ಧಾರವಾಡ
ಧಾರವಾಡದ ಹೆಸರಾಂತ ಟ್ಯೂಟೋರಿಯಲ್ಸ್ ಗಳಲ್ಲಿ ಒಂದಾಗಿರುವ ಜೋಶಿ ಟುಟೋರಿಯಲ್ಸ್ ನ ಆನ್ ಲೈನ್ ಸ್ಟುಡಿಯೋ ಆರಂಭಗೊಂಡಿದೆ.ನಗರದ ಮಾಳಮಡ್ಡಿಯ ಕೇಂದ್ರ ಕಚೇರಿಯಲ್ಲಿ ಆನ್ ಲೈನ್ ಕ್ಲಾಸ್ ಗಾಗಿ ಸ್ಟುಡಿಯೋವನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಜೋಶಿ ಟ್ಯೂಟೋರಿಯಲ್ಸ್ ಆರಂಭ ಮಾಡಿದೆ.

ಸಂಸ್ಥೆಯ ಮುಖ್ಯಸ್ಥ ವಿನಾಯಕ ಜೋಶಿ ನೇತ್ರತ್ವದಲ್ಲಿ ಸ್ಟುಡಿಯೋವನ್ನು ನಿರ್ಮಾಣ ಮಾಡಲಾಗಿದೆ. ಇನ್ನೂಸಿದ್ದಗೊಂಡ ನೂತನ ಆನ್ ಲೈನ್ ಸ್ಟುಡಿಯೋವನ್ನು ಹಿರಿಯ ನ್ಯಾಯವಾದಿ ಅರುಣ ಜೋಶಿ ಉಧ್ಟಾಸಿದ್ರು.

ಕರೋನಾ ಹಿನ್ನಲೆಯಲ್ಲಿ ಈವರೆಗೆ ಸರ್ಕಾರ ಟ್ಯೂಟೋರಿಯಲ್ಸ್ ಗೆ ಅನುಮತಿಯನ್ನು ನೀಡಿಲ್ಲ ಹೀಗಾಗಿ ಆನ್ ಲೈನ್ ಟ್ಯೂಶನ್ ಆರಂಭ ಮಾಡುವ ಉದ್ದೇಶದಿಂದ ಸ್ಟುಡಿಯೋ ನಿರ್ಮಾಣ ಮಾಡಿದ್ದು ಇನ್ನೂ ಆನ್ ಲೈನ್ ನಲ್ಲಿಯೇ ಒಂಬತ್ತು ಮತ್ತು ಹತ್ತನೇಯ ತರಗತಿಗಳಿಗೆ ಮಾತ್ರ ಆರಂಭವಾಗಲಿವೆ.

ಡಿಸೆಂಬರ್ 1 ರಿಂದ ರೆಗ್ಯೂಲರ್ ಆಗಿ ಎಲ್ಲಾ ವರ್ಗಗಳಿಗೆ ಟ್ಯೂಶನ್ ಮಾಡಲು ಸಂಸ್ಥೆಯ ಮುಖ್ಯಸ್ಥ ವಿನಾಯಕ ಜೋಶಿ ಪ್ಲಾನ್ ಮಾಡಿಕೊಂಡಿದ್ದಾರೆ.ಇನ್ನೂ ಒಂದು ಸ್ಟುಡಿಯೋ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿ ಅರುಣ ಜೋಶಿಯವರೊಂದಿಗೆ ವಿರೇಶ ವಿರೇಶ ಅಂಚಟಗೇರಿ, ಎಸ್ ಬಿ ಹಿಂಚಿಗೇರಿ, ವಿನಾಯಕ ಜೋಶಿ ,ಶ್ರೀಕಾಂತ ಜೋಶಿ ಸೇರಿದಂತೆ ಸಂಸ್ಥೆಯ ಸಿಬ್ಬಂದ್ದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.