ್ಲೂ ಕೂಡಾ ಪೊಲೀಸರು ತಮ್ಮ ತಮ್ಮ ವ್ಯಾಪ್ತಿಯಲ್ಲಿನ ಕ್ಷೇತ್ರಗಳ ಲ್ಲಿ ತಿರುಗಾಡುತ್ತಿರುವವರಿಗೆ ಸಂಪೂರ್ಣವಾಗಿ ಕಡಿವಾಣ ಹಾಕಿದ್ದು ಇನ್ನೂ ಸಂಚಾರಿ ಪೊಲೀಸರು ಕೂಡಾ ಸುಮ್ಮನೆ ತಿರುಗಾಡುತ್ತಿರುವ ವಾಹನಗಳಿಗೆ ಬ್ರೇಕ್ ಹಾಕಿದ್ದಾರೆ.

ನಗರದ ಹಲವೆಡೆ ಸಂಚಾರಿ ಪೊಲೀಸರು ಕೂಡಾ ನಾಕಾಬಂಧಿ ಹಾಕಿದಂತೆ ನಿಯಂತ್ರಣವನ್ನು ಮಾಡು ತ್ತಿದ್ದು ಇನ್ನೂ ಟೋಲ್ ನಾಕಾದಲ್ಲಿ ಸಂಚಾರಿ ಪೊಲೀ ಸರು ಅನಾವಶ್ಯಕವಾಗಿ ತಿರುಗಾಡುತ್ತಿದ್ದ ಬೈಕ್ ಗಳ ನ್ನು ಹಿಡಿದು ಅವರಿಗೆ ಯಾವುದೇ ರೀತಿಯಲ್ಲಿ ದಂಡ ವನ್ನು ಹಾಕದೇ ಮೊದಲನೇಯ ದಿನವಾದ ಹಿನ್ನಲೆ ಯಲ್ಲಿ ಅವರಿಗೆ ಬುದ್ದಿ ಮಾತನ್ನು ಹೇಳಿ ಇನ್ನೂ ಕೆಲ ವರಿಗೆ ಸಂಚಾರಿ ಪೊಲೀಸರು ಭಸ್ಕಿಯನ್ನು ಹೊಡೆ ಸುತ್ತಾ ಕಳಿಸಿ ಕೊಡುತ್ತಿದ್ದಾರೆ.
ಮೊದಲನೇಯ ದಿನವಾದ ಹಿನ್ನಲೆಯಲ್ಲಿ ಯುವಕರಿ ಗೆ ಧಾರವಾಡದಲ್ಲಿ ಸಂಚಾರಿ ಪೊಲೀಸರು ಬುದ್ದಿ ಮಾತನ್ನು ತಿಳಿ ಹೇಳಿ ಮನೆಯಲ್ಲಿ ಇರಿ ಅನಾವಶ್ಯಕ ವಾಗಿ ಹೊರಗೆ ತಿರುಗಾಡಬೇಡಿ ಎನ್ನುತ್ತಾ ಬುದ್ದಿ ಹೇಳುತ್ತಾ ಇನ್ನೂ ಕೆಲವರಿಗೆ ಬಿಸಿ ಮುಟ್ಟಿಸುವ ನಿಟ್ಟಿ ನಲ್ಲಿ ಭಸ್ಕಿ ಹೊಡೆಸುತ್ತಿರುವುದು ಕಂಡು ಬಂದಿತು.