ಚೆನ್ನೈ(ತಮಿಳುನಾಡು) –
ಒಬ್ಬೊಬ್ಬರಲ್ಲಿ ಒಂದೊಂದು ಕಲೆ ಇರುತ್ತದೆ ಎಂಬುದಕ್ಕೆ ಇಲ್ಲೊಬ್ಬ ಶಿಕ್ಷಕ ಸಾಕ್ಷಿ.ಹೌದು ಕೆ ಕಾಮರಾಜ್ ಅವರು ಭಾರತದಲ್ಲಿ ಶಿಕ್ಷಣ ಕೈಗಾರಿಕೆಗಳು ಮತ್ತು ನೀರಾವರಿಯ ಅಭಿವೃದ್ಧಿಯ ಬಗ್ಗೆ ದೂರದೃಷ್ಟಿಯ ಚಿಂತನೆಗೆ ವ್ಯಾಪಕ ವಾಗಿ ಹೆಸರುವಾಸಿಯಾಗಿದ್ದಾರೆ.ಅವರು ತಮಿಳುನಾಡಿನ ಮುಖ್ಯಮಂತ್ರಿಯೂ ಆಗಿದ್ದವರು.ಅವರ 120ನೇ ಜನ್ಮ ದಿನವನ್ನು ನಾಳೆ ಆಚರಿಸಲಾಗುತ್ತಿದ್ದು ಅಭಿಮಾನಿ ಯೊಬ್ಬ ರು ಅವರನ್ನು ವಿಭಿನ್ನ ರೀತಿಯಲ್ಲಿ ಸ್ಮರಿಸಿಕೊಂಡಿದ್ದಾರೆ. ತಮಿಳುನಾಡಿನ ಮುಖ್ಯಮಂತ್ರಿಯೂ ಆಗಿದ್ದ ಕಾಮರಾಜ್ ಅವರ ಭಾವಚಿತ್ರವನ್ನು ವಿಭಿನ್ನವಾಗಿ ಚಿತ್ರಿಸಲಾಗಿದೆ.
ಕಣ್ಣಿನ ರೆಪ್ಪೆಯಿಂದಲೇ ಭಾವಚಿತ್ರ ಬರೆದ ಶಿಕ್ಷಕ
ಕಾಮರಾಜ್ ಅವರ ಜನ್ಮದಿನದ ಸಂದರ್ಭದಲ್ಲಿ ಕಲ್ಲಾಕುರಿಚಿ ಜಿಲ್ಲೆಯ ಶಿವನಾರ್ಧಂಗಲ್ ಗ್ರಾಮದ ಪಂಚಾಯತ್ ಯೂನಿಯನ್ ಶಾಲೆಯಲ್ಲಿ ಅರೆಕಾಲಿಕ ಡ್ರಾಯಿಂಗ್ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಸೆಲ್ವಂ ಅವರು ತಮ್ಮ ಕಣ್ರೆಪ್ಪೆಯಲ್ಲಿ ಕಾಮರಾಜ್ ಭಾವಚಿತ್ರವನ್ನು ಬಿಡಿಸಿದ್ದಾರೆ.
ಬ್ರಷ್ ಅಥವಾ ಕೈ ಬಳಕೆ ಬದಲು ರೆಪ್ಪೆಗೂದಲಿನ ಮೂಲಕ ಈ ವಿಶಿಷ್ಟ ಸಾಧನೆ ಮಾಡಿದ್ದಾರೆ.ಈ ಕಲೆ ಯನ್ನು 20 ನಿಮಿಷಗಳಲ್ಲಿ ಪೂರ್ಣಗೊಳಿಸಿದ್ದು ಪೊಟೊ ವೈರಲ್ ಆಗಿದೆ.