ರಾಯಭಾಗ –
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಯಬಾಗ ತಾಲೂಕಿನ ಪ್ರಧಾನ ಕಾರ್ಯದರ್ಶಿ ಕುಮಾರ ಗಾಣಿಗೇರ ಮಾನವೀಯತೆ ಮೆರೆದಿದ್ದಾರೆ.ಹೌದು ಅರ್ಮಾನಸಾಬ ಹಾರೋಗೇರಿ ಯ ಈ ಬಾಲಕನ ತಾಯಿ ರೈಲು ಪ್ರಯಾಣ ಮಾಡು ವಾಗ ಆಕಸ್ಮಿಕವಾಗಿ ಕೊಂಕಳಿನಲ್ಲಿರುವ ಮಗು ಜಾರಿ ಬಿದ್ದು ರೈಲಿಗೆ ಸಿಲುಕಿ ಒಂದು ಕಾಲು ತುಂಡ ರಿಸಿ ಹೋಗಿತ್ತು ನಾಲ್ಕೈದು ವರ್ಷಗಳ ಕಾಲ ಆ ಮಗುವನ್ನು ಜೋಪಾನ ಮಾಡಿದ ತಂದೆ ತಾಯಿಗೆ ನಮ್ಮ ಮಗು ಎಲ್ಲರಂತೆ ಓಡಾಡಬೇಕು ಆಟ ಆಡಬೇಕು ಅಂತ ಮನದಲ್ಲಿ ಕೊರಗುತ್ತಾ ಕುಳಿತಾಗ, ಅದೇ ಮಾರ್ಗವಾಗಿ ಹೋಗುತ್ತಿದ್ದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ. (KSPSTA) ಕಾಗವಾಡ ತಾಲೂಕಿನ ಪ್ರದಾನ ಕಾರ್ಯದರ್ಶಿ ಕುಮಾರ ಗಾಣಿಗೇರ ಈ ಬಾಲಕನ ತಂದೆ ತಾಯಿಗೆ ವಿಚಾರಿಸಿದಾಗ ನಿಜ ಸಂಗತಿ ಅರಿತು ಈ ಬಾಲಕನಿಗೆ ಧಾರವಾಡದ ನವರಸ ಸ್ನೇಹಿತರ ವೇದಿಕೆ ಹಾಗೂ ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ಪ್ರಮುಖರಾದ ಬಾಬಾಜಾನ ಮುಲ್ಲಾ ಎಲ್ ಐ ಲಕ್ಕಮ್ಮನವರ ಇವರಿಗೆ ಈ ವಿಷಯವನ್ನು ತಿಳಿಸಿ ದಾಗ ತಕ್ಷಣ ಸ್ಪಂದಿಸಿ VISTEON ಕಂಪನಿಯ ಸಹಾಯದೊಂದಿಗೆ ಈ ಹುಡುಗನ ಕಾಲಿನ ಕೆಲಸ ನಡಿದಿದೆ.

ಶೀಘ್ರದಲ್ಲೇ ಈ ಬಾಲಕನಿಗೆ ಕೃತಕ ಕಾಲು ಜೋಡಣೆ ಮಾಡಿ ಕೊಡ್ಡುತ್ತೇವೆ ಎಂದು ABTSMS ನ ರಾಜ್ಯಾ ದ್ಯಕ್ಷ ಚಲನಚಿತ್ರ ನಿರ್ದೇಶಕ ಜಗದೀಶ್ ಅಮಾತಿಗೌ ಡರ,ನಮ್ಮ ಕರೆಗೆ ಓಗೊಟ್ಟು ಈ ಬಾಲಕನ ಕಾಲು ಜೋಡಿಸಿಕೊಡುವ ಕಾರ್ಯವನ್ನು ಮಾಡುತ್ತಿದ್ದಾರೆ ಟೆಕ್ನಿಕಲ್ ಟೀಮ್ ಅಳತೆ ತಗೊಂಡಿದ್ದು ಈ ಬಾಲಕ ನಿಗೆ ಕೃತಕ ಕಾಲು ಜೋಡಿಸುವ ಕಾರ್ಯ ನಡೆದಿದೆ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಧಾರವಾ ಡದ ಅಕ್ಷರತಾಯಿ ಲೂಸಿ ಸಾಲ್ಡಾನ ಮಹಾಪೋಷ ಕರು ಲೂಸಿ ಸಾಲ್ಡಾನ ಡಾ ರೇಣುಕಾ ಅಮಲ್ಜರಿ, ವಿದ್ಯಾ ನಾಡಿಗೇರ, ಕರ್ನಾಟಕ ರಾಜ್ಯ ಶಿಕ್ಷಕರ ಸಂಘಗಳ ಪರಿಷತ್ತಿನ ರಾಜ್ಯಾದ್ಯಕ್ಷ ಗುರು ತಿಗಡಿ ಪ್ರದಾನ ಕಾರ್ಯದರ್ಶಿ ಅಶೋಕ ಸಜ್ಜನ ಕೋಶಾ ದ್ಯಕ್ಷ ಶಂಕರ ಘಟ್ಟಿ, ಎಸ್ ಎಫ್ ಪಾಟೀಲ ಮಲ್ಲಿಕಾ ರ್ಜುನ ಉಪ್ಪಿನ ಚಂದ್ರಶೇಖರ ಶೆಟ್ರು, ಶರಣಬಸವ ಬನ್ನಿಗೋಳ, ಆರ್ ನಾರಾಯಣಸ್ವಾಮಿ ಚಿಂತಾಮ ಣಿ ಸೇರಿದಂತೆ ಅನೇಕರು ಶ್ಲಾಘಿಸಿದರು.
