ತುಮಕೂರು –
ವಿಕೃತ ಮನಸ್ಸಿನ ಶಿಕ್ಷಕ ಗೋಪಾಲನ ವಿರುದ್ದ FIR ದಾಖಲಿಸಲು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಆಗ್ರಹವನ್ನು ಮಾಡಿದ್ದು ಈ ಒಂದು ಕುರಿತು ಧ್ವನಿ ಎತ್ತಿ ಒತ್ತಾಯವನ್ನು ಮಾಡಲಾಗಿದೆ
ತುಮಕೂರು ತಾಲ್ಲೂಕಿನ ಹೊಳಲಗುಂದ ಸರ್ಕಾರಿ ಪ್ರೌಢಶಾಲೆಯ ವಿಕೃತ ಮನಸ್ಸಿನ ಶಿಕ್ಷಕ ಗೋಪಾಲನ ವಿರುದ್ದ ಕೂಡಲೇ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷರಾದ ಪಿ.ಎಸ್. ಅನುಸೂಯದೇವಿ ರವರು ಒತ್ತಾಯಿಸಿದ್ದಾರೆ.
ಶಿಕ್ಷಕ ಗೋಪಾಲ್ ಎಂಬಾತ ಮದ್ಯಪಾನ ಮಾಡಿ ಶಾಲೆಗೆ ಆಗಮಿಸುವುದು ಶಾಲೆಗೆ ಬಂದು ಮಾನ ಸಿಕವಾಗಿ ನನಗೆ ಹಿಂಸೆ ನೀಡುವ ಅವಾಚ್ಯ ಶಬ್ಧಗಳಿಂದ ನಿಂದಿಸುವ ಅಲ್ಲದೇ ಒಂಟಿ ಇರುವ ಸಂದರ್ಭ ಕಾದು ನನಗೆ ಲೈಂಗಿಕ ದೌರ್ಜನ್ಯ ಎಸಗುವ ಛಾಳಿಯನ್ನು ಮತ್ತೆ ಮುಂದುವರೆಸಿ ದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಅದೇ ಶಾಲೆಯ ಶಿಕ್ಷಕಿ ಶ್ರೀಮತಿ ಸೌಮ್ಯ ರವರು ಶಿಕ್ಷಣ ಇಲಾಖೆಯ ತುಮಕೂರು ಜಿಲ್ಲಾ ಡಿಡಿಪಿಐ ರವರಿಗೆ ತಮ್ಮ ದೂರನ್ನು ನೀಡಿದ್ದರು.ಕಳೆದ ವರ್ಷದಿಂದಲೂ ಈ ಶಿಕ್ಷಕನ ದುರ್ನಡತೆಯಿಂದ ಶಿಕ್ಷಕಿ ಸೌಮ್ಯ ಮಾನಸಿಕವಾಗಿ ನೊಂದು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶಾಲಾ ಮುಖ್ಯೋಪಾಧ್ಯಾಯರಿಗೆ ದೂರು ಸಲ್ಲಿಸಿದ್ದರು
ವಿಚಾರಣೆ ನಡೆಸಿದ ಅಧಿಕಾರಿಗಳೆದುರು ಶಿಕ್ಷಕ ಗೋಪಾಲ್ ಈ ಘಟನೆ ಸಂಬಂಧ ತಪ್ಪೊಪ್ಪಿ ಕ್ಷಮೆ ಕೇಳಿದ್ದರು ಮುಂದೆ ಇಂತಹ ತಪ್ಪು ನಡೆಯದಂತೆ ಶಿಕ್ಷಕನಿಗೆ ಅಧಿಕಾರಿಗಳು ಬುದ್ಧಿಯೂ ಹೇಳಿದ್ದರು ಅಲ್ಲದೇ ಗ್ರಾಮಸ್ಥರಿಗೂ ಆತನ ವರ್ತನೆ ಮೇಲೆ ಅಸಮಾದಾನ ಇಂದಿಗೂ ಇದೆ ಅಂತೆ
ಆದಾಗ್ಯೂ ಛಾಳಿ ಬಿಡದ ಶಿಕ್ಷಕ ಪಾನಮತ್ತನಾಗಿ ಬಂದು ಶಿಕ್ಷಕಿ ಸೌಮ್ಯ ಅವರ ಮೇಲೆ ತನ್ನ ಹಳೇ ಛಾಳಿಯನ್ನು ಮುಂದುವರೆಸಿದ್ದ ಕಾರಣಕ್ಕೆ ಶಿಕ್ಷಕಿ ಸೌಮ್ಯ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದರು.ಇಲಾಖೆ ಅಧಿಕಾರಿಗಳು ಶಾಲೆಗೆ ಬೇಟಿ ನೀಡಿ ತನಿಖೆ ನಡೆಸಿದ್ದರೂ ಸಹಾ ಇದುವರೆಗೂ ಆತನ ಮೇಲೆ ಯಾವುದೇ ಶಿಸ್ತು ಕ್ರಮವಹಿಸದೇ ಇರುವುದು ಎಲ್ಲರಿಗೂ ನಾನಾ ಸಂಶಯ ಯೋಚನೆಗಳು ಮೂಡಿವೆ.
ಹೀಗಾಗಿ ಅಧಿಕಾರಿಗಳು ಕೂಡಲೇ
ಈ ಶಿಕ್ಷಕನ ದುರ್ನಡತೆ ವಿರುದ್ಧ ಕೂಡಲೇ ಕ್ರಮಕೈಗೊಳ್ಳಬೇಕು ಆತನ ಮೇಲೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಆ ವಿಕೃತ ಮನಸ್ಸಿನ ಶಿಕ್ಷಕನನ್ನು ಕೂಡಲೇ ಬಂಧಿಸಬೇಕು, ನೊಂದ ಶಿಕ್ಷಕಿಗೆ ಸೂಕ್ತ ನ್ಯಾಯ ಒದಗಿಸಬೇಕು
ಎಂದು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿ ಯರ ಸಂಘ ತುಮಕೂರು ಜಿಲ್ಲಾ ಘಟಕ ಆಗ್ರಹಿಸಿದೆ.
ಸುದ್ದಿ ಸಂತೆ ನ್ಯೂಸ್ ತುಮಕೂರು…..