ಧಾರವಾಡ –
ಹುಬ್ಭಳ್ಳಿಯ ನವನಗರದಲ್ಲಿ ವಕೀಲ ವಿನೋದ ಪಾಟೀಲ ಬಂಧನ ಖಂಡಿಸಿ ಪೊಲೀಸರು ಮತ್ತು ವಕೀಲರ ನಡುವೆ ನಡೆಯುತ್ತಿದ್ದ ಸಂಘರ್ಷ ಕೊನೆಯಾಗಿದೆ. ಕಳೆದ ನವಂಬರ್ 26 ರಂದು ನವನಗರದ ಕರ್ನಾಟಕ ಸರ್ಕಲ್ ಬಳಿ ರಾತ್ರಿ ಹತ್ತೂವರೆಗೆ ವಕೀಲ ವಿನೋದ ಪಾಟೀಲ ಕೆಲವೊಂದಿಗೆ ಸೇರಿಕೊಂಡು ಗಲಾಟೆ ಮಾಡುತ್ತಿದ್ದರು. ಈ ಕುರಿತಂತೆ ಸಾರ್ವಜನಿಕರು ನವನಗರ ಪೊಲೀಸ್ ಠಾಣೆಗೆ ಪೊನ್ ಮಾಡಿ ಮಾಹಿತಿಯನ್ನು ನೀಡಿದ್ದರು. ಈ ಮಾಹಿತಿ ಬರುತ್ತಿದ್ದಂತೆ ಸ್ಥಳಕ್ಕೇ ಇನಸ್ಪೇಕ್ಟರ್ ಪ್ರಭು ಸೂರಿನ್ ಮತ್ತು ಸಿಬ್ಬಂದಿಗಳು ಹೋಗಿ ವಿಚಾರಣೆ ಮಾಡಿ ಇಲ್ಲಿಂದ ಹೋಗಿ ವಿವಾದವಿದ್ದರೇ ಪೊಲೀಸ್ ಠಾಣೆಗೆ ಬನ್ನಿ ಎಂದು ಹೇಳಿದ್ದರು. ನಾವು ಬರೊದಿಲ್ಲ ಹೊಗೊದಿಲ್ಲ ಎಂದು ಮಾತನಾಡಿ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದರು. ಇದನ್ನು ಗಂಭಿರವಾಗಿ ತಗೆದುಕೊಂಡಿದ್ದ ಪೊಲೀಸ್ ಇನಸ್ಪೇಕ್ಟರ್ ಪ್ರಭು ಸೂರಿನ್ ವಿನೋದ ಪಾಟೀಲ್ ರನ್ನು ವೈಧ್ಯಕೀಯ ಪರೀಕ್ಷೆ ಮಾಡಿಸಿ ಮೂವರನ್ನು ಬಂಧಿಸಿ ಕೈಗೆ ಬೇಡಿ ಹಾಕಿ ನ್ಯಾಯಾಲಯಕ್ಕೇ ಹಾಜರು ಮಾಡಿ ಜೈಲಿಗೆ ಕಳಿಸಿದ್ದರು.ಅತ್ತ ಇದೇಲ್ಲ ಆಗುತ್ತಿದ್ದಂತೆ ಇತ್ತ ಇದನ್ನು ಗಂಭಿರವಾಗಿ ತಗೆದುಕೊಂಡ ಹುಬ್ಬಳ್ಳಿ ಧಾರವಾಡ ನ್ಯಾಯವಾದಿಗಳು ಬೀದಿಗಿಳಿದು ವಕೀಲ ವಿನೋದ ಪಾಟೀಲ ಬೆನ್ನಿಗೆ ನಿಂತು ಸಭೆ ಮಾಡಿ ವಕೀಲರೊಂದಿಗೆ ಹೀಗೆ ನಡೆದುಕೊಂಡವರ ಮೇಲೆ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಪ್ರತಿಭಟನೆ ಮಾಡಿದ್ದರು. ಅಲ್ಲದೇ ಕೆಲ ಬೇಡಿಕೆಗಳನ್ನು ಇಟ್ಟುಕೊಂಡು ಪೊಲೀಸ್ ಅಧಿಕಾರಿಗಳಿಗೆ ಗಡುವು ನೀಡಿದ್ದರು. ಇನಸ್ಪೇಕ್ಟರ್ ಪ್ರಭು ಸೂರಿನ್ ಅವರನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಬೇಕು ಅವರ ಮೇಲೆ ಪ್ರಕರಣವನ್ನು ದಾಖಲಿಸಿ ತನಿಖೆ ಮಾಡುವಂತೆ ಪಟ್ಟು ಹಿಡಿದಿದ್ದರು. ವಕೀಲರ ಬೇಡಿಕೆಗಳಿಗೆ ಮಣಿದ ಹಿರಿಯ ಪೊಲೀಸ್ ಅಧಿಕಾರಿಗಳು ವಕೀಲರ ಕೈಗೆ ಬೇಡಿ ಹಾಕಿದ ಒರ್ವ ಪೇದೆಯನ್ನು ಅಮಾನತು ಮಾಡಿ ಇತ್ತ ಇನ್ಸ್ಪೆಕ್ಟರ್ ಅವರನ್ನು ಪೊಲೀಸ್ ಆಯುಕ್ತರ ಕಚೇರಿಗೆ ವರ್ಗಾವಣೆ ಮಾಡಿದ್ದರು. ಇಷ್ಟಾದರೂ ಕೂಡಾ ಎಚ್ಚೇತ್ತುಕೊಳ್ಳದ ವಕೀಲರು ನಾಳೆ ಸೋಮವಾರದ ಗಡುವು ನೀಡಿದ್ದರು. ಸೋಮವಾರದ ಒಳಗಾಗಿ ಇನ್ಸ್ಪೆಕ್ಟರ್ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು ಅವರ ಮೇಲೆ ಪ್ರಕರಣ ದಾಖಲಿಸಿ ತನಿಖೆ ಮಾಡುವಂತೆ ಪಟ್ಟು ಹಿಡಿದು ಗಡುವು ನೀಡಿದ್ದರು. ಗಡುವು ನೀಡಿದ ಹಿನ್ನಲೆಯಲ್ಲಿ ಇದರಿಂದ ಎಚ್ಚೆತ್ತುಕೊಂಡ ಹಿರಿಯ ಪೊಲೀಸ್ ಅಧಿಕಾರಿಗಳು ಧಾರವಾಡ ಜಿಲ್ಲಾ ವಕೀಲರ ಸಂಘದಲ್ಲಿ ತುರ್ತು ಸಭೆ ಮಾಡಿ ರಾಜಿ ಸಂಧಾನವನ್ನು ಮಾಡಿದ್ರು.
ಕೆಲವೊತ್ತು ಆಗಿರುವ ವಿಚಾರಗಳ ಕುರಿತಂತೆ ಮಾತನಾಡಿ ಕೊನೆಗೆ ಇನಸ್ಪೇಕ್ಟರ್ ಪ್ರಬು ಸೂರಿನ್ ಅವರಿಂದ ಮಾತನಾಡಿಸಿ ಇದೊಂದು ಉದ್ದೇಶಪೂರ್ವಕವಾದ ಘಟನೆಯಲ್ಲ ಆಗಿರುವ ಘಟನೆಗೆ ವಿಷಾದವ್ಯಕ್ತಪಡಿಸುತ್ತೇನೆ ಎನ್ನುತ್ತಾ ಕ್ಷಮೆ ಕೇಳಿದರು. ಇನ್ನೊಮ್ಮೆ ಹೀಗೆ ಆಗಲಾರದಂತೆ ನೋಡಿಕೊಳ್ಳುತ್ತೇವೆ ಎನ್ನುತ್ತಾ ರಾಜಿ ಸಂಧಾನ ಸಭೆಯನ್ನು ಮುಗಿಸಿದ್ರು.
ಇನ್ನೂ ಈ ಒಂದು ಸಭೆಯಲ್ಲಿ ವಕೀಲರ ಸಂಘದ ಅಧ್ಯಕ್ಷರು ಮುಖಂಡರು ನ್ಯಾಯವಾದಿಗಳು ಉಪಸ್ಥಿತರಿದ್ದರು. ಇನ್ನೂ ಇತ್ತ ಪೊಲೀಸ್ ಇಲಾಖೆಯಿಂದ ಉಪನಗರ ಇನಸ್ಪೇಕ್ಟರ್ ಪ್ರಮೋದ ಯಲಿಗಾರ, ವಿದ್ಯಾಗಿರಿ ಪೊಲೀಸ್ ಠಾಣೆ ಇನಸ್ಪೇಕ್ಟರ್ ಮಹಾಂತೇಶ ಬಸಾಪೂರ , ಸೇರಿದಂತೆ ಹಲವರು ಉಪಸ್ಥಿತರಿದ್ದರು.ಅಂತೂ ಇಂತೂ ಕಳೆದ ಹತ್ತು ದಿನಗಳಿಂದ ವಕೀಲರು ಮತ್ತು ಪೊಲೀಸರ ನಡುವೆ ನಡೆಯುತ್ತಿದ್ದ ತಿಕ್ಕಾಟ ಶಾಂತವಾಗಿದೆ.