ಹುಬ್ಬಳ್ಳಿ
ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಗೆ ಕರವೇ ಕಾರ್ಯಕರ್ತರು ಘೇರಾವ್ ಹಾಕಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.ನಿನ್ನೆ ನಾರಾಯಣಗೌಡ ಯಾರೆಂದು ಗೊತ್ತಿಲ್ಲ ಎಂದು ಸಚಿವರು ಹೇಳಿದ್ದರಂತೆ.ಇದರಿಂದ ಕರವೇ ಕಾರ್ಯಕರ್ತರು ಮುಖಂಡರು ಸಚಿವರಿಗೆ ಘೇರಾವ್ ಹಾಕಿದರು.

ಇದರಿಂದ ಅಸಮಾಧಾನಗೊಂಡ ಕರವೇ ಕಾರ್ಯಕರ್ತರು ಸಚಿವರಿಗೆ ಘೇರಾವ್ ಹಾಕಿ ವಾಗ್ವಾದ ಮಾಡಿದರು.

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಚಿವರ ಜೊತೆ ವಾಗ್ವಾದಕ್ಕಿಳಿದು ಘೇರಾವ್ ಹಾಕಿದ ಕರವೇಯ ನಾರಾಯಣಗೌಡ ಬಣದ ಕಾರ್ಯಕರ್ತರು ಸಚಿವರೊಂದಿಗೆ ವಾಗ್ವಾದ ಮಾಡಿ ಘೇರಾವ್ ಹಾಕಿದರು.
ರಾಜ್ಯಾಧ್ಯಕ್ಷ ನಾರಾಯಣಗೌಡ ಅವರ ಬಗ್ಗೆ ಸಚಿವ ಸುಧಾಕರ್ ಹಗುರವಾಗಿ ಮಾತನಾಡಿದ್ದಾರೆಂದು ಆರೋಪಿಸಿ ಸಚಿವರ ಜೊತೆ ಕೆಲಕಾಲ ಸಚಿವರೊಂದಿಗೆ ವಾಗ್ವಾದಕ್ಕಿಳಿದರು ಕಾರ್ಯಕರ್ತರು.ಸಚಿವರ ಜೊತೆ ವಾಗ್ವಾದಕ್ಕಿಳಿದು ಕಾರಿಗೆ ಅಡ್ಡಲಾಗಿ ಮಲಗಿ ಆಕ್ರೋಶವನ್ನು ವ್ಯಕ್ತಪಡಿಸಿದರು.

ಕೂಡಲೇ ನಾರಾಯಣಗೌಡ ಅವರನ್ನ ಕ್ಷಮೆ ಕೇಳಬೇಕೆಂದು ಕರವೇ ಕಾರ್ಯಕರ್ತರು ಸಚಿವರಿಗೆ ಪಟ್ಟು ಹಿಡಿದರು.ಇದೇ ವೇಳೆ ಸಚಿವರ ಕಾರಿಗೆ ಅಡ್ಡಲಾಗಿ ಮಲಗಿ ದಿಕ್ಕಾರ ಕೂಗುತ್ತಾ ಕೂಗಿ ಆಕ್ರೋಶವನ್ನು ವ್ಯಕ್ತಪಡಿಸಿದರು.

ಸಚಿವರ ವಿರುದ್ಧ ಘೋಷಣೆ ಕೂಗಿ ಕಪ್ಪುಪಟ್ಟಿ ಪ್ರದರ್ಶಿಸಿ ಪ್ರತಿಭಟನೆಗೆ ಮುಂದಾದ ಕಾರ್ಯಕರ್ತರನ್ನು ಪೊಲೀಸರು ತಡೆಹಿಡಿದು ಕರೆದೊಯ್ದರು.ಕರವೇ ಜಿಲ್ಲಾ ಅಧ್ಯಕ್ಷ ರುದ್ರೇಶ ಹವಳದ,ರಾಜ್ಯ ಸಂಚಾಲಕ ಹನುಮಂತಪ್ಪ ಮೇಟಿ,ಸಚಿನ ಗಾಣಿಗೇರ,ಪ್ರಭು ಕುಂಬಾರ,ಭೀಮಶಿ ಸೊಗಲದ,ಸಾಗರ ಗಾಯಕವಾಡ,ಅಹಮ್ಮದ್ ಮಾಳಗಿ, ಸೇರಿದಂತೆ ಹಲವರು ಪಾಲ್ಗೊಂಡಿದ್ದರು.