ಹುಬ್ಬಳ್ಳಿ – ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ಹುಬ್ಬಳ್ಳಿಯಲ್ಲಿ ನಡೆಯಿತು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಶಾಸಕರಾದ ಶಂಕರ ಬ.ಪಾಟೀಲ ಮುನೇನಕೊಪ್ಪ ಇವರು ಈ ಒಂದು ಸಭೆಯನ್ನು ಆಯೋಜಿಸಿದ್ದರು.ಇವರೊಂದಿಗೆ ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ್ ಅಬ್ಬಯ್ಯ ಇವರುಗಳ ನೇತ್ರತ್ವದಲ್ಲಿ ಈ ಒಂದು ಸಭೆ ನಡೆಯಿತು.
ಸಭೆಯಲ್ಲಿ 1206.97 ಕೋಟಿ ರೂಪಾಯಿ ವೆಚ್ಚದ ಕರ್ನಾಟಕ ರಾಜ್ಯದ ಹುಬ್ಬಳ್ಳಿ-ಧಾರವಾಡ ನಗರಕ್ಕೆ ನಿರಂತರ 24X7 ಒತ್ತಡ ಸಹಿತ ನೀರು ಸರಬರಾಜು ವ್ಯವಸ್ಥೆಯ ಪರಿಣಾಮಕಾರಿ ವೆಚ್ಚ ಮತ್ತು ಸುಸ್ಥಿರ ಉನ್ನತೀಕರಣಕ್ಕಾಗಿ ವಿನ್ಯಾಸ, ನಿರ್ಮಾಣ ಕಾರ್ಯಾಚರಣೆ ಮತ್ತು ನಿರ್ವಹಣೆ ಹಾಗೂ ವ್ಯವಸ್ಥೆಯ ವರ್ಗಾವಣೆ ಯೋಜನೆ ಕುರಿತು ವಿವರವಾಗಿ ಚರ್ಚಿಸಿ, ಸಮಾಲೋಚನೆ ನಡೆಸಿ, ಅಧಿಕಾರಿಗಳಿಂದ ವಿವರ ಪಡೆಯಲಾಯಿತು. ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ಕೂಡ ನೀಡಲಾಯಿತು.
ಈ ಸಭೆಯಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ,ಶಾಸಕರಾದ ಅರವಿಂದ್ ಬೆಲ್ಲದ , ಪ್ರಸಾದ್ ಅಬ್ಬಯ್ಯ, ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ಪಾಲಿಕೆ ಆಯುಕ್ತರಾದ ಸುರೇಶ್ ಇಟ್ನಾಳ್ ಹಾಗೂ ಇನ್ನಿತರ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.