ಹುಬ್ಬಳ್ಳಿ –
ಹುಬ್ಬಳ್ಳಿಯಲ್ಲಿ ಕಲ್ಲಪ್ಪ ಶಿರಕೋಳ ಮತ್ತೆ ಕ್ಷುಲ್ಲಕ ಕಾರಣಕ್ಕಾಗಿ ಸುದ್ದಿಯಾಗಿದ್ದಾರೆ.ಚಹಾ ಕೊಡುವ ವಿಚಾರಲ್ಲಿ ಗಲಾಟೆಯನ್ನು ಮಾಡಿ ಹೊಟೇಲ್ ಮ್ಯಾನೇಜರ್ ಮೇಲೆ ಹಲ್ಲೆಯನ್ನು ಮಾಡಿದ್ದಾರೆ ಕಲ್ಲಪ್ಪ ಶಿರಕೋಳ.

ಹೌದು ಇಂಥಹದೊಂದು ಘಟನೆ ನಗರದ ಅಯೋ ಧ್ಯಾ ಹೋಟೆಲ್‌ನಲ್ಲಿ ನಡೆದಿದೆ.ಹಳೇ ಬಸ್ ನಿಲ್ದಾಣ ದ ಮುಂದಿರುವ ಅಯೋಧ್ಯಾ ಹೊಟೇಲ್ ಈ ಒಂದು ಘಟನೆ ನಡಿದೆದೆ.

ಮ್ಯಾನೇಜರ್ ನನ್ನು ಚಹಾ ಕೊಡುವ ವಿಚಾರವಾಗಿ ಹಿಗ್ಗಾ-ಮುಗ್ಗಾ ಥಳಿಸಿದ್ದಾನೆ ಕಲ್ಲಪ್ಪ ಶಿರಕೋಳ ಕಳೆ ದ ಮೂರು ದಿನದ ಹಿಂದೆ ನಡೆದ ಘಟನೆ ಇದಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ.ರೌಡಿ ಕಲ್ಲಪ್ಪ ಶಿರಕೋಳ ತನ್ನ ಸಹಚರನೊಂದಿಗೆ ಹೊಟೇಲ್ ನಲ್ಲಿ ಚಹಾಗೆ ಆರ್ಡರ್ ಮಾಡಿದ್ದಾರೆ.ಬೇರೆ ಗ್ರಾಹಕರು ಬಂದ ಹಿನ್ನೆಲೆಯಲ್ಲಿ ಈತನಿಗೆ ಚಹಾ ಕೊಡುವುದು ಸ್ವಲ್ಪು ತಡವಾಗಿದೆ.ಅದನ್ನೇ ನೆಪ ಮಾಡಿಕೊಂಡ ರೌಡಿ ಕಲ್ಲಪ್ಪ ಶಿರಕೋಳ ಕೈ ಲಾಗದವನನ್ನು ಮನ ಬಂದಂ ತೆ ಥಳಿಸಿದ್ದಾರೆ.

ಇಡೀ ಘಟನೆಯೂ ಹೊಟೇಲಿನಲ್ಲಿನ ಸಿಸಿ ಟಿವಿ ಯಲ್ಲಿ ಸೆರೆಯಾಗಿದೆ.ಹುಬ್ಬಳ್ಳಿ ಉಪನಗರ ಪೊಲೀ ಸ್ ಠಾಣೆಯಲ್ಲಿ ಈ ಕುರಿತಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಲಾಕ್ ಡೌನ್ ಸಮಯದಲ್ಲಿಯೂ ತನ್ನ ಛಾಳಿಯನ್ನ ಬಿಡದ ರೌಡಿ ಕಲ್ಲಪ್ಪ ಶಿರಕೋಳ ಹೀಗೆ ಮಾಡಿ ಸುದ್ದಿ ಯಾಗಿದ್ದಾನೆ.ಸಧ್ಯ ದೂರನ್ನು ದಾಖಲು ಮಾಡಿಕೊಂ ಡಿರುವ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂ ಡಿದ್ದಾರೆ.