ಹುಬ್ಬಳ್ಳಿ –
ಪ್ರಾಥಮಿಕ ಶಾಲಾ ಶಿಕ್ಷಕರಂತೆ ರಾಜ್ಯದ ಪ್ರೌಢಶಾಲಾ ಶಿಕ್ಷಕರಿಗೆ ಬೇಸಿಗೆ ರಜೆಯನ್ನು ಮರುಪರಿಶೀಲಿಸು ವಂತೆ ಒತ್ತಾಯಿಸಿ ಹುಬ್ಬಳ್ಳಿಯಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಧಾರವಾಡ ಜಿಲ್ಲಾ ಘಟಕ ಇವರು ಪ್ರತಿಭಟನೆ ಮಾಡಿದರು.

ಹುಬ್ಬಳ್ಳಿಯ ಮಾನ್ಯ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರಿಗೆ ಮನವಿ ಸಲ್ಲಿಸಿ ಮೇ 1 ರಿಂದ ಜೂನ್ 15 ರವರೆಗೆ ರಜೆ ಘೋಷಿಸಲು ಮಾನ್ಯ ಆಯುಕ್ತರಿಗೆ ದೂರವಾಣಿ ಮೂಲಕ ಮಾತನಾಡಿ ತಿಳಿಸಿದ್ದಾರೆ. ಅವರು ರಜೆ ನೀಡಲು ಸ್ಪಂದಿಸಿದ್ದಾರೆ.
ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಜಿಲ್ಲಾ ಘಟಕ ಧಾರವಾಡದ ಅಧ್ಯಕ್ಷರಾದ ಎಫ್.ವ್ಹಿ . ಮಂಜಣ್ಣವರ,ಪ್ರಧಾನ ಕಾರ್ಯದರ್ಶಿಗಳಾದ
ಬಿ ಜಿ. ಬಶೆಟ್ಟಿ , ಕೋಶಾಧ್ಯಕ್ಷರಾದ,ಸಿ. ಸಿ ಹಿರೇಮಠ, ಹುಬ್ಬಳ್ಳಿ ಶಹರ ಅಧ್ಯಕ್ಷರಾದ ಎನ್.ವಿ ಬದ್ದಿ ಜೋಶಿ .ಧಾರವಾಡ ಶಹರದ ಪ್ರಧಾನ ಕಾರ್ಯದ ರ್ಶಿಗಳಾದ ಎಂ ಜಿ .ಹಿರೇಮಠ್, ಶಿವಾನಂದ ನಾಗೂ ರ,ಶಿವಾನಂದ ಮುತವಾಡ, ಎ ಟಿ. ಲಮಾಣಿ, ಶ್ರೀ ಪವನ್ ಕುಲಕರ್ಣಿ ಹಾಗೂ ಇತರ ಶಿಕ್ಷಕರು, ಪದಾಧಿ ಕಾರಿಗಳು ಹಾಜರಿದ್ದರು.ರಜೆ ತಾರತಮ್ಯ ಸರಿಪಡಿಸು ವ ಮನವಿಗೆ ಗ್ರಾಮೀಣ ಪ್ರಾ.ಪ್ರೌ.ಶಾ.ಸಂಘಗಳ ಬೆಂಬಲವನ್ನು ವ್ಯಕ್ತಪಡಿಸಿದೆ