ಬೆಂಗಳೂರು –

ಪ್ರತಿವರ್ಷ ಶಿಕ್ಷಕರಿಂದ 200 ರೂಪಾಯಿ ವಂತಿಗೆ ಪಡೆದು ನೌಕರರಿಗೆ ಮಾರಕವಾದ NPS ರದ್ದು ಪಡಿಸಿ,ಹಳೆ ಪಿಂಚಣಿ ಜಾರಿಗೊಳಿಸಲು ಆಗ್ರಹಿಸಿ ಇಲ್ಲಿಯವರೆಗೆ ಹೋರಾಟ ಮಾಡಿಲ್ಲ

ಇವಾಗ ಟ್ವೀಟರ್ ಮೂಲಕ ರಾಜ್ಯಸರ್ಕಾರಿ NPS ನೌಕರ ಸಂಘ ಕರೆ ನೀಡಿದ ಹೋರಾಟಕ್ಕೆ ಬೆಂಬಲ ನೀಡಿರುವುದಿಲ್ಲ. ಇದು NPS ನೌಕರರ ಕೋಪಕ್ಕೆ ಕಾರಣವಾಗಿದೆ.

ಇದು ಕೇವಲ ಸದಸ್ಯತ್ವ ಪಡೆಯಲು ಹುಟ್ಟಿದ ಸಂಘ ವೆಂಬ ಮನೋಭಾವ ಶಿಕ್ಷಕರಲ್ಲಿ ಮೂಡಿದೆ.ಶಿಕ್ಷಕರು ಪರಸ್ಪರ 200 ಸಂಘ ವೆಂದು,ಸಾಮಾಜಿಕ ಜಾಲತಾ ಣದಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಿರುವರು.
ರಾಜ್ಯದ ವಿವಿಧ ವೃಂದ ಸಂಘಗಳು ಬೆಂಬಲ ಸೂಚಿ ಸಿದ್ದಾರೆ ಆದರೆ ಮಾನ್ಯತೆ ಪಡೆದ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೇಂದ್ರ ಕಚೇರಿ ಬೆಂಗಳೂರು ಇವರು ಮಾತ್ರ ಬೆಂಬಲ ಸೂಚಿಸದೇ ತಟಸ್ಥರಾಗಿದ್ದು ರಾಜ್ಯದ ನೂತನ ಪಿಂಚ ಣಿ ಯೋಜನೆಗೆ ಒಳಪಡುವ ಶಿಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.ವಂತಿಗೆ ವಸೂಲಿಗೆ ಸೀಮಿತವಾದ (KSPSTA )ಶಿಕ್ಷಕರ ಸಂಘ ಎಂಬ ಮಾತುಗಳು ಈಗ ರಾಜ್ಯದ ಮೂಲೆ ಮೂಲೆಗಳಲ್ಲಿ ಕೇಳಿ ಬರುತ್ತಿದೆ
