ಧಾರವಾಡ –
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಕೆಟ್ಟ ಪದ ಬಳಕೆ ಮಾಡಿದ ರಮೇಶ್ ಜಾರಕಿಹೊಳಿ ವಿರುದ್ಧ ಧಾರವಾಡದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಪ್ರತಿಭಟನೆ ಮಾಡಿದರು.

ನಗರದ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನೆ ಮಾಡಿ ಕೈ ಪಕ್ಷದ ಮುಖಂಡರು ಕಾರ್ಯಕರ್ತರು ಹೋರಾಟವನ್ನು ಮಾಡಿದರು.ಕೆಟ್ಟ ಪದ ಬಳಕೆ ಮಾಡಿದ ರಮೇಶ್ ಜಾರಕಿಹೊಳಿ ವಿರುದ್ಧ ಘೋಷ ಣೆ ಕೂಗಿ ಆಕ್ರೋಶವನ್ನು ವ್ಯಕ್ತಪಡಿಸಿದರು

ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧವೂ ಕೂಡಾ ಘೋಷಣೆ ಕೂಗಿದರು. ಇದೇ ವೇಳೆ ರಮೇಶ್ ಜಾರಕಿಹೊಳಿ ಪ್ರತಿಕೃತಿ ದಹನ ಮಾಡಿ ಆಕ್ರೋಶ ವನ್ನು ವ್ಯಕ್ತಪಡಿಸಿದರು
ಇನ್ನೂ ಈ ಒಂದು ಪ್ರತಿಭಟನೆಯಲ್ಲಿ ಆನಂದ ಜಾಧವ,ಶ್ರೀಧರ್ ಸೇಠ್,ಹೇಮಂತ್ ಗುರ್ಲಹೊಸೂ ರ, ಸತೀಶ್ ಮೆಹರವಾಡೆ,ಮಿಂಟೂ ಮೆಹರವಾಡೆ, ರಘು ಲಕ್ಕಮ್ಮನವರ, ದಾನಪ್ಪ ಕಬ್ಬೇರ,ಸುಭಾಷ ಶಿಂಧೆ, ಪ್ರಕಾಶ ಘಾಟಗೆ,ಮಂಜು ಭೋವಿ,ಆನಂದ ಸಿಂಗನಾಥ್,ಜಯಶ್ರೀ ದೇಶಮಾನ್ಯ,ಸುಮಾ ಬಿನಗವರ,ಸಂಗೀತ ಪೂಜಾರ,ಸುರೇಖಾ ಮೇಧಾ, ಆನಂದ ಮೂಶನ್ನವರ,ಮಹೇಶ್ ದಾಬಡೆ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.