ಧಾರವಾಡ –
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯು ತ್ತಿರುವ NPS ನೌಕರರ ಪ್ರತಿಭಟನೆ 10 ನೇ ದಿನಕ್ಕೆ ಕಾಲಿಟ್ಟಿದ್ದು ಇನ್ನೂ ಈ ಒಂದು ಪ್ರತಿಭಟನೆ ಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಅಪಾರ ಸಂಖ್ಯೆ ಯಲ್ಲಿ ಎನ್ ಪಿಎಸ್ ನೌಕರರು ಬರುತ್ತಿದ್ದು ಇನ್ನೂ ಈ ಒಂದು ನೌಕರರ ಹೋರಾಟಕ್ಕೆ ಶಿಕ್ಷಕರ ಸರ್ಕಾರಿ ನೌಕರರ ಸಮಸ್ಯೆ ಗಳಿಗೆ ಸ್ಪಂದಿಸುವ ಉತ್ಸಾಹಿ ನಾಯಕರಾದ ಬಸವರಾಜ ಗುರಿಕಾರ ನೆರವಾಗಿದ್ದಾರೆ.
AIPTF ದ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಬಸವರಾಜ ಗುರಿಕಾರ್ ಹಳೆ ಪಿಂಚಣಿ ಜಾರಿಗಾಗಿ ಡಿಸೆಂಬರ್ 19ರಿಂದ ಆರಂಭವಾಗಿರುವ ಮಾಡು ಇಲ್ಲವೇ ಮಡಿ ಅನಿರ್ದಿಷ್ಟಾವಧಿ ಹೋರಾಟದಲ್ಲಿ ನಿರಂತರವಾಗಿ ಪಾಲ್ಗೊಂಡಿದ್ದಲ್ಲದೇ ದಿನಾಂಕ 29ರಂದು ಧಾರವಾಡ ಜಿಲ್ಲೆಯಿಂದ ಧಾರವಾಡ ಜಿಲ್ಲೆಯ ನೌಕರರು ಹೊರಟಿದ್ದು ಮನವಿಗೆ ಸ್ಪಂದಿಸಿ ತಾವೇ ಕರೆ ಮಾಡಿ ಒಂದು ಬಸ್ಸಿನ ವ್ಯವಸ್ಥೆಯನ್ನು ಮಾಡಿದ್ದಾರೆ.
ಜಿಲ್ಲಾ ಘಟಕಕ್ಕೆ ಮಾಡಿಕೊಡುವುದಾಗಿ ತಿಳಿಸಿದ್ದ ಲ್ಲದೇ ಏನಾದರೂ ಅವಶ್ಯಕತೆ ಇದ್ದಲ್ಲಿ ಮತ್ತೆ ಸಹಾಯ ಸಹಕಾರ ನೀಡುವುದಾಗಿ ತಿಳಿಸಿದರು. ನೆರವಾದ ಬಸವರಾಜ ಗುರಿಕಾರ್ ಅವರಿಗೆ ಜಿಲ್ಲೆಯ ಸಮಸ್ತ ನೌಕರರ ಪರವಾಗಿ ಧನ್ಯವಾದ ಗಳನ್ನು NPS ನೌಕರರ ಸಂಘದ ಎಲ್ಲಾ ಪದಾಧಿ ಕಾರಿಗಳು ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.