ಇಂದು ಬಿಡುಗಡೆಯಾಗಲಿದೆ ಕನ್ನಡ ಸಾಹಿತ್ಯದ ಆಯಪ್ CM ಅವರಿಂದ ಬಹು ನಿರೀಕ್ಷಿತ ಕನ್ನಡ ಆಯಪ್ ಲೋಕಾರ್ಪಣೆ…..

Suddi Sante Desk

ಬೆಂಗಳೂರು –

ಕನ್ನಡ ಸಾಹಿತ್ಯ ಪರಿಷತ್ತು ನೂತನವಾಗಿ ಸಿದ್ದಪಡಿಸಲಾ ಗಿರುವ ವಿನೂತನ ತಂತ್ರಜ್ಞಾನವುಳ್ಳ ಕನ್ನಡ ಸಾಹಿತ್ಯ ಪರಿಷತ್ತು ಎನ್ನುವ ಹೆಸರಿನ ಆಯಪ್ ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ.

ಕನ್ನಡ ನಾಡಿನ ಹೆಮ್ಮೆಯ ಕನ್ನಡ ಸಾಹಿತ್ಯ ಪರಿಷತ್ತು ಪ್ರಸ್ತುತ ಕಾಲಘಟಕ್ಕೆ ತಕ್ಕಂತೆ ಆತ್ಯಾಧುನಿಕ ತಂತ್ರಜ್ಞಾನ ವನ್ನು ಹೊಂದಿರುವ ವಿನೂತನ ಆಯಪ್ ರೂಪಿಸಿದ್ದು ಈ ಆಯಪ್ ಕನ್ನಡ ಸಾಹಿತ್ಯ ಪರಿಷತ್ತನ್ನು ಜನ ಸಾಮಾನ್ಯರ ಪರಿಷತ್ತನ್ನಾಗಿಸುವ ಕೊಂಡಿಯಾಗಲಿದೆ.ವಿಶ್ವದ್ಯಾಂತ ಇರುವ ಕನ್ನಡವನ್ನು ಹಾಗೂ ಕನ್ನಡಿಗರನ್ನು ಒಗ್ಗೂಡಿಸುವ ಪ್ರಯತ್ನಕ್ಕೆ ಪರಿಷತ್ತು ಮುಂದಾಗಿದೆ.ಹೊರರಾಜ್ಯ, ಕೇಂದ್ರಾ ಡಳಿತ ಪ್ರದೇಶ ಮತ್ತು ಹೊರೆದೇಶಗಳಲ್ಲಿ ಘಟಕಗಳನ್ನು ಸ್ಥಾಪಿಸುವ ದೃಷ್ಟಿಯಿಂದ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಾರಂಭ ಮಾಡಿದೆ.ಈ ಹಿನ್ನೆಲೆಯಲ್ಲಿ ಕೋಟಿ ಸದಸ್ಯತ್ವದ ಅಭಿ ಯಾನದಲ್ಲಿ ಶ್ರೀಸಾಮಾನ್ಯನೂ ಸಹ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆಯುವುದಕ್ಕೆ ಅನುಕೂಲವಾಗು ವಂತೆ ಆಯಪ್ ಸಿದ್ದಪಡಿಸಲಾಗಿದೆ.

ಕನ್ನಡಿಗರು ಮನೆಯಲ್ಲೇ ಕುಳಿತು ಸುಲಭವಾಗಿ ಆನ್ ಲೈನ್ ಮೂಲಕ ಸದಸ್ಯತ್ವವನ್ನು ಪಡೆಯುವುದರ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ಕಾರ್ಯ ಚಟುವಟಿಕೆ ಗಳು,ಕಾರ್ಯಕ್ರಮಗಳು,ಪುಸ್ತಕಗಳು,ಪ್ರಟಣೆಗಳು, ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳುವುದು ಸೇರಿದಂತೆ ಎಲ್ಲಾ ಮಾಹಿತಿಗಳುಳ್ಳ ತಂತ್ರಜ್ಞಾನವನ್ನು ಪ್ರಸ್ತುತ ಆಯಪ್ ನಲ್ಲಿ ಅಳವಡಿಸಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲೋಕಾರ್ಪಣೆ ಮಾಡಿದ ಮರು ಕ್ಷಣದಿಂದ ಈ ಆಯಪ್ ಸಾರ್ವಜನಿಕರ ಉಪಯೋಗಕ್ಕೆ ಸಿಗಲಿದೆ ಕನ್ನಡಿಗರು ಪ್ರಪಂಚದ ಯಾವುದೇ ಮೂಲೆಯಲ್ಲಿ ಇದ್ದರೂ ಈ ಆಯಪ್ ಮೂಲಕ ಕನ್ನಡಿಗರ ಅಸ್ಮಿತೆಯ ಪ್ರತೀಕವಾಗಿ ರುವ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆಯುವುದ ರೊಂದಿಗೆ ಕನ್ನಡ ಕಟ್ಟಿ ಬೆಳೆಸುವ ನಿಟ್ಟಿಲ್ಲಿ ಸಹಭಾಗಿತ್ವ ನೀಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಕೋರಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.