ಧಾರವಾಡ
ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನ ಸಭಾ ಕ್ಷೇತ್ರ ಮಾಜಿ ಸಚಿವ ಸಂತೋಷ ಲಾಡ್ಗೆ ಕೈ ತಪ್ಪುತ್ತಾ ಎಂಬ ಅನುಮಾನ ಕಾಡುತ್ತಿದೆ.ಇದಕ್ಕೆ ಧಾರವಾಡ ದಲ್ಲಿ ನಾಗರಾಜ ಛಬ್ಬಿ ಅವರ ಮಾತುಗಳೇ ಸಾಕ್ಷಿಯಾಗಿವೆ.
ಸಂತೋಷ ಲಾಡ್ ಗೆ ಕೈ ತಪ್ಪಿದ ಸಂಶಯ ಮೂಡಿಸಿ ನಾಗರಾಜ್ ಛಬ್ಬಿ ಅವರ ಮಾತುಗಳು.ಹೌದು ನನಗೆ ಸಾರಥಿಯಾಗಿ ಎಂಬ ಈ ಹೇಳಿಕೆಯಿಂದ ಉದ್ಭವಿ ಸಿದೆ ಸಂಶಯ.ಧಾರವಾಡದಲ್ಲಿ ನಡೆದ ನಮ್ಮ ಗ್ರಾಮ ನಮ್ಮ ಶಕ್ತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಲಘಟಗಿ ಕ್ಷೇತ್ರ ಗೆಲ್ಲಲು ಸಾರಥಿಯಾಗಿ ನಿಲ್ಲುವಂತೆ ಕೋರಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯಲ್ಲಿ ಛಬ್ಬಿ ಅವರು ವೇದಿಕೆಯ ಮೇಲೆ ಕೋರಿದರು.ಈಗ ಕಲಘಟಗಿ ಕ್ಷೇತ್ರ ಬಿಜೆಪಿ ಕೈಯಲ್ಲಿದೆ ಮುಂದಿನ ಚುನಾವಣೆಯಲ್ಲಿ ನಾವು ಆ ಕ್ಷೇತ್ರ ಗೆಲ್ಲಬೇಕಿದೆ ಎಂದರು.
ಇದಕ್ಕಾಗಿ ಸತೀಶಣ್ಣನವರು ನನಗೆ ಸಾರಥಿಯಾಗಿ ನಿಲ್ಲಬೇಕು ಎಂದರು.ಈ ಕ್ಷೇತ್ರ ಗೆಲ್ಲಲು ಅವಕಾಶ ಮಾಡಿಕೊಡಬೇಕು ಎಂದ ಛಬ್ಬಿ ಕೇಳಿದ್ದು ಇವರು ಮಾತನಾಡಿದ ಮಾತುಗಳು ಯಾಕೋ ಸಂಶಯವನ್ನು ಮೂಡಿಸುತ್ತಿವೆ.