ಕುಂದಗೋಳ –
ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿ ರಸ್ತೆ ಅಕ್ಕ ಪಕ್ಕದಲ್ಲಿ ಎಲ್ಲೆಂದರಲ್ಲಿ ತಲೆ ಎತ್ತಿರುವ ಡಬ್ಬಾ ಅಂಗಡಿಗಳ ಮತ್ತು ಕಟ್ಟಡಗಳನ್ನು ತೆರವು ಮಾಡಲಾಯಿತು.

ನಗರದ ಹಲವು ಕಡೆಗಳಲ್ಲಿ ಅದರಲ್ಲೂ ನ್ಯಾಯಾಲಯದ ಆವರಣದಲ್ಲಿ ಅಕ್ಕ ಪಕ್ಕದಲ್ಲಿ ಅನಧಿಕೃತ ಕಟ್ಟಡ ಹಾಗೂ ಡಬ್ಬಾ ಅಂಗಡಿ ಕಾರ್ಯಾಚರಣೆ ಮಾಡಲಾಯಿತು.

ಬೆಳ್ಳಂ ಬೆಳಿಗ್ಗೆ ಮುಂಜಾನೆ ರವಿವಾರ ತಾಲೂಕು ಆಡಳಿತ ವತಿಯಿಂದ ಸೂಕ್ತ ಪೊಲೀಸ್ ಭದ್ರತೆಯ ನಡುವೆ ತೆರವುಗೊಳಿಸಲಾಯಿತು.

ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ಮಾಡಲಾಯಿತು. 13 ಡಬ್ಬಾ ಅಂಗಡಿ,7 ಇನ್ನಿತರ ಅಂಗಡಿಗಳನ್ನು ತೆರುವು ಮಾಡಲಾಯಿತು.

ಇನ್ನೂ ಈ ಕಾರ್ಯಾಚರಣೆಯು ಕುಂದಗೋಳ ತಾಲೂಕಿನ ತಹಶಿಲ್ದಾರ ಬಿ ಎಮ್ ಮೇಳವಂಕಿ, ಸಿಪಿಐ ಬಸವರಾಜ ಕಲ್ಲಮ್ಮನವರ, ಲೋಕೋಪಯೋಗಿ ಇಲಾಖೆಯ ಶರಣ ಕುಮಾರ, ಎಮ್ ಪಾಟೀಲ,ರಮೇಶ ಗೋವಂಕರ, ಪಟ್ಟಣ ಪಂಚಾಯತ ಸಿಬ್ಬಂದಿ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿ ಗಳು ಈ ಒಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.