This is the title of the web page
This is the title of the web page

Live Stream

November 2022
T F S S M T W
 12
3456789
10111213141516
17181920212223
24252627282930

| Latest Version 8.0.1 |

Sports News

ರಾಜ್ಯ ಸರ್ಕಾರ ದಿಂದ ಕನ್ನಡ ಕಗ್ಗೊಲೆ – ರಾತ್ರೋರಾತ್ರಿ ನಿದ್ರೆಯಲ್ಲಿ ಟೈಪ್ ಮಾಡಿದ್ರಾ ಎಂದ ನೆಟ್ಟಿಗರು ಕನ್ನಡ ಕಗ್ಗೊಲೆ ಹೇಗಿದೆ ನೋಡಿ…..

Join The Telegram Join The WhatsApp

 


ಬೆಂಗಳೂರು –

ಸಾರ್ವಜನಿಕ ಜೀವನದಲ್ಲಿ ಯಾರಾದರೂ ತಪ್ಪು ಮಾಡಿದರೆ ಅದು ಎದ್ದು ಕಾಣುತ್ತದೆ ಆದರೆ ರಾಜ್ಯ ಸರ್ಕಾರ ತಪ್ಪು ಮಾಡಿದರೆ ಅದನ್ನು ಕೇಳೊರು ಯಾರು ಹೌದು ರಾಜ್ಯದ ಸರ್ಕಾರದ ಎಲ್ಲ ಇಲಾಖೆಗಳ ಕಚೇರಿಗಳಲ್ಲಿ ಪೂರ್ವಾನುಮತಿ ಇಲ್ಲದೆ ಸಾರ್ವಜನಿಕರು ಅನಧಿಕೃತವಾಗಿ ಫೋಟೋ ಅಥವಾ ವಿಡಿಯೋ ಮಾಡುವುದನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿತ್ತು.ಇದು ವ್ಯಾಪಕ ವಿರೋಧಕ್ಕೆ ಕಾರಣವಾಗಿತ್ತು.ಸರ್ಕಾರಿ ಕಚೇರಿಯಲ್ಲಿ ಫೋಟೊ ,ವೀಡಿಯೋ ಚಿತ್ರೀಕರಣ ಬಂದ್ ವಿಚಾರಕ್ಕೆ ಸಂಬಂಧಿಸಿ ಆದೇಶ ವಾಪಸ್ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅಧಿಕಾರಿಗ ಳನ್ನು ತೀವ್ರ ತರಾಟೆಗೆತ್ತಿಕೊಂಡಿದ್ದರು.ಈ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ವಿಧಾನಸೌಧಕ್ಕೆ ಬಂದು ನಿದ್ದೆ ಗಣ್ಣಿನಲ್ಲಿ ಅಧಿಕಾರಿ ಆದೇಶ ವಾಪಸ್ ಸೂಚನೆಯನ್ನು ಟೈಪ್ ಮಾಡಿದ್ರಾ ಅಥವಾ ಅಧಿಕಾರಿಗೆ ಕನ್ನಡ ಟೈಪಿಂಗ್ ಸರಿ ಯಾಗಿ ಬರುತ್ತಿಲ್ಲವೇ ಎಂದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಯಾಗುತ್ತಿದೆ.ಯಾಕೆಂದರೆ ಚಿತ್ರೀಕರಣ ಬ್ಯಾನ್ ಆದೇಶ ವಾಪಸ್ ಪಡೆದಿರುವ ಪತ್ರದಲ್ಲಿ ಪ್ರತಿಯೊಂದು ಅಕ್ಷರವೂ ತಪ್ಪು ತಪ್ಪಾಗಿ ಟೈಪ್ ಮಾಡಲಾಗಿದೆ.

ಆದೇಶದಲ್ಲಿ ಅಕ್ಷರ ದೋಷಗಳು ಇಂತಿದೆ.
ನಡವಳಿಗಳು ( ನಡಾವಳಿಗಳು )
ಪ್ರಸತಾವನೆ ( ಪ್ರಸ್ತಾವನೆ)
ಮೇಲೇ ( ಮೇಲೆ )
ಬಾಗ – 1 ( ಭಾಗ – 1)
ಕರ್ನಾಟಾ ರಾಜ್ಯಪಾಲರ ( ಕರ್ನಾಟಕ )
ಕರ್ನಾಟಾ ಸರ್ಕಾರ ( ಕರ್ನಾಟಕ ಸರ್ಕಾರ )

ಇನ್ನು ಸಾಮಾಜಿಕ ಜಾಲತಾಣದಲ್ಲಿ ಆದೇಶ ಪತ್ರದ ತಪ್ಪಿನ ಬಗ್ಗೆ ವ್ಯಾಪಕ ಚರ್ಚೆಯಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಇಲಾಖೆ ತಪ್ಪಾದ ಪದವನ್ನು ಸರಿಪಡಿಸಿ ಮತ್ತೆ ಹೊಸದಾಗಿ ಆದೇಶ ಪತ್ರ ಬಿಡುಗಡೆಗೊಳಿಸಿದೆ.

ರಾಜ್ಯದ ಸರ್ಕಾರದ ಎಲ್ಲ ಇಲಾಖೆಗಳ ಕಚೇರಿಗಳಲ್ಲಿ ಪೂರ್ವಾನುಮತಿ ಇಲ್ಲದೆ ಸಾರ್ವಜನಿಕರು ಅನಧಿಕೃತವಾಗಿ ಫೋಟೋ ಅಥವಾ ವಿಡಿಯೋ ಮಾಡುವುದನ್ನು ನಿಷೇಧಿಸಿ ಸರ್ಕಾರ ಜುಲೈ 15 ರಂದು ಆದೇಶ ಹೊರಡಿ ಸಿತ್ತು.ತನ್ಮೂಲಕ ಲಂಚ ಪಡೆಯುವುದು ಲಂಚಕ್ಕೆ ಬೇಡಿಕೆ ಇಡುವುದು ಸೇವೆ ನೀಡದೆ ಸಾರ್ವಜನಿಕರೊಂದಿಗೆ ಉಡಾಫೆ ವರ್ತನೆ ತೋರುವುದು ಸೇರಿದಂತೆ ಸರ್ಕಾರಿ ನೌಕರರು ಮಾಡುತ್ತಿದ್ದರು ಎನ್ನಲಾದ ತಪ್ಪುಗಳನ್ನು ವಿಡಿಯೋ ಅಥವಾ ಫೋಟೋ ಮೂಲಕ ಸೆರೆಹಿಡಿಯು ವುದಕ್ಕೆ ತಡೆ ಬಿದ್ದಂತಾಗಿತ್ತು. ಲಶುಕ್ರವಾರ ಈ ಬಗ್ಗೆ ಆದೇಶ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು, ರಾಜ್ಯ ಸರ್ಕಾರಿ ನೌಕರರ ಸಂಘದ ಮನವಿ ಮೇರೆಗೆ ಎಲ್ಲಾ ಇಲಾಖೆಗಳ ಕಚೇರಿಗಳಲ್ಲಿ ಅನುಮತಿ ಇಲ್ಲದೆ ಸಾರ್ವಜ ನಿಕರು ಅನಧಿಕೃತವಾಗಿ ಫೋಟೋ,ವಿಡಿಯೋ ತೆಗೆಯು ವುದನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ ಎಂದು ಆದೇಶ ಹೊರಡಿಸಿತ್ತು.ಈ ಆದೇಶ ಹೊರಬರುತ್ತಿ ದ್ದಂತೆಯೇ ಸರಕಾರದ ಈ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.ತಕ್ಷಣ ಎಚ್ಚೆತ್ತುಕೊಂಡ ಸರಕಾರ ಈ ಆದೇಶವನ್ನು ಹಿಂದಕ್ಕೆ ಪಡೆದಿದೆ.


Suddi Sante Desk

Leave a Reply