ಧಾರವಾಡ –
ಧಾರವಾಡದಲ್ಲಿ ಕರ್ನಾಟಕ ರಾಜ್ಯ ಸರಕಾರಿ ವಾಹನ ಚಾಲಕರ ಸಂಘದ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ಸಂಘದ ಆಡಳಿತ ಮಂಡಳಿಯ ಸರ್ವ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆಯಿತು.ವಾಹನ ಚಾಲಕರ ನೌಕರರ ಸಂಘದ ಪದಾಧಿಕಾರಿಗಳ ನೌಕರರ ಆಯ್ಕೆ ಪುನಃ ಧಾರವಾಡ ದಲ್ಲಿ ನಡೆಯಿತು.
ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚಾಲಕರನ್ನು ಸಂಘಕ್ಕೆ ನೇಮಕ ಮಾಡಲಾಯಿತು. ನಗರದಲ್ಲಿ ನಡೆದ ಸಭೆಯಲ್ಲಿ ಪುನಃ ಸಂಘಕ್ಕೆ ಮರು ನೇಮಕ ಮಾಡಲಾಯಿತು.
ಸಂಘಕ್ಕೆ ಆಯ್ಕೆಯಾದವರು ವಿವರ
ಅಧ್ಯಕ್ಷರಾಗಿ ಬಿ ಡಿ ಅಬ್ಬಿಗೇರಿ ಅವರೋಧವಾಗಿ ಆಯ್ಕೆ ಮಾಡಲಾಯಿತು. ಇನ್ನೂ ಸಂಘದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಂಘದ ಸಂಘಟನೆ ಬಲಪಡಿಸಲು ಸಭೆಯಲ್ಲಿ ತಿರ್ಮಾನಿಸ ಲಾಯಿತು ಲೊಕೋಪಯೊಗಿ ಇಲಾಖೆಯಿಂದ ಬಿ ಎಸ್ ಪಾಟೀಲ ಗೌರವ ಅಧ್ಯಕ್ಷರಾಗಿ ಉಪಾಧ್ಯಕ್ಷ ರಾಗಿ ವಾಣಿಜ್ಯ ತೆರಿಗೆ ಇಲಾಖೆಯ ನವನಗರದಿಂದ ಶರಣಪ್ಪ ತಲ್ಲೂರ ಉಪಾಧ್ಯಕ್ಷರಾಗಿ ಆಯ್ಕೆ ಮಾಡ ಲಾಯಿತು.ಇನ್ನೂ ಆರೋಗ್ಯ ಇಲಾಖೆಯಿಂದ ಸಂಜಯ ಕುಲಕರ್ಣಿ ಮತ್ತು ಆರ್ ಐ ಮಿರಜಕರ ಕಾರ್ಯದರ್ಶಿ ಮತ್ತು ಸಹಕಾರ್ಯದರ್ಶಿಯಾಗಿ ಆಯ್ಕೆಯಾದರು. ಜಿಲ್ಲೆಯ ಸಂಘಟನೆಯನ್ನು ಉತ್ತ ಮ ಪಡಿಸಲು ಆರೋಗ್ಯ ಇಲಾಖೆಯ ಅಶೋಕ ಸಿಕ್ಕಿಮನಿ ಇವರನ್ನು ಸಂಘಟನಾ ಕಾರ್ಯದರ್ಶಿ ಯನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾ ಯಿತು. ಕೃಷಿ ಇಲಾಖೆಯಿಂದ ಎಮ್ ಎ ಬಾಬನ ವಾಲೆ ಖಜಾಂಚಿಯಾಗಿ ನಿರ್ದೇಶಕರಾಗಿ ಅರಣ್ಯ ಇಲಾಖೆಯ ಶಿವಪ್ಪ ಹಾತರಕಿ, ಧಾರವಾಡದ ಪಶು ಸಂಗೋಪನಾ ಇಲಾಖೆಯ ವಿ ಎಸ್ ಯಳಮಲಿ, ಆರೋಗ್ಯ ಇಲಾಖೆಯ ಎಮ್ ಎಲ್ ಶಿಂಧೆ. ವಾರ್ತಾ ಇಲಾಖೆಯ ಶರೀಫ್ ಚೋಪದಾರ, ಅಬಕಾರಿ ಇಲಾ ಖೆಯಿಂದ ರಮೇಶ ರಾಠೋಡ, ಹಾಗೂ ಕುಮಾರಿ ರೂಪಾ ಪವಾರ, ಜಿಲ್ಲಾ ನ್ಯಾಯಾಲಯ ಇಲಾಖೆ ಯಿಂದ ರಮೇಶ ಕದಂ. ಇವರೆಲ್ಲರೂ ನಿರ್ದೇಶಕ ರಾಗಿ ಆಯ್ಕೆಯಾದರು.ಇದೇ ವೇಳೆ ಸಂಘಕ್ಕೆ ಇತ್ತೀ ಚಿಗೆ ನೀರಾವರಿ ಇಲಾಖೆಯಿಂದ ನಿವೃತ್ತರಾಗಿದ್ದ ವಾಹನ ಚಾಲಕರಾದ ಜಿ ಹೆಚ್ ಉದಪುಡಿ ಇವರ ನ್ನು ಸಂಘಕ್ಕೆ ಆಪ್ತ ಸಲಹೆಗಾರರನ್ನಾಗಿ ನೇಮಕ ಮಾಡಲಾಯಿತು. ಸಂಘದ ಅಧ್ಯಕ್ಷರಾದ ಬಿ ಡಿ ಅಬ್ಬಿಗೇರಿ ಅವರು ಪ್ರಕಟಣೆಯಲ್ಲಿ ನೂತನವಾಗಿ ರಚನೆಗೊಂಡ ಸಂಘದ ಮಾಹಿತಿಯನ್ನು ತಿಳಿಸಿದ್ದಾ ರೆ.ಇನ್ನೂ ಇದೇ ವೇಳೆ ಧಾರವಾಡ ಜಿಲ್ಲೆಯ ವಿವಿಧ ತಾಲ್ಲೂಕುಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾ ಯಿತು.
ಹುಬ್ಬಳ್ಳಿ ತಾಲ್ಲೂಕು ಅಧ್ಯಕ್ಷರಾಗಿ ಕಿಮ್ಸ್ ಆಸ್ಪತ್ರೆಯ ಶರೀಫ್ ಸಾಬ್ ನದಾಫ್, ಕುಂದಗೋಳ ತಾಲ್ಲೂಕು ಅಧ್ಯಕ್ಷರಾಗಿ ಮೆಹಬೂಬ್ ಬಾರೂದ್ ವಾಲೆ, ಕಲಘ ಟಗಿ ತಾಲ್ಲೂಕಿನ ಅಧ್ಯಕ್ಷರಾಗಿ ಹನುಮಂತ ಬಳಗಲಿ, ನವಲಗುಂದ ತಾಲ್ಲೂಕಿನ ಅಧ್ಯಕ್ಷರಾಗಿಮಂಜುನಾಥ ನಂಜಯ್ಯನವರಮಠ, ಹೊಸದಾಗಿ ಅಸ್ಥಿತ್ವಕ್ಕೆ ಬಂದ ನೂತನ ಈ ಒಂದು ಸಂಘವನ್ನು ರಾಜ್ಯಾಧ್ಯಕ್ಷ ಹಾಲೇಶ್ ಮತ್ತು ಪದಾಧಿಕಾರಿಗಳು ಸಂಘವನ್ನು ಹೊಸಗಾಗಿ ರಚನೆ ಪುನರ್ ಸಂಘಕ್ಕೆ ಪದಾಧಿಕಾರಿ ಗಳನ್ನು ಆಯ್ಕೆ ಮಾಡಿ ಶುಭ ಹಾರೈಸಿದರು
ಇದೇ ವೇಳೆ ಕ.ರಾ.ಸರಕಾರಿ ನೌಕರ ಸಂಘದ ಜಿಲ್ಲಾ ಅಧ್ಯಕ್ಷ ಎಸ್.ಎಫ್.ಸಿದ್ದನಗೌಡ್ರ ಅತಿಥಿಗಳಾಗಿ ಮಾತನಾಡಿ, ವಾಹನ ಚಾಲಕರ ಸಂಘ ರಚನೆ ಪೂರ್ವದಲ್ಲಿಯೂ ಚಾಲಕರಿಗೆ ತೊಂದರೆ ಅನ್ಯಾಯ ಉಂಟಾದಾಗ ಸರಕಾರಿ ನೌಕರ ಸಂಘ ಮುಂದೆ ನಿಂತು ಪ್ರತಿಭಟಿಸಿಸಿದೆ. ಜಿಲ್ಲೆಯ ಎಲ್ಲ ಸರಕಾರಿ ನೌಕರರ ವೃತ್ತಿಗೌರವ, ಹಿತರಕ್ಷಣೆ ಕಾಪಾಡುವುದು ನಮ್ಮ ಆದ್ಯತೆ ಆಗಿದೆ.ಈ ನಿಟ್ಟಿನಲ್ಲಿ ಸಂಘದಿಂದ ಹೋರಾಟ ಸಹ ಮಾಡಲಾಗಿದೆ ಎಂದರು
ಕೇಂದ್ರ ಸಂಘದ ಗೌರವ ಅಧ್ಯಕ್ಷ ಶ್ರೀನಿವಾಸ, ಕೇಂದ್ರ ಸಂಘದ ಕಾರ್ಯಾಧ್ಯಕ್ಷ ತಿಮ್ಮರಾಜು, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ, ಖಂಜಾಚಿ ಗುಣಶೇಖರ, ಕಾರ್ಯದರ್ಶಿ ನಾಗರಾಜು, ಧಾರವಾಡ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಸಿದ್ಧನಗೌಡರ, ಬೆಳಗಾವಿ ಜಿಲ್ಲಾ ಅಧ್ಯಕ್ಷ ಸಂಜಯ ತಳವಾರ ಇವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ವಾಹನ ಚಾಲಕರ ಸಂಘದ ಧಾರವಾಡ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಶರಣಪ್ಪ ತಲ್ಲೂರ ಪ್ರಾರ್ಥಸಿದರು. ವಾರ್ತಾ ಇಲಾಖೆ ವಾಹನ ಚಾಲಕ ಎಮ್.ಎಸ್.ಚೊಪದಾರ ವಂದಿಸಿದರು. ಬಿ.ಡಿ.ಅಬ್ಬಿಗೇರಿ ಕಾರ್ಯಕ್ರಮ ನಿರೂಪಿಸಿದರು.