ಧಾರವಾಡ –
ಹೋಳಿ ಹಬ್ಬದ ಆಚರಣೆಯ ಸಂಭ್ರಮದಲ್ಲಿದ್ದ ಯುವಕರ ಬೈಕ್ ವೊಂದು ಸ್ಕೀಡ್ ಆದ ಘಟನೆ ಧಾರವಾಡದಲ್ಲಿ ನಡೆದಿದೆ.ಧಾರವಾಡದ ಭಾರತಿ ನಗರದಲ್ಲಿ ಈ ಒಂದು ಘಟನೆ ನಡೆದಿದೆ. ಬೈಕ್ ಮೇಲೆ ಹೊರಟಿದ್ದ ಸಮಯದಲ್ಲಿ ವೇಗವಾಗಿ ಹೊರ ಡಿದ್ದ ಬೈಕ್ ಸ್ಕೀಡ್ ಆಗಿ ಬಿದ್ದಿದೆ ಘಟನೆಯಲ್ಲಿ ಕಾರ್ತಿ ಕ್ ಎಂಬ ಯುವ ಗಂಭೀರವಾಗಿ ಗಾಯಗೊಂ ಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬೈಕ್ ರೈಡ್ ಮಾಡುತ್ತಿದ್ದ ಕಾರ್ತಿಕ್ ಮುಖಕ್ಕೆ ಗಂಭೀರವಾದ ಗಾಯಗಳಾಗಿದ್ದು ಕೂಡಲೇ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಯನ್ನು ನೀಡಿ ನಂತರ ಕಿಮ್ಸ್ ಆಸ್ಪತ್ರೆಗೆ ಶಿಪ್ಟ್ ಮಾಡಲಾಗಿದೆ. ಇನ್ನೂ ಸ್ಥಳಕ್ಕೆ ಭೇಟಿ ನೀಡಿದ ಧಾರವಾಡ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ರವಿರಾಜ ಪಾಟೀಲ್ ಈರಣ್ಣ ಲಕ್ಕಮ್ಮನವರ ಮಾಹಿತಿ ಪಡೆದುಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ