ಧಾರವಾಡ –
ಧಾರವಾಡದ ಭಾರತಿ ನಗರ ಕ್ರಾಸ್ ನಲ್ಲಿ ಬೈಕ್ ಸ್ಕೀಡ್ ಆಗಿ ತೀವ್ರವಾಗಿ ಗಾಯಗೊಂಡಿದ್ದ ಕಾರ್ತಿಕ್ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.ಇಂದು ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಗೆಳಯನೊಂದಿಗೆ ಬೈಕ್ ಮೇಲೆ ಹೊರಟಿದ್ದ ಸಮಯದಲ್ಲಿ ಬೈಕ್ ಸ್ಕೀಡ್ ಆಗಿತ್ತು ತೀವ್ರವಾಗಿ ಗಾಯಗೊಂಡ ಕಾರ್ತಿಕ್ ನನ್ನು ಕೂಡಲೇ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖ ಲು ಮಾಡಲಾಯಿತು. ಕಿಮ್ಸ್ ಆಸ್ಪತ್ರೆಗೆ ಕರೆದುಕೊಂ ಡು ಬರುತ್ತಿದ್ದಂತೆ ಚಿಕಿತ್ಸೆ ಫಲಿಸದೇ ಕಾರ್ತಿಕ್ ಸಾವಿ ಗೀಡಾಗಿದ್ದಾರೆ.

ಕಾರ್ತಿಕ್ ಹಾವೇರಿ ಜಿಲ್ಲೆಯ ಹಿರೇಕೆರೂರ ನಿವಾಸಿ ಯಾಗಿದ್ದು MSc ಅಧ್ಯಯನ ಮಾಡಲು KUD ಗೆ ಪ್ರವೇಶ ಪಡೆದಿದ್ದನು. ಇಂದು ಹೋಳಿ ಹಬ್ಬದ ಸಂದರ್ಭದಲ್ಲಿ ಗೆಳೆಯರೊಂದಿಗೆ ಹೊರಟಿದ್ದ ಸಮ ಯದಲ್ಲಿ ಈ ಒಂದು ಅಪಘಾತವಾಗಿದೆ