ಹುಬ್ಬಳ್ಳಿ –
ರಾಜ್ಯದಲ್ಲಿ ಈವರೆಗೆ ಶಿಕ್ಷಕರಿಗೆ ಬೇಸಿಗೆ ರಜೆ ನೀಡು ವ ವಿಚಾರ ಇನ್ನೂ ಬಗೆಹರಿದಿಲ್ಲ.ಈ ಕುರಿತು ರಾಜ್ಯ ಸರ್ಕಾರಕ್ಕೆ ಎಷ್ಟೋ ಮನವಿ ಮಾಡಿದರು ಕೂಡಾ ಸ್ಪಂದಿಸುತ್ತಿಲ್ಲ ಕಣ್ತೇರೆದು ನೋಡುತ್ತಿಲ್ಲ ಇದರಿಂದ ಬೇಸತ್ತ ಶಿಕ್ಷಕರ ಪರವಾಗಿ ಈಗ ರಜೆಯ ವಿಚಾರ ದಲ್ಲಿ ಧ್ವನಿ ಎತ್ತಿ ಕೊಡಿಸುವಂತೆ ಮತ್ತು ನೀಡುವಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಗೆ ಕರ್ನಾಟ ಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆಗ್ರಹ ಮಾಡಿದೆ

ಹೌದು ಈ ಕುರಿತು ರಾಜ್ಯ ಘಟಕದ ಹುಬ್ಬಳ್ಳಿಯ ಅಶೋಕ ಸಜ್ಜನ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಗೆ ಮನವಿ ಮಾಡಿಕೊಂಡಿದ್ದಾರೆ

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕರೋನ ಹೆಚ್ಚಾಗು ತ್ತಿದೆ.ಒಂದು ಕಡೆ ಬಸ್ ಗಳ ಸಮಸ್ಯೆ ರಜೆ ಇಲ್ಲದೆ ಕೆಲಸ ಎನ್ನುವಂತಾಗಿದೆ ಹೀಗಾಗಿ ಕೂಡಲೇ ರಾಜ್ಯದ ಶಿಕ್ಷಕರ ಸಮಸ್ಯೆ ಕುರಿತು ಧ್ವನಿ ಎತ್ತಿ ಸಧ್ಯ ಅವಶ್ಯಕ ವಾಗಿರುವ ಬೇಸಿಗೆ ರಜೆಯನ್ನು ನೀಡಿಸುವಂತೆ ಒತ್ತಾಯವನ್ನು ಮಾಡಿದ್ದಾರೆ