ಧಾರವಾಡ –
ಸಾಮಾನ್ಯವಾಗಿ ಮಕ್ಕಳು ಇಲ್ಲವೇ ಜಾನುವಾರು ಗಳನ್ನು ಯಾರಾದರೂ ದತ್ತು ತಗೆದುಕೊಳ್ಳೊದನ್ನು ನೋಡಿದ್ದೇವೆ ಕೇಳಿದರೆ ಆದರೆ ಇಲ್ಲೊಬ್ಬ ಜನಪ್ರತಿನಿ ಧಿಗಳು ಸರ್ಕಾರಿ ಶಾಲೆಯನ್ನು ಅಭಿವೃದ್ದಿ ಪಡಿಸುವ ಉದ್ದೇಶದಿಂದಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದನ್ನು ದತ್ತು ತಗೆದುಕೊಂಡಿದ್ದಾರೆ.

ಹೌದು ಧಾರವಾಡ ತಾಲ್ಲೂಕಿನ ಜೀರಿಗಿವಾಡ ಶಾಲೆಯನ್ನು ವಿಧಾನ ಪರಿಷತ್ ಸದಸ್ಯರು ಈಗ ದತ್ತು ಸ್ವೀಕಾರ ಮಾಡಿದ್ದಾರೆ. ಶಾಲೆಯ ಶೈಕ್ಷಣಿಕ ಪ್ರಗತಿಗಾಗಿ ವಿಧಾನ ಪರಿಷತ್ ಸದಸ್ಯರಾದ ಡಾ ಸಾಬಣ್ಣ ತಳವಾರ ಇವರು ಸರ್ಕಾರಿ ಶಾಲೆಯನ್ನು ಈಗ ದತ್ತು ತಗೆದುಕೊಂಡಿದ್ದಾರೆ. ಮಾದರಿ ಶಾಲೆಯ ನ್ನು ಮಾಡುವ ಉದ್ದೇಶದಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜೀರಿಗಿವಾಡ ಇದನ್ನು ದತ್ತು ತಗೆದುಕೊಂಡಿದ್ದಾರೆ

ಭೌತಿಕವಾಗಿ ಶಾಲಾ ವಾತಾವರಣವನ್ನು ಸುಂದರ ವಾಗಿಸುವ ಮತ್ತು ಮಕ್ಕಳ ಶೈಕ್ಷಣಿಕ ಗುಣಮಟ್ಟ ವನ್ನು ಹೆಚ್ಚಿಸಲು ಶಿಕ್ಷಕರಿಗೆ ಸಲಹೆ ನೀಡಿದರು. ಇನ್ನೂ ಮುಖ್ಯವಾಗಿ ಈಗಾಗಲೇ ಬೆಳಗಾವಿ ಮತ್ತು ಗುಲಬರ್ಗಾ ಜಿಲ್ಲೆಯಲ್ಲಿ ಎರಡು ಸರ್ಕಾರಿ ಶಾಲೆಗಳ ನ್ನು ದತ್ತು ತಗೆದುಕೊಂಡಿರುವ ಇವರು ಈಗ ಧಾರವಾಡ ಜಿಲ್ಲೆಯಲ್ಲಿ ಮತ್ತೊಂದು ಶಾಲೆಯನ್ನು ತಗೆದುಕೊಂಡಿದ್ದಾರೆ.

ಈ ಸಂದಭ೯ದಲ್ಲಿ ಧಾರಾವಾಡ ಉಪನಿದೇ೯ಶಕ ರಾದ ಮೋಹನ್ ಕುಮಾರ ಹಂಚಾಟೆ ಮಾತನಾಡಿ ಶಿಕ್ಷಕರ ಕೊರತೆ ಸರಿಪಡಿಸುವುದು ಇಲಾಖೆ ಯಿಂದ ಭೌತಿಕ ಹಾಗೂ ಶೈಕ್ಷಣಿಕ ಸೌಲಭ್ಯ ಒದಗಿಸುವುದಾಗಿ ಹೇಳಿದರು. ಇದೇ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಧಾರವಾಡ ಶಹರ ಗಿರೀಶ್ ಪದಕಿ ಮಾತನಾಡಿ ನಿಮ್ಮೂರ ಶಾಲೆ ನಮ್ಮೆಲ್ಲರ ಶಾಲೆ ಎಂದರು

ಇವತ್ತು ವಿಶ್ವ ಪುಸ್ತಕ ದಿನದ ಅಂಗವಾಗಿ ಉಮೇಶ್ ಬೊಮ್ಮಕ್ಕನವರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಧಾರ ವಾಡ ಗ್ರಾಮೀಣ ಅವರ ಶೈಕ್ಷಣಿಕ ಕಾಯ೯ಕ್ರಮ ವಾದ ಪುಸ್ತಕ ಜೋಳಿಗೆ ಕಾಯ೯ವನ್ನು ನೆನಪಿಸಿದ ರು.

ಇನ್ನೂ ಇದೇ ವೇಳೆ ಗ್ರಾಮ ಪಂಚಾಯಿತಿ ಸದಸ್ಯ ರಾದ ಪ್ರಭಾಕರ್ ದೇಶಪಾಂಡೆಯವರು ಗ್ರಾಮದ ಅಭ್ಯುದಯ ಕುರಿತಾಗಿ ಉದ್ಘಾಟಕರೊಂದಿಗೆ ಚಚಿ೯ ಸಿದರು.ಉಪಾಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಹೋರಕೇರಿ, ಅಶ್ವಿನ ರವರು ,SDMC ಅಧ್ಯಕ್ಷರಾದ ಶಿವರಾಯಪ್ಪ ರಬ್ಬಣ್ಣಿ, ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಗುರುಬಳಗ ಮತ್ತು ಗ್ರಾಮ ವಿಕಾಸ ಯುವ ಸಂಘಟಕರು ಉಪಸ್ಥಿತರಿದ್ದರು.ಸಿ .ಆರ್.ಪಿ. ಅಧಿಕಾರಿಗಳಾದ ಆರ್. ಎಂ.ಕುರ್ಲಿ ಸ್ವಾಗತಿಸಿದರು, ಸಹಶಿಕ್ಷಕಿಯರಾದ ಶ್ರೀಮತಿ ಚಂದ್ರಕಲಾ ನಿರೂಪಿಸಿ ದರು.ಶಿಕ್ಷಕರಾದ M H ಮಣಿಗಾರರವರು ವಂದಿಸಿ ದರು.ಇನ್ನೂ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿ ಸರ್ಕಾರಿ ಶಾಲೆಯನ್ನು ದತ್ತು ತಗೆದುಕೊಂಡಿರುವ ವಿಧಾನ ಪರಿಷತ್ ಸದಸ್ಯರ ಕಾರ್ಯಕ್ಕೆ ಶಿಕ್ಷಕ ಬಂಧುಗಳಾದ ಎಲ್ ಐ ಲಕ್ಕಮ್ಮನವರ, ಶರಣಬಸ ವ ಬನ್ನಿಗೊಳ, ಸಂಗಮೇಶ ಕನ್ನಿನಾಯ್ಕರ್,ಹೆಚ್ ಎಫ್ ಪಾಟೀಲ,ರವಿ ಬಂಗೇನವರ,ಗೋವಿಂದ ಜುಜಾರೆ ಅಕ್ಬರಅಲಿ ಸೋಲಾಪೂರ,ರಾಜುಸಿಂಗ್ ಹಲವಾಯಿ, ಕೆ ಎಮ್ ಮುನವಳ್ಳಿ,ಎಸ್ ಎ ಜಾಧ ವ,ಎಸ್ ಎಫ್,ಹನಿಗೊಂಡ,ಅಶೋಕ ಸಜ್ಜನ, ಸೇರಿದಂತೆ ಹಲವರು ದತ್ತು ತೆಗೆದುಕೊಂಡಿದಕ್ಕೆ ಅಭಿನಂದಿಸಿದರು