ಧಾರವಾಡ –
ಅಕ್ರಮವಾಗಿ ಯಾವುದೇ ಅನುಮತಿ ಇಲ್ಲದೇ ಮನೆಯ ಖುಲ್ಲಾ ಜಾಗೆಯಲ್ಲಿ ಅಕ್ರಮವಾಗಿ ಗಾಂಜಾವನ್ನು ಬೆಳೆದಿದ್ದ ಪ್ರಕರಣವನ್ನು ಕಲಘಟಗಿ ಇನ್ಸ್ಪೇಕ್ಟರ್ ಶ್ರೀಶೈಲ ಕೌಜಲಗಿ ಪತ್ತೆ ಮಾಡಿದ್ದಾರೆ.ಹೌದು ಖಚಿತವಾದ ಮಾಹಿತಿಯನ್ನು ಪಡೆದು ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ಮಾಡಿ ಮಾಲು ಸಮೇತವಾಗಿ ಆರೋಪಿಯನ್ನು ಬಂಧನ ಮಾಡಿ ದ್ದಾರೆ.ಇದರೊಂದಿಗೆ ಕಲಘಟಗಿ ಪೊಲೀಸರು ಮಿಂಚಿನ ಕಾರ್ಯಾಚರಣೆ ಮೂಲಕ ಗಾಂಜಾ ಜಾಲವನ್ನು ಪತ್ತೆ ಮಾಡಿ ಒರ್ವ ಆರೋಪಿಯನ್ನು ಬಂಧನ ಮಾಡಿದ್ದಾರೆ.
ಕಲ್ಲಪ್ಪ ಹನಮಂತಪ್ಪ ಸೋಮನಕೊಪ್ಪ ಬಂಧನ ಆರೋಪಿಯಾಗಿದ್ದು ಯಲವದಾಳ ಗ್ರಾಮದ ಖುಲ್ಲಾ ಜಾಗೆಯಲ್ಲಿ ಗಾಂಜಾ ಬೆಳೆದಿದ್ದ ಆರೋಪಿ ಬಂಧಿತನಿಂದ 9 ಕೆಜಿ 200 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದು ಇನ್ಸ್ಪೇಕ್ಟರ್ ಶ್ರೀಶೈಲ ಕೌಜಲಗಿ ನೇತ್ರತ್ವದಲ್ಲಿ ಮಿಂಚಿನ ಕಾರ್ಯಾಚರಣೆ ನಡೆದಿದ್ದು ಗಾಂಜಾದೊಂದಿಗೆ ಆರೋಪಿ ಯನ್ನು ಬಂಧನ ಮಾಡಿದ್ದಾರೆ ಕಲಘಟಗಿ ಪೊಲೀಸರು
ಯಾವುದೇ ಅನುಮತಿ ಇಲ್ಲದೇ ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಬೆಳೆದಿದ್ದ ಗಾಂಜಾ ಮಾಹಿತಿ ಆಧಾರಿಸಿ ಕಾರ್ಯಾಚರಣೆ ಮಾಡಿದಪೊಲೀಸರು 20 ಸಾವಿರ ಕ್ಕೂ ಹೆಚ್ಚು ಮೌಲ್ಯದ ಗಾಂಜಾ ವಶಪಡಿಸಿ ಕೊಂಡಿದ್ದು ಸಧ್ಯ ಈ ಕುರಿತಂತೆ ದೂರನ್ನು ದಾಖಲು ಮಾಡಿ ಕೊಂಡಿದ್ದು ಮುಂದಿನ ಕ್ರಮವನ್ನು ಕೈಗೊಡಿಂದ್ದಾರೆ.