ಹುಬ್ಬಳ್ಳಿ –
ಸದಾ ಒಂದಿಲ್ಲೊಂದು ವಿಶೇಷತೆಗಳ ಮೂಲಕ ಕಾರ್ಯವನ್ನು ಮಾಡುತ್ತಿರುವ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹುಬ್ಬ ಳ್ಳಿ ಇವರು ಈಗ ಮತ್ತೊಂದು ವಿಶೇಷ ಸಂದೇಶ ದೊಂದಿಗೆ ಸಾಮಾಜಿಕ ಕಾಳಜಿಯನ್ನು ಘಟಕದವ ರು ತೋರಿದ್ದಾರೆ.ಹೌದು ಈಗ ದೇಶವ್ಯಾಪಿ ವ್ಯಾಪಕ ವಾಗಿ ಹರಡುತ್ತಿರುವ ಮಹಾಮಾರಿ ಕುರಿತಂತೆ ಒಂದು ಅದ್ಬುತವಾದ ಜಾಗೃತಿಯ ಹಾಡಿನ ಟಿಕ್ ಟಾಕ್ ನ್ನು ರಚನೆ ಮಾಡಿದ್ದಾರೆ.

ಹೌದು ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ, ಉಪ್ಪಿನ,ಎಲ್ ಐ ಲಕ್ಕಮ್ಮನವರ, ಶರಣಬಸವ ಬನ್ನಿಗೋಳ ಸೇರಿದಂತೆ ಮತ್ತು ಸರ್ವ ಸದಸ್ಯರು ಸೇರಿಕೊಂಡು ಟಿಕ್ ಟಾಕ್ ವೊಂದನ್ನು ಯುವ ಕಲಾವಿದರ ಮೂಲಕ ಮಾಡಿಸಿ ಸಧ್ಯ ವ್ಯಾಪಕವಾಗಿ ರುವ ಕರೋನಾ ಕುರಿತಂತೆ ತಮ್ಮದೇಯಾದ ಸಂಘ ದ ಮೂಲಕ ನಾಡಿನ ಶಿಕ್ಷಕರಿಗೆ ಮತ್ತು ಜನತೆಗೆ ಸಂದೇಶ ನೀಡಿದ್ದಾರೆ ಇದರೊಂದಿಗೆ ಕರೋನಾವನ್ನು ಹೇಗೆ ಕಟ್ಟಿಹಾಕ ಬೇಕು ಹೇಗೆ ಓಡಿದೊಡಿಸಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ
ಇದನ್ನು ನೋಡಿದರೆ ನಿಜವಾಗಿಯೂ ಕೋವಿಡ್ ನಿಂದ ನಾವೇಲ್ಲರೂ ದೂರವಿರಬಹುದು ಮತ್ತು ಜಾಗೃತರಾದರೆ ಮಾತ್ರ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎನ್ನುತ್ತಾ ಸಂದೇಶವನ್ನು ನೀಡಿ ಸಾಮಾಜಿ ಕ ಕಾರ್ಯವನ್ನು ಗ್ರಾಮೀಣ ಶಾಲಾ ಶಿಕ್ಷಕರ ಸಂಘ ಸಂಘಟನೆ ಸಂದೇಶವನ್ನು ನೀಡಿದ್ದು ಮೆಚ್ಚುವಂ ತದ್ದು