ಧಾರವಾಡ –
ರಾಜ್ಯದ ಎಲ್ಲಾ ಶಿಕ್ಷಕರಿಗೂ ವಯೋಮಿತಿ ನಿರ್ಬಂಧ ವಿಲ್ಲದೇ ಕೋವಿಶೀಲ್ಡ್/ಕೊವ್ಯಾಕ್ಸಿನ್ ಲಸಿಕೆಯನ್ನು ಹಾಕುವಂತೆ ಕರ್ನಾಟಕದ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನೋಂದಾ ಯಿತ ಹುಬ್ಬಳ್ಳಿ ಒತ್ತಾಯಿಸಿದ್ದಾರೆ.ಇದರ ಅಡಿ ಯಲ್ಲಿ ಈ ರಾಜ್ಯದ ಸಮಸ್ತ ಶಿಕ್ಷಕರ ವತಿಯಿಂ ದ ಎಲ್ಲ ಪದಾಧಿಕಾರಿಗಳು ಈ ಮೂಲಕ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳವರಿಗೆ ಹಾಗೂ ಸನ್ಮಾನ್ಯ ಶಿಕ್ಷಣ ಸಚಿವರುಗಳಿಗೆ, ಮತ್ತು ಸನ್ಮಾನ್ಯ ಆರೋಗ್ಯ ಸಚಿವರುಗಳಿಗೆ ಪ್ರಾರ್ಥಿಸಿ ಕೊಂಡಿದ್ದಾರೆ
ನಮ್ಮ ಸಾರ್ವಜನಿಕ ಶಿಕ್ಷಣ ಇಲಾಖೆ ಈಗಾಗಲೇ ಸುತ್ತೋಲೆ ಜ್ಞಾಪನ ಹೊರಡಿಸಿರುವಂತೆ ಜೂನ್ 15 ಕ್ಕೆ ಶಾಲೆಗಳು ಪ್ರಾರಂಭವಾಗುತ್ತಿವೆ.ಈ ಹಿನ್ನ ಲೆಯಲ್ಲಿ ಘನ ಸರ್ಕಾರವು ನಮ್ಮನ್ನೆಲ್ಲಾ ಮುಂಚೂ
ಬೇಕೆಂದು ಸಂಘದ ಅಧ್ಯಕ್ಷ ಅಶೋಕ ಸಜ್ಜನ ಸರ್ವ ಸದಸ್ಯರ ಪರವಾಗಿ ಒತ್ತಾಯ ಮಾಡಿದ್ದಾರೆ.ಣಿಯ ಆದ್ಯತೆಯಲ್ಲಿ ಫ್ರಂಟ್ ಲೈನ್ ವಾರಿಯರ್ಸ್ ಅಂತ ಘೋಷಿಸಿರುವುದನ್ನು ನಾವು ಸ್ವಾಗತಿಸುತ್ತ ಈ ರಾಜ್ಯದಲ್ಲಿರತಕ್ಕಂತ ಪ್ರಾಥಮಿಕ ,ಪ್ರೌಢ ,ಪ.ಪೂ,ಕಾಲೇಜು ಮುಂತಾದ ಶಿಕ್ಷಕ, ಶಿಕ್ಷಕಿಯರಿಗೆ ವಯೋಮಿತಿ ನಿರ್ಬಂಧವಿಲ್ಲದೆ ವಯೋಮಿತಿಯನ್ನು ಅನ್ವಯಿಸದೇ ವಿಶೇಷ ಪ್ಯಾಕೇಜ್ ನಲ್ಲಿ ಕೇಂದ್ರ ಸರ್ಕಾರದಿಂದ ವ್ಯಾಕ್ಸಿನ್ ಗಳನ್ನು ಪಡೆದುಕೊಂ ಡು ಕೋವಿಶೀಲ್ಡ್ ಆಗಲಿ,ಕೋವ್ಯಾಕ್ಸಿನ್ ಆಗಲಿ ನಮ್ಮೆಲ್ಲಾ ಶಿಕ್ಷಕರಿಗೆ ತಾವುಗಳು ವ್ಯಾಕ್ಸಿನ್ ಗಳನ್ನು ಅತೀ ತುರ್ತಾಗಿ ಪರಿಗಣಿಸಿ ತಾವುಗಳು ವ್ಯಾಕ್ಸಿನ್ ಅನ್ನು ನೀಡುವಂತಹ ವ್ಯವಸ್ಥೆ ಮಾಡ
ಈಗಾಗಲೇ ನಾವು ಮಾರ್ಚ್ ತಿಂಗಳಿಂದ ಇಲ್ಲಿಯವರೆಗೆ ಸತತವಾಗಿ ಘನ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಾ ಬಂದಿದ್ದೇವೆ.ಆದಾಗ್ಯೂ ವ್ಯಾಕ್ಸಿನ್ ಇಲ್ಲದೇ 2 ನೇ ವಿಪರೀತ ಅಲೆಯಲ್ಲಿ ಸಾವಿರಕ್ಕೆ ಸಮೀಪ ಶಿಕ್ಷಕರು ಜೀವವನ್ನು ಕಳೆದುಕೊಂಡಿರುತ್ತಾರೆ.ಸನ್ಮಾನ್ಯರೇ ಲಸಿಕೆ ಕೊಡಿ, ನಮ್ಮೆಲ್ಲರ ಜೀವ ಉಳಿಸಿ.ಕಾರಣ ನಾವುಗಳು ಮುಂಬರುವ ದಿನಗಳಲ್ಲಿ ಶಾಲೆಯನ್ನು ಪ್ರವೇಶಿಸ ಬೇಕು ಕೋಟಿ ಕೋಟಿ ಮಕ್ಕಳ ಎದುರಿಗೆ ನಿಂತು ಬೋಧನೆಯನ್ನು ಮಾಡಬೇಕು.ಅದೇ ರೀತಿ ನಿತ್ಯ ಪ್ರಯಾಣಿಸಿ ಶಾಲೆಯಿಂದ ಮನೆಗೆ ಮನೆಯಿಂದ ಶಾಲೆಗೆ ಹೋಗಬೇಕಾಗುತ್ತದೆ. ಅನೇಕ ಯುವ ಸಂಪನ್ಮೂಲ ಶಿಕ್ಷಕ, ಶಿಕ್ಷಕಿ ಯರನ್ನು ನಾವು ಈಗಾಗಲೇ ಕಳೆದುಕೊಂಡಿ ದ್ದೇವೆ.ಮುಂಬರುವ ದಿನಗಳು ಹಾಗಾಗಬಾರದು. ನಮ್ಮ ಜೀವ ಉಳಿಸಿ, ನಮ್ಮ ಜೀವ ರಕ್ಷಿಸಿ ನಮ್ಮೆಲ್ಲರಿಗೂ ಕೇಂದ್ರ ಸರ್ಕಾರದಿಂದ ವಿಶೇಷ ಪ್ಯಾಕೇಜ್ ನಲ್ಲಿ ವ್ಯಾಕ್ಸಿನ್ ಗಳನ್ನು ಪಡೆದು ಕೊಂಡು ತಕ್ಷಣ ಪ್ರಥಮ ಆದ್ಯತೆಯಲ್ಲಿ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ವ್ಯಾಕ್ಸಿನ್ ಗಳನ್ನು ವಿತರಿಸುವಂತ ಕಾರ್ಯಕ್ರಮ ಆಗಬೇಕು. ನೀವು ನಮ್ಮಮೇಲೆ ಕರುಣೆ ತೋರುತ್ತೀರಿ ಅಂತ ಸರ್ವಮಾನ್ಯ ಸಚಿವರಲ್ಲಿ ಮತ್ತೊಮ್ಮೆ ಮೊಗದೊ ಮ್ಮೆ ನಾವು ವಿನಂತಿಸಿಕೊಳ್ಳುತ್ತಿದ್ದೇವೆ ಎಂದು ಸಂಘದ ಅಧ್ಯಕ್ಷರು ಹೇಳಿದ್ದಾರೆ.
ಶಿಕ್ಷಕರನ್ನು ಪ್ರಥಮ ಆದ್ಯತೆಯಲ್ಲಿ ತಾವುಗಳು ವಾರಿಯರ್ಸ್ ಅಂತ ಪರಿಗಣಿಸಿರುವುದರ ಜೊತೆಗೆ ನಮ್ಮೆಲ್ಲಾ ಶಿಕ್ಷಕರನ್ನ,ಈಗ ನಮ್ಮೆಲ್ಲಾ ಶಿಕ್ಷಕರು ಬೇರೆ ಬೇರೆ ಆರೋಗ್ಯ ಕೇಂದ್ರಗಳಿಗೆ ಮಾಹಿತಿಯಿಲ್ಲದೇ ಅಲೆದಾಡಿ ನಿರಾಶೆಗೊಂಡು ಬರುತ್ತಿದ್ದಾರೆ.ಅವರೊಟ್ಟಿಗೆ ನಮ್ಮೊಟ್ಟಿಗೆ ನಮ್ಮ ಕುಟುಂಬದ ಸದಸ್ಯರಿಗೆ ಹಿರಿಯ, ಕಿರಿಯ ನಮ್ಮ ಸದಸ್ಯರಿಗೆ ವ್ಯಾಕ್ಸಿನ್ ಕೊಡುವಂತ ವ್ಯವಸ್ಥೆಯ ನ್ನು ತುರ್ತು ಕ್ರಮವನ್ನು ಮಾಡಿ ಶಿಕ್ಷಣ ವ್ಯವಸ್ಥೆಗೆ ಅನುಕೂಲ ಮಾಡಿಕೊಡಬೇಕು ಶಿಕ್ಷಣದ ಸಾರ್ವತ್ರೀಕರಣಕ್ಕೆ ಅನುಕೂಲ ಮಾಡಿಕೊಡಬೇಕೆಂದು ತಮ್ಮಲ್ಲಿ ಮತ್ತೊಮ್ಮೆ ಮೊಗದೊಮ್ಮೆ ಕೈಮುಗಿದು ಈ ರಾಜ್ಯದ ಸಮಸ್ತ ಶಿಕ್ಷಕರ ಪರವಾಗಿ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಅಶೋಕ ಸಜ್ಜನ. ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಉಪ್ಪಿನ ಗೌರವಾಧ್ಯಕ್ಷರಾದ ಎಲ್ ಐ ಲಕ್ಕಮ್ಮನವರ ಕೋಶಾಧ್ಯಕ್ಷರಾದ ಎಸ್ ಎಫ್ ಪಾಟೀಲ್ ಕಾರ್ಯಾಧ್ಯಕ್ಷರಾದ ಶರಣಪ್ಪ ಗೌಡ ಆರ್ ಕೆ.ಮಹಾಪೋಷಕರಾದ ಪವಾಡಪ್ಪ ಕಾಂಬ್ಳೆ ಉಪಾಧ್ಯಕ್ಷರುಗಳಾದ ಗೋವಿಂದ ಜುಜಾರೆ ಹನುಮಂತಪ್ಪ ಮೇಟಿ. ಡಿ.ಎಸ್. ಭಜಂತ್ರಿ. ಕುಕನೂರ.ರಾಮಪ್ಪ ಹಂಡಿ.ಎಮ್ ಆಯ್ ಮುನವಳ್ಳಿ ಮಹ್ಮದ್ ರಫಿ.ಡಿ ಟಿ ಬಂಡಿವಡ್ಡರ ಶರಣಬಸವ ಬನ್ನಿಗೋಳ.ಎಂ.ವಿ ಕುಸುಮಾ. ರಾಜಶ್ರೀ ಪ್ರಭಾಕರ್ ಜಿ ಟಿ ಲಕ್ಷ್ಮೀದೇವಮ್ಮ ಕಲ್ಪನಾ ಚಂದನಕರ. ಶಿವಲೀಲಾ ಪೂಜಾರ ರವಿ ಬಂಗೆನ್ನವರ ಶಿವರಡ್ಡಿ .ಅಶೋಕ.ಬಿಸೆರೊಟ್ಟಿ ನಾಗರಾಜ್ ಆತಡಕರ ರುದ್ರೇಶ ಕುರ್ಲಿ, ಶಿವ ಲೀಲಾ ಪೂಜಾರ, ದೇವಿಕಾ ಕಮ್ಮಾರ. ನಾಗರಾ ಜ್ ಕೆ.ರೇಖಾದೇವಿ ಸೇರಿದಂತೆ ಸಂಘದ ಸರ್ವ ಸದಸ್ಯರ ಧ್ವ
ನಿ ಯಾಗಿ ವಿನಂತಿಸಿಕೊಂಡಿದ್ದಾರೆ