ಹುಬ್ಬಳ್ಳಿ –
ಚಂದ್ರಯಾನ ಯಶಸ್ವಿಗೆ ಹುಬ್ಬಳ್ಳಿಯಲ್ಲಿ ಸಂಭ್ರಮಿಸಿ ವಿಜಯೋತ್ಸವ ಆಚರಿಸಿದ ಪತ್ರಕರ್ತರು – ಕರ್ತವ್ಯದ ಜೊತೆ ದೇಶವೆ ಹೆಮ್ಮೆ ಪಡುವಂತೆ ಸಾಧನೆ ಮಾಡಿದ ಇಸ್ರೋ ಟೀಮ್ ಗೆ ಅಭಿನಂದನೆ ಸಲ್ಲಿಸಿದ ಪತ್ರಕರ್ತ ಮಿತ್ರರು…..
ನಿರೀಕ್ಷೆಯಂತೆ ಚಂದ್ರಯಾನ ಯಶಸ್ಸು ಕಂಡಿದ್ದು ಚಂದ್ರನ ಮೇಲೆ ವಿಕ್ರಮ್ ಲ್ಯಾಂಡ್ ಆಗಿದ್ದು ಈ ಒಂದು ಹಿನ್ನಲೆಯಲ್ಲಿ ಇಡಿ ದೇಶವೆ ಸಂತೋಷದ ಅಲೆಯಲ್ಲಿ ಸಂಭ್ರಮದ ಸಾಧನೆಯಲ್ಲಿ ತೇಲಾ ಡುತ್ತಿದೆ.ಇದರಿಂದಾಗಿ ದೇಶದ ಜನರು ಸಂಭ್ರಮಿ ಸುತ್ತಾ ಇಸ್ರೋ ಟೀಮ್ ಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.
ಇನ್ನೂ ಇತ್ತ ಕರ್ತವ್ಯದ ಜೊತೆಯಲ್ಲೂ ಹುಬ್ಬಳ್ಳಿ ಯಲ್ಲಿ ಪತ್ರಕರ್ತ ಮಿತ್ರರು ಚಂದ್ರಯಾನ ಯಶಸ್ಸಿಗೆ ವಿಜಯೋತ್ಸವವನ್ನು ಆಚರಣೆ ಮಾಡಿದರು.ಹೌದು ಕರ್ತವ್ಯದ ಜೊತೆ ದೇಶಾ ಭಿಮಾನ ಸಾಧನೆ ಮಾಡಿದವರಿಗೆ ಅಭಿನಂದ. ನೆಗಳನ್ನು ಸಲ್ಲಿಸುವ ನಿಟ್ಟಿನಲ್ಲಿ ಪತ್ರಕರ್ತ ಮಿತ್ರರು ವಿಜಯೋತ್ಸವ ಆಚರಣೆ ಮಾಡಿದರು.ಹೌದು
ಚಂದ್ರಯಾನ ಯಶಸ್ವಿಗೊಂಡಿದ್ದಕ್ಕಾಗಿ ನಗರದ ಪತ್ರಕರ್ತರ ಭವನದ ಮುಂದೆ ಪತ್ರಕರ್ತ ಮಿತ್ರರು ವಿಜಯೋತ್ಸವ ಆಚರಣೆ ಯೊಂದಿಗೆ ಸಂಭ್ರಮಿಸಿ ದರು.ಚಂದ್ರನ ಮೇಲೆ ವಿಕ್ರಮ್ ಲ್ಯಾಂಡ್ ಆಗಿದ್ದ ಕ್ಕಾಗಿ ಪತ್ರಕರ್ತರು ಪಟಾಕಿ ಸಿಡಿಸಿ ಜಯ ಘೋಷಣೆ ಕೂಗಿ ಸಂಭ್ರಮಿಸಿದರು.
ಚಂದ್ರಯಾನ-3 ವಿಕ್ರಮ್ ನ್ನು ಇಸ್ರೋ ಲ್ಯಾಂಡ್ ಮಾಡಿದ್ದು ಯಶಸ್ವಿಯಾಗಿ ಲ್ಯಾಂಡ್ ಆದ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿ ಘೋಷಣೆ ಕೂಗುತ್ತ ಸಂಭ್ರಮಾಚರಣೆ ಮಾಡಿದರು.ಈ ಸಂದರ್ಭದಲ್ಲಿ ಪತ್ರಕರ್ತರಾದ ಪರಶುರಾಮ ತಹಶೀಲ್ದಾರ, ಸುನೀಲ ಪಾಟೀಲ್,ಈರಣ್ಣಾ,ರಾಜು ಧಕಣಿ,ಪಿ ಶೇಖರ್ ,ರೋಹಣ,ಸಂಗಮೇಶ ಸತ್ತಿಗೇರಿ,
ಮಹೇಶ ಬೋಜಗಾರ, ವೆಂಕಟೇಶ, ಅಪ್ಪಣ್ಣ, ಸಂತೋಷ ನರೇಗಲ್,ಶಕ್ತಿ,ಸಂಗಮೇಶ ಸತ್ತಿಗೇರಿ, ಮುತ್ತಣ್ಣ, ಶೇಖರ್, ಸುನೀಲ್, ಈರಣ್ಣ, ರಾಜು ದಖನಿ, ರೋಹನ್, ಶಕ್ತಿ, ಮಹೇಶ, ನವೀನ, ನಿತೀಶ ಸೇರಿದಂತೆ ಸೇರಿದಂತೆ ಹಲವು ಪತ್ರಕರ್ತ ಮಿತ್ರರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ.