ಹಿಮಾಚಲ ಪ್ರದೇಶ –
ಕನ್ನಡಿಗರಾದ ನಾಡಿನ ರವಿ ಮಳಿಮಠ್ ಅವರು ಹಿಮಾಚಲ ಪ್ರದೇಶದ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರವನ್ನು ವಹಿಸಿ ಕೊಂಡರು.ಕರ್ನಾಟಕ ಮೂಲದ ರವಿ ವಿಜಯ ಕುಮಾರ್ ಮಳಿಮಠ್ ನಿಯೋಜನೆಗೊಂಡಿದ್ದಾರೆ. ಹಿಮಾಚಲ ಪ್ರದೇಶ ಹೈಕೋರ್ಟ್ ನ ನ್ಯಾಯಮೂ ರ್ತಿಗಳಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ನ್ಯಾಯ ಮೂರ್ತಿ ಮಳಿಮಠ್ ಅವರನ್ನು ಮುಖ್ಯ ನ್ಯಾಯ ಮೂರ್ತಿಗಳನ್ನಾಗಿ ನಿಯೋಜನೆ ಮಾಡಲಾಗಿದೆ ಎಂದು ಕಾನೂನು ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿರುವ ಲಿಂಗಪ್ಪ ನಾರಾಯಣಸ್ವಾಮಿ ಅವರ ನಿವೃತ್ತಿಯಿಂದ ತೆರವಾಗಲಿರುವ ಸ್ಥಾನಕ್ಕೆ ಮಳಿಮಠ್ ಅವರನ್ನು ನೇಮಕ ಮಾಡಲಾಗಿದ್ದು, ಜುಲೈ ಒಂದರಿಂದ ಸಿಜೆಯಾಗಿ ಅವರು ಪ್ರಮಾಣ ವಚನ ಸ್ವೀಕರಿಸಲಿ ದ್ದಾರೆ.ರಾಜ್ಯದ ಹಿರಿಯ ನ್ಯಾಯಮೂರ್ತಿಗಳಾಗಿದ್ದ ಎಸ್.ಎಸ್.ಮಳೀಮಠ್ ಅವರ ಪುತ್ರರಾಗಿರುವ ರವಿ ವಿಜಯಕುಮಾರ್ ಮಳಿಮಠ್ ಅವರು ಹಿಮಾ ಚಲ ಪ್ರದೇಶ ಹೈಕೋರ್ಟ್ ನಲ್ಲಿ ಕಳೆದ ಹಲವು ವರ್ಷಗಳಿಂದ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿ ದ್ದರು.