ಕಲಬುರಗಿ –
ಸಾಲದ ಬಾಧೆ ತಾಳದೇ ಪತ್ರಕರ್ತ ರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ಯಲ್ಲಿ ನಡೆದಿದೆ.ಕಲಬುರಗಿಯ ಪತ್ರಕರ್ತ ಲೇಖಕ ಕೆ.ಎನ್.ರೆಡ್ಡಿ ಆತ್ಮಹತ್ಯೆ ಮಾಡಿಕೊಂಡವರಾಗಿ ದ್ದಾರೆ.ನ್ಯೂಸ್ 9, ದಿ ಹಿಂದೂ ಮತ್ತು ಡೆಕ್ಕನ್ ಕ್ರೋನಿಕಲ್ ನಲ್ಲಿ ಸೇವೆ ಸಲ್ಲಿಸಿದ್ದ ಕೆ.ಎನ್ ರೆಡ್ಡಿ ರಾಯಚೂರು ಮೂಲದ ಕೆ.ಎನ್ ರೆಡ್ಡಿ ಕಲಬುರ ಗಿಯಲ್ಲಿ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆ ಯನ್ನು ಮಾಡಿಕೊಂಡಿದ್ದಾರೆ.
ರಾಯಚೂರು ಮೂಲದ ಪತ್ರಕರ್ತ ಕೆ.ಎನ್ ರೆಡ್ಡಿ, ರಾಯಚೂರಿನಲ್ಲಿ ಶಾಲೆ ಆರಂಭಿಸಿ ಸಾಲ ಮಾಡಿ ಕೊಂಡಿದ್ದರು.ಸಾಲದಿಂದ ತೀವ್ರ ಡಿಸ್ಟ್ರಬ್ ಆಗಿದ್ದ ಕೆ.ಎನ್ ರೆಡ್ಡಿ ವಿಷ ಸೇವಿಸಿ ಆತ್ಮಹತ್ಯೆ ಗೆ ಯತ್ನಿಸಿ ದ್ದಾರೆ.ನಂತರ ಕಟ್ಟಡದ ಮೇಲಿಂದು ಜಿಗಿದು ಆತ್ಮಹತ್ಯೆಯನ್ನು ಮಾಡಿಕೊಂಡರು. ಕಲಬುರ ಗಿಯ ವಿವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.